ETV Bharat / city

ಇಂದು ಸಂಜೆ 7 ಗಂಟೆಗೆ ಸಚಿವರು, ಶಾಸಕರಿಗೆ ಸಿಎಂ‌ ಭೋಜನ ಕೂಟ..!

author img

By

Published : Sep 21, 2021, 11:11 PM IST

Updated : Sep 22, 2021, 3:38 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದುಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ಶಾಸಕರಿಗೆ ಭೋಜನಕೂಟ ಏರ್ಪಡಿಸಿದ್ದಾರೆ.

cm-dinner-party-to-mlas-and-ministers
ನಾಳೆ ಸಂಜೆ 7 ಗಂಟೆಗೆ ಸಚಿವರು, ಶಾಸಕರಿಗೆ ಸಿಎಂ‌ ಭೋಜನ ಕೂಟ..!

ಬೆಂಗಳೂರು: ಮುಖ್ಯಮಂತ್ರಿಯಾಗಿ ಚೊಚ್ಚಲ ಅಧಿವೇಶನ ನಡಸುತ್ತಿರುವ, ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ಶಾಸಕರಿಗೆ ಇಂದು ಭೋಜನಕೂಟ ಏರ್ಪಡಿಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ರೇಸ್ ವ್ಯೂ ಕಾಟೇಜ್​​ನಲ್ಲಿ ಸಂಜೆ 7 ಗಂಟೆಗೆ ಆಗಮಿಸುವಂತೆ ಸಚಿವರು ಹಾಗೂ ಪಕ್ಷದ ಶಾಸಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂದೇಶ ಕಳುಹಿಸಿದ್ದಾರೆ. ಪಕ್ಷದ ಪ್ರಮುಖರನ್ನೂ ಆಹ್ವಾನಿಸಲಾಗಿದ್ದು, ಸಿಎಂ ಆಗಿ ಮೊದಲ ಅಧಿವೇಶನವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ದೃಷ್ಟಿಯಿಂದ ಭೋಜನ ಕೂಟ ಏರ್ಪಡಿಸಿದ್ದಾರೆ.

ಸೆಪ್ಟೆಂಬರ್ 15ರಂದೇ ಸಚಿವರು ಶಾಸಕರಿಗೆ ಸಂದೇಶ ಕಳಿಸಿದ್ದ ಸಿಎಂ, ಸೆ.16ರಂದು ಸಂಜೆ 7 ಗಂಟೆಗೆ ಭೋಜನಕೂಟದಲ್ಲಿ ಭಾಗಿಯಾಗಲು ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ಕಳುಹಿಸಿದ್ದರು. ಆದರೆ ಹುಬ್ಬಳ್ಳಿಯಲ್ಲಿ ಸಿಎಂ ಅವರ ಸ್ನೇಹಿತ ಅಗಲಿದ್ದರಿಂದ ಭೋಜನಕೂಟವನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: ಅಗ್ನಿಯ ಕೆನ್ನಾಲಿಗೆಗೆ ತಾಯಿ-ಮಗಳು ಸಜೀವ ದಹನ

Last Updated : Sep 22, 2021, 3:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.