ETV Bharat / city

ಅನುಚಿತವಾಗಿ ವರ್ತಿಸಿದವರ ವಿರುದ್ಧ ಕ್ರಮ: ಗಡಿ ವಿವಾದ ಕುರಿತು ಶೀಘ್ರ ಮುಖ್ಯಮಂತ್ರಿಗಳ ಸಭೆ

ಕೆಲವೆಡೆ ಯುವಕರು ಅಸಭ್ಯವಾಗಿ ವರ್ತಿಸಿರುವ ಸಣ್ಣ ಪುಟ್ಟ ಪ್ರಕರಣಗಳು ಬಿಟ್ಟರೆ ನಗರದಲ್ಲಿ ಹೊಸ ವರ್ಷದ ಸಂಭ್ರಮ ಅದ್ದೂರಿಯಾಗಿ ನಡೆಯಿತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

Home minister Basavaraj bommayi
ಗೃಹ ಸಚಿವ ಬಸವರಾಜ ಬೊಮ್ಮಾಯಿ‌
author img

By

Published : Jan 1, 2020, 1:39 PM IST

ಬೆಂಗಳೂರು: ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಪಾನಮತ್ತರಾಗಿ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ ಸಣ್ಣಪುಟ್ಟ ಪ್ರಕರಣಗಳು ಬಿಟ್ಟರೆ ನಗರದಲ್ಲಿ ಹೊಸ ವರ್ಷದ ಸಂಭ್ರಮ ಅದ್ದೂರಿಯಾಗಿ ನಡೆಯಿತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಹೊಸ ವರ್ಷದ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಇದೆ. ನೂತನ ವರ್ಷದ ಆಚರಣೆಯಲ್ಲಿ ಅನುಚಿತವಾಗಿ ವರ್ತಿಸಿದವರ ಮಾಹಿತಿ, ಹಾಗೆಯೇ ಘಟನೆಗಳ ಕುರಿತು ‌ವಿವರ ಸಂಗ್ರಹಿಸುತ್ತೇನೆ. ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತೇನೆ. ಈಗಾಗಲೇ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ‌..

ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬೆಳಗಾವಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಿದ್ದೇನೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದದ ಕಾನೂನು ಹೋರಾಟದ ಕುರಿತಂತೆ ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಅವರು ಸಭೆ ಕರೆಯುತ್ತಿದ್ದಾರೆ. ಸುಪ್ರೀಂಕೋರ್ಟ್​​ನಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಈಗಾಗಲೇ ನ್ಯಾಯಮೂರ್ತಿ ಮಂಜುನಾಥ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿ ಹಾಗೂ ಅಡ್ವೊಕೇಟ್ ಜನರಲ್ ಹಾಗೂ ಆ ಭಾಗದ ಹಿರಿಯ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಕಾನೂನು ಹೋರಾಟಕ್ಕೆ ರಾಜ್ಯವನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಮಹಾಜನ್ ವರದಿ ಪ್ರಕಾರ ವಿಷಯ ಬಗೆಹರಿದಿದೆ. ಆದರೆ, ರಾಜಕೀಯಕ್ಕಾಗಿ ಮಹಾರಾಷ್ಟ್ರ ಸಿಎಂ ಪದೇಪದೆ ಈ ಕ್ಯಾತೆ ತೆಗೆಯುತ್ತಿದ್ದಾರೆ. ಹಿಂದೆ ಶರದ್ ಪವಾರ್ ಅವರು ಈ ರೀತಿ ಕ್ಯಾತೆ ತೆಗೆಯುತ್ತಿದ್ರು. ಆ ಮೇಲೆ ಮಹಾರಾಷ್ಟ್ರ ಕರ್ನಾಟಕ ಗಡಿ ಸಮಸ್ಯೆ ಇಲ್ಲಿಗೆ ಮುಗೀತು ಎಂದು ಹೇಳಿಕೆ ಕೊಟ್ಟಿದ್ದರು. ಈಗ ಆ ಹೇಳಿಕೆಯನ್ನು ಉದ್ದವ್ ಠಾಕ್ರೆಗೆ ನೆನಪು ಮಾಡಿಕೊಡ್ತೇನೆ‌ ಎಂದು ಸಚಿವ ಬೊಮ್ಮಾಯಿ ಹೇಳಿದರು.

Intro:ಅನುಚಿತವಾಗಿ ಯಾರೆ ವರ್ತನೆ ಮಾಡಿರಲಿ ಅವರ ವಿರುದ್ಧ ಕ್ರಮ;-
ಗಡಿ ವಿವಾದ ಕುರಿತು ಸಿಎಂ ಶೀಘ್ರದಲ್ಲಿ ಸಭೆ;-ಗೃಹ ಸಚಿವ ಹೇಳಿಕೆ mojo

ಸಿಎಂ ನಿವಾಸಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಭೇಟಿ ನೀಡಿ ಸಿಎಂ ಯಡಿಯೂರಪ್ಪ ಅವರಿಗೆ ಶುಭಾಷಯ ತಿಳಿಸಿದ ನಂತ್ರ ಮಾತಾಡಿ ಬೆಂಗಳೂರಿನಲ್ಲಿ ಬ್ರಿಗೇಡ್ ರಸ್ತೆ ಸೇರಿ ಕೆಲವೆಡೆ ಪಾನಮತ್ತರಾಗಿ ಕೆಲವು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ ಅನ್ನೋ ಮಾಹಿತಿ ತಿಳಿದು ಬಂದಿದೆ. ಹಾಗೆ ಅದು ಬಿಟ್ರೆ ಹೊಸ ವರ್ಷ ಬಹಳ ಸಂಭ್ರಮದಿಂದ ನಡೆದಿದೆ. ಮಹಿಳಾ ಪೊಲಿಸ್ರು ಕೂಡ ಸರಿಯಾದ ಭದ್ರತೆ ವಹಿಸಿದ್ದಾರೆ .

ಇವತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಇದೆ. ಸಭೆಯಲ್ಲಿ ಅನುಚಿತವಾಗಿ ನಡೆದುಕೊಂಡವರ ವಿರುದ್ದ ಮಾಹಿತಿ ಹಾಗೆ ಘಟನೆಗಳ ಕುರಿತು ‌ವಿವರ ಸಂಗ್ರಹ ಮಾಡುತ್ತೆನೆ. ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡ್ತಿನಿ. ಈಗಾಗಲೇ ಪೊಲೀಸ್ ಕಮಿಷನರ್ ಅವರ ಜೊತೆ ಮಾತಾಡಿದ್ದಿನಿ ಎಂದು ತಿಳಿಸಿದರು.

ಹಾಗೆ ಮಹಾರಾಷ್ಟ್ರ ಗಡಿ ವಿವಾದ ವಿಚಾರ ಮಾತಾಡಿ ಈಗಾಗಲೇ ಬೆಳಗಾವಿಯ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಕಾಪಾಡುವಂತೆ ಸೂಚನೆ ಕೊಟ್ಟಿದ್ದೇನೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದದ ಕಾನೂನು ಹೋರಾಟದ ಕುರಿತು ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಸಭೆ ಕರೆಯುತ್ತಿದ್ದಾರೆ. ಸಭೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಚೃಚೆ ನಡೆಯಲಿದೆ.

ಈಗಾಗ್ಲೇ ಮುಖ್ಯನ್ಯಾಯಮೂರ್ತಿ ಮಂಜುನಾಥ ನೇತೃತ್ವದಲ್ಲಿ ಒಂದು ಸಮಿತಿ ಇದೆ‌ ಆ ಸಮಿತಿ ಹಾಗೂ ಅಡ್ವಕೇಟ್ ಜನರಲ್ ಹಾಗೂ ಆ ಭಾಗದ ಹಿರಿಯ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಸಭೆ ನಡೆಸಿ ಕಾನೂನಾತ್ಮಕ ಕ್ರಮವನ್ನು ಜರುಗಿಸುತ್ತೇವೆ. ಅತ್ಯುತ್ತಮವಾದ ರಾಜ್ಯ ಪ್ರತಿನಿಧಿಸುವ ಒಬ್ಬ ವಕೀಲರನ್ನು ಕೂಡ ಕಾನೂನು ಹೋರಾಟಕ್ಕೆ ನೇಮಕ ಮಾಡ್ತೇವೆ.

ಈಗಾಗಲೇ ಮಹಾಜನ್ ವರದಿ ಪ್ರಕಾರ ವಿಷಯ ಬಗೆಹರಿದಿದೆ.ಆದರೆ ರಾಜಕೀಯಕ್ಕಾಗಿ ಮಹಾರಾಷ್ಟ್ರ ಸಿಎಂ ಪದೇ ಪದೇ ಈ ಖ್ಯಾತೆ ತೆಗೆಯುತ್ತಿದ್ದಾರೆ. ಹಿಂದೆ ಶರದ್ ಪವಾರ್ ಅವರು ಈ ರೀತಿ ಖ್ಯಾತೆ ತೆಗೆಯುತ್ತಿದ್ರು.ಆ ಮೇಲೆ ಮಹಾರಾಷ್ಟ್ರ ಕರ್ನಾಟಕ ಗಡಿ ಸಮಸ್ಯೆ ಇಲ್ಲಿಗೆ ಮುಗೀತು ಅಂತಾ ಹೇಳಿಕೆ ಕೊಟ್ರು‌. ಇವಾಗ ಆ ಹೇಳಿಕೆಯನ್ನು ಉದ್ದವ್ ಠಾಕ್ರೆಗೆ ನೆನಪು ಮಾಡಿಕೊಡ್ತೇನೆ‌ ಎಂದು ಗೃಹ ಸಚಿವ ಬೊಮ್ಮಯಿ ಹೇಳಿದರು.

Body:KN_BNG_05_BOMAi_7204498Conclusion:KN_BNG_05_BOMAi_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.