ಬೆಂಗಳೂರು: ಸಿಎಂ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಇಲಾಖೆಗಳ ಜವಾಬ್ದಾರಿ ಹಂಚಿಕೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. 13 ಹಿರಿಯ ಅಧಿಕಾರಿಗಳಿಗೆ ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿ ನಿಯೋಜನೆಗೊಳಿಸಲಾಗಿದೆ.
1. ಸಿಎಂ ಹೆಚ್ಚುವರಿ ಕಾರ್ಯದರ್ಶಿ ಪಿ. ರವಿಕುಮಾರ್ಗೆ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ, ಹಣಕಾಸು, ಇಂಧನ, ನಗರಾಭಿವೃದ್ಧಿ, ನೀತಿ ನಿರೂಪಣೆಗೆ ಸಂಬಂಧಿಸಿದ ಎಲ್ಲಾ ಕಡತಗಳ ಜವಾಬ್ದಾರಿ ನೀಡಲಾಗಿದೆ. ಜತೆಗೆ ಸಂಪುಟದ ವಿಷಯಗಳು, ಕೇಂದ್ರ ಸರ್ಕಾರದೊಂದಿಗೆ ಸಮನ್ವಯತೆ, ಎಲ್ಲಾ ಸೇವಾ ವಿಚಾರಗಳು, ವರ್ಗಾವಣೆ ಸಂಬಂಧ ಜವಾಬ್ದಾರಿಯನ್ನು ವಹಿಸಲಾಗಿದೆ.
2. ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಸಿ ಕಳಸದಗೆ ಆಡಳಿತ ಸಿಬ್ಬಂದಿ ಸುಧಾರಣೆ ( ಕೆಎಎಸ್ ಅಧಿಕಾರಿಗಳು ಮಾತ್ರ), ಗೃಹ, ಜಲಸಂಪನ್ಮೂಲ, ವಾಣಿಜ್ಯ ಮತ್ತು ಕೈಗಾರಿಕೆ, ಸಣ್ಣ ಕೈಗಾರಿಕೆ, ಕಂದಾಯ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ,ಐಟಿಬಿಟಿ,ಪ್ರಾಥಮಿಕ ಮತ್ತು ಪ್ರೌಢ, ವೈದ್ಯಕೀಯ ಶಿಕ್ಷಣ, ಸಾರ್ವಜನಿಕ ಉದ್ಯಮಗಳು, ಮೂಲ ಸೌಕರ್ಯಾಭಿವೃದ್ದಿ, ಕಾನೂನು ಮತ್ತು ಸೌಕರ್ಯ, ಸಕ್ಕರೆ ಸೇರಿದಂತೆ 24 ಇಲಾಖೆಗಳ ಉಸ್ತುವಾರಿ ನೀಡಲಾಗಿದೆ.
3. ಸಿಎಂ ಹೆಚ್ಚುವರಿ ಕಾರ್ಯದರ್ಶಿ ವಿ.ಪಿ ಇಕ್ಕೇರಿ ಅವರಿಗೆ ಸಾರಿಗೆ, ಕಾರ್ಮಿಕ, ಉನ್ನತ ಶಿಕ್ಷಣ, ಸಹಕಾರ ಇಲಾಖೆಗಳು ಸೇರಿ 16 ಇಲಾಖೆಗಳ ಜವಾಬ್ದಾರಿ ವಹಿಸಲಾಗಿದೆ.
4. ಸಿಎಂ ಜಂಟಿ ಕಾರ್ಯದರ್ಶಿ ಎಂ.ಕೆ ಶ್ರೀರಂಗಯ್ಯಗೆ ಕೃಷಿ, ಪ್ರವಾಸೋದ್ಯಮ, ಜವಳಿ ಸೇರಿ 11 ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ.
5. ಸಿಎಂ ಆಪ್ತ ಕಾರ್ಯದರ್ಶಿಯಾದ ರಾಜಪ್ಪಗೆ ವಿಐಪಿ ಹಾಗೂ ಸಾರ್ವಜನಿಕ ಸಮಾರಂಭಗಳ ಜವಾಬ್ದಾರಿ ನೀಡಲಾಗಿದೆ.
6. ಸಿಎಂ ಜಂಟಿ ಕಾರ್ಯದರ್ಶಿ ಪಿ.ಎ ಗೋಪಾಲ್ಗೆ ಸಿಎಂ ವೈದ್ಯಕೀಯ ಪರಿಹಾರ ನಿಧಿ ಜವಾಬ್ದಾರಿ ನೀಡಲಾಗಿದೆ.
7. ಸಿಎಂ ಉಪ ಕಾರ್ಯದರ್ಶಿ ವಿಶ್ವನಾಥ್ ಪಿ ಹಿರೇಮಠಗೆ ಆಡಳಿತ ವಿಚಾರಗಳ ಜವಾಬ್ದಾರಿ ಕೊಡಲಾಗಿದೆ.
8. ಸಿಎಂ ಉಪ ಕಾರ್ಯದರ್ಶಿ ಎ. ಆರ್ ರವಿ ಅವರಿಗೆ ಸಿಎಂ ಕಚೇರಿ ಕಂಪ್ಯುಟರ್ ಜವಾಬ್ದಾರಿ ಸೇರಿ ಶಾಸಕರುಗಳ ಅಭಿವೃದ್ಧಿ ಯೋಜನೆಗಳ ಜವಾಬ್ದಾರಿ ವಹಿಸಲಾಗಿದೆ.
9.ಸಿಎಂ ವಿಶೇಷಾಧಿಕಾರಿಯಾದ ಡಾ. ಎ ಲೋಕೇಶ್‌ಗೆ ಸಿಎಂ ಗೃಹ ಕಚೇರಿ ಜವಾಬ್ದಾರಿ ನೀಡಲಾಗಿದೆ.
10. ಸಿಎಂ ವಿಶೇಷಾಧಿಕಾರಿಯಾದ ವಿಜಯ್ ಮಹಾಂತೇಶ್ ದಾನಮ್ಮನವರಿಗೆ ಮುಖ್ಯಮಂತ್ರಿಗಳ ಶಿಷ್ಟಾಚಾರ ವಿಭಾಗದ ಉಸ್ತುವಾರಿ ನೀಡಲಾಗಿದೆ.
11. ಸಿಎಂ ವಿಶೇಷಾಧಿಕಾರಿ ಚನ್ನಬಸವೇಶಗೆ ಸಿಎಂ ಅವರ ಪ್ರವಾಸ ಕಾರ್ಯಕ್ರಮ, ದಿನಚರಿ, ಸಿಎಂ ಸಭೆಗಳ ಜವಾಬ್ದಾರಿ ವಹಿಸಲಾಗಿದೆ.
12. ಸಿಎಂ ವಿಶೇಷಾಧಿಕಾರಿ ಎಚ್.ಎಸ್ ಸತೀಶ್ಗೆ ಸಿಎಂ ಗೃಹ ಕಚೇರಿ ಜವಾಬ್ದಾರಿ ನೀಡಲಾಗಿದೆ.
13. ಸಿಎಂ ವಿಶೇಷಾಧಿಕಾರಿ ಕೆ ಸಿ ವಿರುಪಾಕ್ಷಗೆ ಸಿಎಂ ಗೃಹ ಕಚೇರಿ ಜವಾಬ್ದಾರಿ ನೀಡಲಾಗಿದೆ.