ETV Bharat / city

ಬೈಯಪ್ಪನಹಳ್ಳಿ - ಹೀಲಲಿಗೆ ಸಬ್ ಅರ್ಬನ್ ರೈಲ್ವೆ ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್​​ವೈ - ಕೆಂಗೇರಿಯಿಂದ ಪುಶ್-ಪುಲ್ ರೈಲ್ವೆ ಸಂಚಾರ

ಈಗಾಗಲೇ ಕೆಂಗೇರಿಯಿಂದ ಪುಶ್ - ಪುಲ್ ರೈಲ್ವೆ ಸಂಚಾರದ ಯೋಜನೆ ಪೂರ್ಣಗೊಂಡಿದ್ದು, ಈ ಯೋಜನೆಯಲ್ಲಿ ಯಶವಂತಪುರದಿಂದ ಬೈಯಪ್ಪನಹಳ್ಳಿ, ಹೀಲಲಿಗೆ ವರೆಗೆ ಉಪನಗರ ಸಂಪರ್ಕ ರೈಲ್ವೆ ಪುಶ್ ಪುಲ್ ಚಾಲನೆಗೊಂಡರೆ ಗ್ರಾಮೀಣ ಜನರು ನಗರಕ್ಕೆ ಬಂದು ಹೊರಡಲು ಅನುಕೂಲವಾಗಲಿದೆ.

cm-bsy
ಸಬ್ ಅರ್ಬನ್ ರೈಲ್ವೆ ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್​​ವೈ
author img

By

Published : Jun 24, 2021, 5:01 PM IST

Updated : Jun 24, 2021, 5:26 PM IST

ಆನೇಕಲ್: ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಿಂದ ಆನೇಕಲ್​​ನ ಹೀಲಲಿಗೆ ಮೂಲಕ ಹೊಸೂರು ರೈಲ್ವೆ ನಿಲ್ದಾಣದವರೆಗೆ ದ್ವಿಪಥ ರೈಲ್ವೆ ಹಳಿ ಸಂಪರ್ಕ ಕಾಮಗಾರಿ ಪ್ರಗತಿ ಕುರಿತು ಪರಿಶೀಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ್ ಇಬ್ಬರೂ ಹೀಲಲಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು.

ಸಿಎಂ ಬಿಎಸ್​​ವೈ

ಓದಿ: ದೇಶದ್ರೋಹಿ ಹೇಳಿಕೆ ಆರೋಪ ಕೇಸ್: 3ನೇ ದಿನವೂ ವಿಚಾರಣೆಗೆ ಹಾಜರಾದ ಆಯಿಷಾ

ಬೈಯಪ್ಪನಹಳ್ಳಿಯಿಂದ 30 ಕಿಮೀ ಉದ್ದದ ಹೀಲಲಿಗೆ ರೈಲ್ವೆ ನಿಲ್ದಾಣದವರೆಗಿನ ಕಾಮಗಾರಿ ವೀಕ್ಷಣೆಗೆ ಯಶವಂತಪುರದಿಂದ ರೈಲಿನಲ್ಲಿಯೇ ಆಗಮಿಸಿದ ಮುಖ್ಯಮಂತ್ರಿ ತಂಡ ಹೀಲಲಿಗೆ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದರು. ಹೊಸೂರುವರೆಗಿನ ರೈಲ್ವೆ ದ್ವಿಪಥ ರಸ್ತೆ ಕಾಮಗಾರಿಯೂ ಚಾಲ್ತಿಯಲ್ಲಿದ್ದು, ಈ ಕುರಿತು ಮಾಹಿತಿ ಪಡೆದರು.

ಇದರಿಂದ ಈಗಾಗಲೇ ಕೆಂಗೇರಿಯಿಂದ ಪುಶ್-ಪುಲ್ ರೈಲ್ವೆ ಸಂಚಾರದ ಯೋಜನೆ ಪೂರ್ಣಗೊಂಡಿದ್ದು, ಈ ಯೋಜನೆಯಲ್ಲಿ ಯಶವಂತಪುರದಿಂದ ಬೈಯಪ್ಪನಹಳ್ಳಿ, ಹೀಲಲಿಗೆ ವರೆಗೆ ಉಪನಗರ ಸಂಪರ್ಕ ರೈಲ್ವೆ ಪುಶ್ ಪುಲ್ ಚಾಲನೆಗೊಂಡರೆ ಗ್ರಾಮೀಣ ಜನರು ನಗರಕ್ಕೆ ಬಂದು ಹೊರಡಲು ಅನುಕೂಲವಾಗಲಿದೆ.

ಸಬ್ ಅರ್ಬನ್ ರೈಲ್ವೆ ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್​​ವೈ

ಸಬ್​ ಅರ್ಬನ್ ರೈಲು ಕಾಮಗಾರಿಯ ಸಿಜಿ ನಕ್ಷೆಯ ರೂಪುರೇಷೆಗಳನ್ನು ವೀಕ್ಷಿಸಿದ ತರುವಾಯ ರೈಲ್ವೆ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಬಂದ ರೈಲಿನಲ್ಲಿಯೇ ಸಿಎಂ ಯಡಿಯೂರಪ್ಪ ತಂಡ ತೆರಳಿದರು.

Last Updated : Jun 24, 2021, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.