ಬೆಂಗಳೂರು: ತೆಲಂಗಾಣದಿಂದ ಬೆಳಗ್ಗೆ ತಮ್ಮ ನಿವಾಸಕ್ಕೆ ಬಂದ ನೂತನ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ನಡೆಯಬೇಕಾದ ಸಭೆಗೆ ಹೊರಡಲು ತಡವಾದ ಕಾರಣ ಓಡುತ್ತಲೇ ಮನೆಯ ಹೊರಗೆ ಬಂದು ಕಾರು ಹತ್ತಿ ಕುಳಿತ ದೃಶ್ಯ ಕಂಡುಬಂತು.
ವಿಧಾನಸೌಧದಲ್ಲಿ ಇಂದು ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆ ನಿಗದಿಗೊಂಡಿತ್ತು. ಸಭೆಗೆ ಸರಿಯಾದ ಸಮಯಕ್ಕೆ ತೆರಳಬೇಕೆಂಬ ಕಾರಣದಿಂದ ಮತ್ತು ಸಮಯ ಪ್ರಜ್ಞೆಯಿಂದ ಸಿಎಂ, ಮನೆಯಿಂದ ಹೊರಬಂದು ಕಾರಿನವರೆಗೂ ಓಡುತ್ತಲೇ ಹೋದರು. ಅವರ ಜೊತೆಗೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಕೂಡ ಓಡಿ ಬಂದು ಕಾರು ಹತ್ತಿದರು.