ETV Bharat / city

ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ, ಸಿಡಿ‌ ಷಡ್ಯಂತ್ರಕ್ಕೆ ಸಿಲುಕೋ ವ್ಯಕ್ತಿ ನಾನಲ್ಲ: ರೇಣುಕಾಚಾರ್ಯ

ಸಿಡಿ ಸೇರಿದಂತೆ ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ. ಹಿಂದೆ ಜೀವನದಲ್ಲಿ ಯಾವ ತಪ್ಪು ಮಾಡಿದ್ದೆ, ಆ ತಪ್ಪಿನ ಅರಿವು ನನಗಾಗಿದೆ. ಹಾಗಾಗಿ ಷಡ್ಯಂತ್ರಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ನಾನು ತಪ್ಪು ಮಾಡಿದ್ರೆ, ನನ್ನ ಕುಟುಂಬ ಸದಸ್ಯರು ಕೇಳುತ್ತಾರೆ. ಶಿಕ್ಷ ಕೊಡುತ್ತಾರೆ ಎಂದು ಎಂಪಿ ರೇಣುಕಾಚಾರ್ಯ ಹೇಳಿದರು.

MP Renukacharya
ರೇಣುಕಾಚಾರ್ಯ
author img

By

Published : Jul 22, 2021, 11:00 AM IST

ಬೆಂಗಳೂರು: ಜೀವನದಲ್ಲಿ ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ. ಹಾಗಾಗಿ, ಸಿಡಿಯಂತಹ ಷಡ್ಯಂತ್ರದಲ್ಲಿ ಸಿಲುಕುವ ವ್ಯಕ್ತಿ ನಾನಲ್ಲ. ನಾನು ಯಾವುದೇ ಬ್ಲಾಕ್ ಮೇಲ್​ಗಳಿಗೂ ಹೆದರಲ್ಲ, ವಿಚಲಿತನಾಗುವುದೂ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹಳೆ ಪ್ರಕರಣವನ್ನು ಉಲ್ಲೇಖಿಸಿ ಸಿಡಿ ಕೇಸ್ ಇದೆ ಎಂದು ಬರುತ್ತಿರುವ ಸುದ್ದಿಗಳನ್ನು ತಿರಸ್ಕರಿಸಿದ್ದಾರೆ.

ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ, ಸಿಡಿ‌ ಷಡ್ಯಂತ್ರಕ್ಕೆ ಸಿಲುಕೋ ವ್ಯಕ್ತಿ ನಾನಲ್ಲ: ರೇಣುಕಾಚಾರ್ಯ

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಸೇರಿದಂತೆ ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ. ಹಿಂದೆ ಜೀವನದಲ್ಲಿ ಯಾವ ತಪ್ಪು ಮಾಡಿದ್ದೆ, ಆ ತಪ್ಪಿನ ಅರಿವು ನನಗಾಗಿದೆ. ಹಾಗಾಗಿ ಷಡ್ಯಂತ್ರಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ನಾನು ತಪ್ಪು ಮಾಡಿದ್ರೆ, ನನ್ನ ಕುಟುಂಬ ಸದಸ್ಯರು ಕೇಳುತ್ತಾರೆ. ಶಿಕ್ಷ ಕೊಡುತ್ತಾರೆ ಎಂದರು.

ಯಾರಾದರೂ ಬ್ಲಾಕ್​ ಮೇಲ್​ ಮಾಡಿದರೆ, ಈ ರಾಜಕಾರಣದಲ್ಲಿ ರೇಣುಕಾಚಾರ್ಯ ಯಾವತ್ತೂ ಅದೆಕ್ಕೆಲ್ಲಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಾನು ನಾನಾಗಿಯೇ ಇರುತ್ತೇನೆ, ಯಾವತ್ತೂ ವಿಚಲಿತನಾಗಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದರೆ, ಆ ತಪ್ಪಿನ ಅರಿವನ್ನು ಅರಿತುಕೊಂಡು ನಾನೊಬ್ಬ ಪ್ರಬುದ್ಧ ಮನುಷ್ಯನಾಗಿ ರಾಜಕಾರಣ ಮಾಡುತ್ತೇನೆಯೇ ಹೊರತು ಬ್ಲಾಕ್ ಮೇಲ್ ತಂತ್ರಗಾರಿಕೆ ಯಾವತ್ತೂ ನನ್ನ ಬಳಿ ನಡೆಯುವುದಿಲ್ಲ ಎಂದರು.

ಸುದ್ದಿ ಪ್ರಸಾರಕ್ಕೆ ತಡೆ ತರುವ ಬಗ್ಗೆ ಯೋಚಿಸಿಲ್ಲ:

ಕೆಲ ಸಚಿವರು, ರಾಜಕಾರಣಿಗಳು ತಮ್ಮ ತೇಜೋವಧೆ ಮಾಡುವಂತಹ ವರದಿ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ ತಂದ ರೀತಿ ನೀವು ತರುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಆ ಬಗ್ಗೆ ಇದುವರೆಗೂ ಯೋಚನೆ ಮಾಡಿಲ್ಲ. ನನಗೆ ಏನೂ ಗೊತ್ತಿಲ್ಲ. ನಾನು ನಮ್ಮ ರಾಜ್ಯ ನಾಯಕರನ್ನು, ಸಚಿವರನ್ನು ಭೇಟಿ ಮಾಡಲು ಬಂದಿದ್ದೇನೆ ಅಷ್ಟೇ. ಮಾಧ್ಯಮಗಳು ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ನನ್ನನ್ನು ಕೇಳಿದಾಗ ನನಗೆ ಆಶ್ಚರ್ಯವಾಗಿದೆ. ನಾನು ಎಂದಿಗೂ ವಿಚಲಿತರಾಗುವುದಿಲ್ಲ ಎಂದರು.

ಇದನ್ನೂ ಓದಿ: ಕೊರೊನಾ ಭೀತಿ.. ಒಂದೂವರೆ ವರ್ಷದಿಂದ ಗೃಹಬಂಧನ ವಿಧಿಸಿಕೊಂಡ ಕುಟುಂಬ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.