ETV Bharat / city

ಸಂಕಷ್ಟದಲ್ಲಿದ್ದ ಕರ್ನಾಟಕ ಕಬಡ್ಡಿ ಆಟಗಾರ್ತಿ ತೇಜಸ್ವಿನಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

author img

By

Published : May 23, 2021, 12:37 AM IST

Updated : May 23, 2021, 1:53 AM IST

ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ತೇಜಸ್ವಿನಿ ಅವರ ಪತಿ ನವೀನ್ ಮೇ 11ರಂದು ಸೋಂಕಿನಿಂದ ಮೃತಪಟ್ಟಿದ್ದರು. ಮೇ 1ರಂದು ನವೀನ್​ಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು.

Cm bsy announced 2 lacs compensation for kabaddi player tejaswini
ಸಂಕಷ್ಟದಲ್ಲಿದ್ದ ಕರ್ನಾಟಕ ಕಬ್ಬಡ್ಡಿ ಆಟಗಾರ್ತಿ ತೇಜಸ್ವಿನಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಕೋವಿಡ್​​​ನಿಂದ ಪತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕದ ಕಬಡ್ಡಿ ಆಟಗಾರ್ತಿ ತೇಜಸ್ವಿನಿ ಬಾಯಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ​ 2 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.

ಇತ್ತೀಚೆಗೆ ತೇಜಸ್ವಿನಿ ಬಾಯಿ ಕೋವಿಡ್​​ನಿಂದಾಗಿ ಅವರ ಪತಿಯನ್ನು ಕಳೆದುಕೊ‌ಂಡಿದ್ದರು. ಇದರಿಂದ ಅವರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದರು. ಇದೀಗ ಸಿಎಂ ಯಡಿಯೂರಪ್ಪ ನೆರವಿನ ಹಸ್ತ ಚಾಚಿದ್ದು, ಎರಡು ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ತೇಜಸ್ವಿನಿ ಅವರ ಪತಿ ನವೀನ್ ಮೇ 11ರಂದು ಸೋಂಕಿನಿಂದ ಮೃತಪಟ್ಟಿದ್ದರು. ಮೇ 1ರಂದು ನವೀನ್​ಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು.

ಇದನ್ನೂ ಓದಿ: ಕೊರೊನಾ ಲಾಕ್​ಡೌನ್​​ ನಡುವೆ ಅನಗತ್ಯವಾಗಿ ಓಡಾಡಿದವರಿಗೆ ಬಿಸಿ ಮುಟ್ಟಿಸಿ ಖಾಕಿ!

ಶುಕ್ರವಾರ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಜಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ನೆರವು ನೀಡುವ ಕಾರ್ಯಕ್ರಮದಡಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಸಹಭಾಗಿತ್ವದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ತೇಜಸ್ವಿನಿಗೆ ಎರಡು ಲಕ್ಷ ರೂ. ಧನಸಹಾಯ ಮಂಜೂರು ಮಾಡಿತ್ತು. ಇದೀಗ ಸಿಎಂ ಯಡಿಯೂರಪ್ಪ ಅರ್ಜುನ ಪ್ರಶಸ್ತಿ ಪುರಸ್ಕೃತ ತೇಜಸ್ವಿನಿಗೆ ರಾಜ್ಯ ಸರ್ಕಾರದ ಪರವಾಗಿ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Last Updated : May 23, 2021, 1:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.