ETV Bharat / city

ಸಿಎಂ ಗೃಹ ಕಚೇರಿ ಎರಡನೇ ಬಾರಿ ಸೀಲ್ ಡೌನ್​​: ವಾರದ ಕಾರ್ಯಕ್ರಮ ರದ್ದುಪಡಿಸಿದ ಬಿಎಸ್​​ವೈ - ಕಾವೇರಿ ಕೃಷ್ಣಾ ಸಿಎಂ ಗೃಹ ಕಚೇರಿ ಸೀಲ್​ಡೌನ್​

ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿಯಲ್ಲಿನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಸೀಲ್​ ಡೌನ್​​ ಮಾಡಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಸಿಎಂ ಬಿ.ಎಸ್​.ಯಡಿಯೂರಪ್ಪ ಸ್ವತಃ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

cm-home-office-seal-down
ಸಿಎಂ ಬಿ ಎಸ್​ ಯಡಿಯೂರಪ್ಪ
author img

By

Published : Jul 10, 2020, 3:53 PM IST

ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಎರಡನೇ ಬಾರಿಗೆ ಸೀಲ್ ಡೌನ್ ಆಗಿದ್ದು, ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿ ಈಗ ನಿರ್ಬಂಧಿತ ಪ್ರದೇಶವಾಗಿದೆ. ಮಂತ್ರಿಗಳಿಗೂ ಈಗ ನೋ ಎಂಟ್ರಿ. ಒಂದು ವಾರ ಕೃಷ್ಣಾ, ಕಾವೇರಿಗೆ ಪ್ರವೇಶ ನಿಷಿದ್ಧವಾಗಿದ್ದು, ವಾರದ ಎಲ್ಲಾ ಪೂರ್ವ ನಿಗದಿತ ಕಾರ್ಯಕ್ರಮವನ್ನು ಸಿಎಂ ರದ್ದುಪಡಿಸಿದ್ದಾರೆ.

ಜೂನ್‌ 25ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಓರ್ವ ಅಗ್ನಿಶಾಮಕ ದಳದ ಸಿಬ್ಬಂದಿ, ಮತ್ತೋರ್ವ ಎಲೆಕ್ಟ್ರಿಷಿಯನ್ ಸೇರಿ ನಾಲ್ವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದ ಹಿನ್ನೆಲೆ ಒಂದು ವಾರ ಗೃಹ ಕಚೇರಿಯನ್ನು ಮೊದಲ ಬಾರಿಗೆ ಸೀಲ್ ಡೌನ್ ಮಾಡಿ ಸಂಪೂರ್ಣವಾಗಿ ಸ್ಯಾನಿಟೈಸ್​​ ಮಾಡಲಾಗಿತ್ತು. ಆಗ ಸಿಎಂ ಬಿಎಸ್​ವೈ ಕೃಷ್ಣಾ ಬದಲು ವಿಧಾನಸೌಧದಿಂದಲೇ ಎಲ್ಲಾ ಕೆಲಸ ಕಾರ್ಯ ನಡೆಸಿದ್ದರು.

ಸಿಎಂ ಗೃಹ ಕಚೇರಿ ಎರಡನೇ ಬಾರಿ ಸೀಲ್ ಡೌನ್
ಜುಲೈ 2ರಂದು ಕೃಷ್ಣಾ ಸೀಲ್ ಡೌನ್ ತೆರವು ಮಾಡಿದ್ದರಿಂದ ಬಹುತೇಕ ಸಭೆ, ಕಾರ್ಯಚಟುವಟಿಕೆಗಳನ್ನು ಕೃಷ್ಣಾದಿಂದಲೇ ಸಿಎಂ ನಿರ್ವಹಿಸಲು ಆರಂಭಿಸಿದ್ದರು. ಆದರೆ ಕೇವಲ 8 ದಿನದ ಅಂತರದಲ್ಲೇ ಮತ್ತೊಮ್ಮೆ ಗೃಹ ಕಚೇರಿ ಕೃಷ್ಣಾ ಸೀಲ್ ‌ಡೌನ್ ಆಗಿದೆ. ಟೆಲಿಫೋನ್/ಎಲೆಕ್ಟ್ರಿಕಲ್ ಆಪರೇಟರ್, ಒಬ್ಬರು ಸ್ವಚ್ಛತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗುತ್ತಿದೆ. ಜೊತೆಗೆ ಒಬ್ಬರು ಗನ್ ಮ್ಯಾನ್, ಸಿಎಂ‌ ಸ್ಪೇರ್ ಕಾರಿನ ಚಾಲಕ, ಇಬ್ಬರು ಎಸ್ಕಾರ್ಟ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಈ ಸಿಬ್ಬಂದಿ ಕೃಷ್ಣಾ ಮತ್ತು ಕಾವೇರಿಯಲ್ಲಿ ಓಡಾಡಿಕೊಂಡಿದ್ದ ಕಾರಣ ಸದ್ಯ ಕೃಷ್ಣಾ ಹಾಗೂ ಕಾವೇರಿ ನಿವಾಸವನ್ನು ಸ್ಯಾನಿಟೈಸ್ ಮಾಡಲಾಗಿದೆ. ಒಂದು ವಾರ ನಿವಾಸ ಹಾಗೂ ಕಚೇರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಂತ್ರಿಗಳೂ ಸೇರಿದಂತೆ ಯಾರೂ ಕೂಡ ಬರುವಂತಿಲ್ಲ ಎಂದು ಮೌಖಿಕ ಆದೇಶ ಹೊರಡಿಸಲಾಗಿದೆ.
ಸಿಎಂ​ ಹೋಮ್​ ಕ್ವಾರಂಟೈನ್​​

ಸುತ್ತಮುತ್ತಲಿನ ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಸಿಎಂ ಸ್ವತಃ ಹೋಂ ಕ್ವಾರಂಟೈನ್ ಆಗಿದ್ದಾರೆ. ನಿವಾಸಕ್ಕೆ ಯಾರ ಭೇಟಿಗೂ ಅನುಮತಿ ನೀಡದಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಹೋಂ ಕ್ವಾರಂಟೈನ್ ಆದ ಹಿನ್ನೆಯಲ್ಲಿ ವಿಧಾನಸೌಧದಲ್ಲಿ ಪೂರ್ವನಿಗದಿಯಾಗಿದ್ದ ಪರಿಷತ್ ಸದಸ್ಯರ ಬೀಳ್ಕೊಡುಗೆ ಸಮಾರಂಭಕ್ಕೆ ಸಿಎಂ ತೆರಳಲಿಲ್ಲ. ಅಲ್ಲದೆ ಐದು ದಿನಗಳ ಕಾಲ ತಮ್ಮೆಲ್ಲಾ ಸಭೆಗಳನ್ನು, ಪೂರ್ವ ನಿಗದಿತ ಕಾರ್ಯಕ್ರಮ, ಅತಿಥಿಗಳ ಭೇಟಿಗೆ ನೀಡಿದ್ದ ಸಮಯಾವಕಾಶವನ್ನು ರದ್ದುಪಡಿಸಿದ್ದಾರೆ.

ಸಿಎಂ ನಿವಾಸ ಕಚೇರಿ ಬಂದ್​​

ಸಿಎಂ ನಿವಾಸ ಹಾಗೂ ಕಚೇರಿಯಲ್ಲಿ ಒಂದು ವಾರ ಕೊರೊನಾ ತುರ್ತು ಹೊರತುಪಡಿಸಿ ಎಲ್ಲಾ ಚಟುವಟಿಕೆ ಬಂದ್ ಆಗಲಿದೆ. ಮುಖ್ಯವಾದ ವಿಷಯ ಇದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಸಿಎಂ ಸಂದೇಶ ರವಾನಿಸಿದ್ದಾರೆ.

ಅದೇ ರೀತಿ ಕೊರೊನಾ ಸಂಬಂಧ ತುರ್ತು ಇದ್ದಲ್ಲಿ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲು ಕೋವಿಡ್-19 ಉಸ್ತುವಾರಿ ತಂಡಕ್ಕೆ ಸೂಚನೆ ನೀಡಿದ್ದು, ಹೆಚ್ಚಿನ ಜವಾಬ್ದಾರಿ ನಿರ್ವಹಿಸುವಂತೆ ಕೋವಿಡ್ ಟಾಸ್ಕ್ ಫೋರ್ಸ್​ಗೆ ಸಿಎಂ ಸೂಚನೆ ನೀಡಿದ್ದಾರೆ.

ಕಾವೇರಿ ಸುತ್ತಮುತ್ತ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಧವಳಗಿರಿಗೆ ತೆರಳಲು ಸಿಎಂ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದರು. ಆದರೆ ಧವಳಗಿರಿಯಲ್ಲಿಯೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಅಡುಗೆ ನೌಕರ ಹಾಗೂ ಮತ್ತೊಮ್ಮೆ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಹೀಗಾಗಿ ಧವಳಗಿರಿಗೆ ತೆರಳುವ ಚಿಂತನೆಯನ್ನು ಸಿಎಂ ಕೈಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.