ETV Bharat / city

ಮಾರ್ಚ್​ನಲ್ಲಿ ಚೊಚ್ಚಲ ಆಯವ್ಯಯ ಮಂಡಿಸಲಿರುವ ಸಿಎಂ ಬೊಮ್ಮಾಯಿ: ಆರ್ಥಿಕ ಸಂಕಷ್ಟದ ಮಧ್ಯೆ ಜನಸ್ನೇಹಿ ಬಜೆಟ್​ಗೆ ತಯಾರಿ - CM Bommai To Present Maiden Budget

ಮಾರ್ಚ್ ಮೊದಲ ವಾರದಲ್ಲಿ 2022-23ನೇ ಸಾಲಿನ ಹಾಗೂ ತಮ್ಮ ಚೊಚ್ಚಲ ಬಜೆಟ್ ಅನ್ನು ಸಿಎಂ ಬೊಮ್ಮಾಯಿ ಮಂಡನೆ ಮಾಡಲಿದ್ದಾರೆ. ಮುಂದಿನ ವರ್ಷದ ಬಜೆಟ್ ಕೇವಲ ಘೋಷಣೆಗಷ್ಟೇ ಸೀಮಿತವಾಗಲಿದೆ. 2023ರ ಮೇ ತಿಂಗಳಲ್ಲೇ ಚುನಾವಣೆ ಬರುವುದರಿಂದ ಅದರ ಅನುಷ್ಠಾನ ಸಾಧ್ಯವಾಗುವುದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಈ ಬಜೆಟ್ ಜನರನ್ನು ಸೆಳೆಯಲು ಇರುವ ಕೊನೆಯ ಅವಕಾಶವಾಗಿದೆ.

CM Bommai
ಸಿಎಂ ಬೊಮ್ಮಾಯಿ
author img

By

Published : Jan 31, 2022, 5:19 PM IST

ಬೆಂಗಳೂರು: 2022-23ನೇ ಸಾಲಿನ ಹಾಗೂ ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬಸವರಾಜ ಬೊಮ್ಮಾಯಿ ತಯಾರಿ ನಡೆಸುತ್ತಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸುವುದಾಗಿ ಹೇಳಿರುವ ಸಿಎಂ ಜನಪ್ರಿಯ ಯೋಜನೆಗಳ ಘೋಷಣೆಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಆರ್ಥಿಕ ಇಲಾಖೆ ಸೇರಿದಂಯೆ ಫೆಬ್ರವರಿಯಿಂದ ಎಲ್ಲಾ ಇಲಾಖೆಗಳ ಜೊತೆ ಸಭೆ ನಡೆಸಲಿರುವ ಸಿಎಂ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಲಿದ್ದಾರೆ. ಈ ಬಾರಿಯ ಬಜೆಟ್ ಮಂಡನೆ ಸಿಎಂಗೆ ಹೂವಿನ ಹಾಸು ಆಗಿರುವುದಿಲ್ಲ. ಕೋವಿಡ್ ಲಾಕ್‌ಡೌನ್​ನಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಮಧ್ಯೆ ಜನಪ್ರಿಯ ಬಜೆಟ್ ಮಂಡಿಸುವ ಜರೂರತ್ತು ಸಿಎಂ ಬೊಮ್ಮಾಯಿ ಮೇಲಿದೆ.

2023ರ ವಿಧಾನಸಭೆ ಚುನಾವಣೆ ಮುನ್ನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಇದಾಗಲಿದೆ. ಮುಂದಿನ ವರ್ಷದ ಬಜೆಟ್ ಕೇವಲ ಘೋಷಣೆಗಷ್ಟೇ ಸೀಮಿತವಾಗಲಿದೆ. 2023ರ ಮೇ ತಿಂಗಳಲ್ಲೇ ಚುನಾವಣೆ ಬರುವುದರಿಂದ ಅದರ ಅನುಷ್ಠಾನ ಸಾಧ್ಯವಾಗುವುದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಈ ಬಜೆಟ್ ಜನರನ್ನು ಸೆಳೆಯಲು ಇರುವ ಕೊನೆಯ ಅವಕಾಶವಾಗಿದೆ. ಅದರ ಜೊತೆಗೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಅನಿವಾರ್ಯತೆ ಬೊಮ್ಮಾಯಿ ಸರ್ಕಾರದ ಮೇಲಿದೆ.

ಜನಪ್ರಿಯ ಯೋಜನೆ ರೂಪಿಸಲು ಕಸರತ್ತು: ಸದ್ಯದ ಆರ್ಥಿಕ ಸಂಕಷ್ಟದ ಮಧ್ಯೆ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುವುದು ಕಷ್ಟ ಸಾಧ್ಯವಾಗಿದೆ. ಆದರೂ ಜನರಿಗೆ ಇಷ್ಟವಾಗುವ ಅದರಲ್ಲೂ ರೈತರಿಗೆ ಸಿಹಿ ಎನಿಸುವ ಜನಪ್ರಿಯ ಯೋಜನೆ ಘೋಷಿಸಲೇ ಬೇಕಾಗಿದೆ. ನೆನಪಿಡುವಂತಹ ಕೆಲ ಜನಕಲ್ಯಾಣ ಯೋಜನೆಗಳನ್ನು ರೂಪಿಸಲು ಬಿಜೆಪಿ ಸರ್ಕಾರ ಕಸರತ್ತು ಪ್ರಾರಂಭಿಸಿದೆ. ಈಗಾಗಲೇ ಎಲ್ಲಾ ಇಲಾಖೆಗಳು ಹೊಸ ಜನಪರ ವಿಶೇಷ ಯೋಜನೆಗಳನ್ನು ಕರಡು ಬಜೆಟ್​ನಲ್ಲಿ ಸೇರಿಸಲು ಮುಂದಾಗಿವೆ.

ಕೇಂದ್ರ ಬಜೆಟ್ ಮೇಲೆ ಅವಲಂಬನೆ: ಸೊರಗಿದ ಆದಾಯ, ಸಾಲಗಳಿಂದ ಕೂಡಿದ ಸರ್ಕಾರದ ಪ್ರತಿಕೂಲ ಆರ್ಥಿಕತೆ ಮಧ್ಯೆ ಎಚ್ಚರಿಕೆಯ ಹೆಜ್ಜೆ ಇಡುವಂತೆ ಆರ್ಥಿಕ ಇಲಾಖೆ ಸಲಹೆ ನೀಡಿದೆ. ಕೇಂದ್ರದ ಬಜೆಟ್ ಮೇಲೆ ಸಿಎಂ ಬೊಮ್ಮಾಯಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಬಂಪರ್ ಕೊಡುಗೆ ಬಂದರೆ ಸಿಎಂ ಬೊಮ್ಮಾಯಿಗೆ ರಾಜ್ಯ ಬಜೆಟ್ ಹೊರೆಯನ್ನು ಸ್ವಲ್ಪ ಮಟ್ಟಿಗೆ ಇಳಿಸಲಿದೆ.

ಇತ್ತ ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿ ಇರುವ ಕಾರಣ ಬೆಂಗಳೂರಿಗೆ ಬಜೆಟ್​​ನಲ್ಲಿ ಬರಪೂರ ಕೊಡುಗೆ ನೀಡುವ ಅನಿವಾರ್ಯತೆಯೂ ಸಿಎಂ ಬೊಮ್ಮಾಯಿ ಮೇಲಿದೆ. ಹೀಗಾಗಿ ಅಳೆದು ತೂಗಿ ಹೊರೆ ಇಲ್ಲದ, ಜನಪರವಾದ, ಜನರಿಗೆ ಇಷ್ಟವಾಗುವಂಥ ಜನಪ್ರಿಯ ಯೋಜನೆಯೊಂದಿಗೆ ಬಜೆಟ್ ಮಂಡಿಸಲು ಸಿಎಂ ಕಸರತ್ತು ನಡೆಸುತ್ತಿದ್ದಾರೆ.

ಋಣಭಾರ ಪರಿಹಾರ ನೀತಿಗೆ ಚಿಂತನೆ: ಕರ್ನಾಟಕ ಋಣಭಾರ ಪರಿಹಾರ ನೀತಿ ತರಲು ಬೊಮ್ಮಾಯಿ ಚಿಂತನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಋಣಭಾರ ಪೀಡಿತ ರೈತರಿಗೆ, ರೈತ ಕೃಷಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ ಋಣಭಾರದ ಸಮಸ್ಯೆಗಳ ಪರಿಹಾರಕ್ಕಾಗಿ ಈ ನೀತಿ ರೂಪಿಸಲು ಮುಂದಾಗಿದ್ದಾರೆ. ಕೃಷಿ ಸಾಲ, ಅದರ ವಸೂಲಿ, ಬಡ್ಡಿ ಮನ್ನಾ ಷರತ್ತುಗಳು, ಯಾವಾಗ ರೈತರ ಸಾಲದ ಹೊರೆ ಸರ್ಕಾರವೇ ಹೊತ್ತು, ಸಾಲ ಮನ್ನಾ ಮಾಡಬೇಕು ಎಂಬ ವಿಸ್ತೃತ ಮಾರ್ಗಸೂಚಿ ಈ ನೀತಿಯಲ್ಲಿರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜೊತೆಗೆ ಕಾಯಂ ಋಣಭಾರ ಪರಿಹಾರ ಆಯೋಗ ರಚಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿನಲ್ಲಿ ಕಾನೂನು ಜಾರಿ ಸಂಬಂಧ ಆಯೋಗವು ನಿಗಾ ವಹಿಸಲಿದೆ. ಕೇರಳ ಮಾದರಿಯಲ್ಲಿ ಈ ಆಯೋಗ ಕಾರ್ಯನಿರ್ವಹಿಸಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: 2022-23ರಲ್ಲಿ ಶೇ.8 ರಿಂದ 8.5ರಷ್ಟು ಬೆಳವಣಿಗೆಯ ಅಂದಾಜು: ಹಣಕಾಸು ಸಚಿವರಿಂದ ಆರ್ಥಿಕ ಸಮೀಕ್ಷೆ ಮಂಡನೆ

ಜಿ​ಡಿಪಿ ದುಪ್ಪಟ್ಟುಗೊಳಿಸಲು ಪೂರಕ ನೀತಿ: ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಜಿಡಿಪಿಯನ್ನು 17 ಲಕ್ಷ ಕೋಟಿ ರೂ. ನಿಂದ. 2025ರ ವೇಳೆಗೆ 34 ಲಕ್ಷ ಕೋಟಿ ರೂ.ಗೆ ದುಪ್ಪಟ್ಟು ಮಾಡುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಬಜೆಟ್ ನಲ್ಲಿ ಇದಕ್ಕೆ ಪೂರಕವಾದ ನೀತಿಗಳನ್ನು ರೂಪಿಸಲು ಮುಂದಾಗಿದ್ದಾರೆ. ಪ್ರಮುಖವಾಗಿ ಉತ್ಪಾದನಾ ವಲಯ, ಕೃಷಿ ವಲಯ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಅನುದಾನ ನೀಡಲು ಚಿಂತನೆ ನಡೆಸಿದ್ದಾರೆ.

ಕೃಷಿ ವಲಯಗಳಲ್ಲಿ ಜಿಡಿಪಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ಯೋಜನೆಗಳನ್ನು ರೂಪಿಸಲು ಮುಂದಾಗಿದ್ದಾರೆ. ಜಿಡಿಪಿ ದುಪ್ಪಟ್ಟುಗೊಳಿಸುವ ಬ್ಲೂ ಪ್ರಿಂಟ್‌ ಅನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು, ಸಿಎಂ ಬೊಮ್ಮಾಯಿ ಬಜೆಟ್​ನಲ್ಲಿ ಅದನ್ನು ಸೇರ್ಪಡೆಗೊಳಿಸಲಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ: ಈ ಬಾರಿಯ ಬಜೆಟ್​​ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಚುನಾವಣೆ ಪೂರ್ವ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಇದಾಗಲಿದ್ದು, ರೈತರನ್ನು ಸೆಳೆಯಲು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.

ಬಜೆಟ್​​ನಲ್ಲಿ ಬಹುಪಾಲು ಅನುದಾನ ಹಂಚಿಕೆ ನೀರಾವರಿ ಯೋಜನೆಗಳಿಗೆ ಮೀಸಲಿರಿಸಲಾಗುವುದು ಎನ್ನಲಾಗ್ತಿದೆ. ಇತ್ತ ಪ್ರತಿಪಕ್ಷಗಳು ನೀರಾವರಿ ಯೋಜನೆ ಸಂಬಂಧ ಹೋರಾಟ ನಡೆಸುತ್ತಿದ್ದು, ಅದಕ್ಕೆ ಕೌಂಟರ್ ಕೊಡಲು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ನೀರಾವರಿ ಯೋಜನೆಗಳ ಸಂಬಂಧ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.