ETV Bharat / city

''ಸಂಪೂರ್ಣ ಮಾಹಿತಿ ಪಡೆದ ಬಳಿಕ ರಾಜ್ಯದಲ್ಲೂ ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ನಿರ್ಧಾರ'' ಸಿಎಂ ಅಭಯ

ಬೆಳಗ್ಗೆ ಪ್ರಧಾನಿಗಳು ಕೃಷಿ ಕಾಯ್ದೆ ವಾಪಸ್​ ಪಡೆಯುವುದಾಗಿ ಘೋಷಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ (Repeal of 3 farm laws in state) ಬಗ್ಗೆ ಮಾಹಿತಿ ಪಡೆದು ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ (CM Basavaraja bommai) ಸ್ಪಷ್ಟಪಡಿಸಿದ್ದಾರೆ.

CM Basavaraja bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Nov 19, 2021, 1:55 PM IST

ಬೆಂಗಳೂರು: ಕೃಷಿ ಕಾಯ್ದೆ ಹಿಂಪಡೆಯುವ (Repeal of 3 farm laws) ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಮ್ಮ ರಾಜ್ಯದಲ್ಲಿಯೂ ವಾಪಸ್​​ ಪಡೆಯುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja bommai) ಸ್ಪಷ್ಟಪಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ವಿಧಾನಸೌಧದಲ್ಲಿ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೂ ಕೃಷಿ ಕಾಯ್ದೆ ವಾಪಸ್​ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಬೆಳಗ್ಗೆ ಪ್ರಧಾನಿಗಳು ಕೃಷಿ ಕಾಯ್ದೆ ವಾಪಸ್​ ಪಡೆಯುವುದಾಗಿ ಘೋಷಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ (Repeal of 3 farm laws in state) ಬಗ್ಗೆ ಮಾಹಿತಿ ಪಡೆದು ನಿರ್ಧಾರ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.

ಪ್ರಮಾಣ ವಚನ ಬೋಧನೆ:

ದಿ. ಮಾಜಿ ಪ್ರಧಾನಿ‌ ಇಂದಿರಾಗಾಂಧಿ ಜನ್ಮದಿನ (Indira gandhi birth anniversary) ಹಿನ್ನೆಲೆ ಸಿಎಂ ಬೊಮ್ಮಾಯಿ ಸರ್ಕಾರ ನೌಕರರಿಗೆ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನವೆಂಬರ್ 9 ರಿಂದ 25 ರವರೆಗೂ ನಡೆಯಲಿರುವ ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಿನ್ನೆಲೆ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು.

'ಏಕತೆ ಮುಖ್ಯ'

ಬಳಿಕ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಹೋರಾಟ ಅಭೂತಪೂರ್ವ ಹೋರಾಟ. ಹಲವಾರು ಆಯಾಮಗಳಿಂದ ಹೋರಾಟ ನಡೆದಿದೆ. ನಮ್ಮ ಮಾರ್ಗ ಸತ್ಯ ಮತ್ತು ಅಹಿಂಸೆಯದ್ದಾಗಿದೆ. ನಾವೆಲ್ಲ ಸ್ವಾತಂತ್ರ್ಯದ ನಂತರ ಹುಟ್ಟಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಉಳಿಸಿಕೊಂಡು ಗಣರಾಜ್ಯ, ಪ್ರಜಾಪ್ರಭುತ್ವ ಭಾರತವನ್ನು ಯಶಸ್ವಿ ಮಾಡುವುದು ನಮ್ಮ ಕರ್ತವ್ಯ. ಅದಕ್ಕೆ ದೇಶದ ಏಕತೆ ಮುಖ್ಯ ಎಂದರು.

'ಮಾತುಕತೆ ಮೂಲಕ ಸಮಸ್ಯೆ ಸರಿಪಡಿಸಿಕೊಳ್ಳಬೇಕು'

ಸಾಮಾಜಿಕ, ಆರ್ಥಿಕ, ರಾಜಕೀಯ ಸಮಸ್ಯೆ ಇದ್ದರೂ ಹಿಂಸೆಗೆ ಹೋಗದೇ ಮಾತುಕತೆ ಮೂಲಕ ಸರಿಪಡಿಸಿಕೊಳ್ಳಬೇಕು. ಎಲ್ಲಿ ಶಾಂತಿ ಇದೆಯೋ ಅಲ್ಲಿ ಮಾತ್ರ ಪ್ರಗತಿ ಸಾಧ್ಯ. ನಮ್ಮ ದೇಶದ ಏಕತೆ, ಅಖಂಡತೆ ಜೊತೆ ಆರ್ಥಿಕತೆ ಕೂಡ ಸಾಧಿಸಬೇಕು. ದೇಶದ ಪ್ರಧಾನಿ ಪ್ರಗತಿ ಸಾಧಿಸಲು ಅನೇಕ ಕೆಲಸ ಮಾಡುತ್ತಿದ್ದಾರೆ.

ಪ್ರಧಾನಿ ಅವರ ನೀತಿ ಜಾರಿಗೊಳಿಸಿ ನಾವು ಯಶಸ್ವಿಯಾಗಬೇಕು. ನವಕರ್ನಾಟಕದ ಮೂಲಕ ನವಭಾರತ ನಿರ್ಮಾಣ ಮಾಡಲು ನಾವು ಸಂಕಲ್ಪ ಮಾಡಬೇಕು. ದೇಶದ ಏಕತೆ ಅಖಂಡತೆಯನ್ನು ಸಾಧಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಇದನ್ನೂ ಓದಿ: ರೈತರ ಒತ್ತಾಯಕ್ಕೆ ಪ್ರಧಾನಿ ಸ್ಪಂದನೆ- ನಮ್ಮದು ಸ್ಪಂದನಾಶೀಲ ಸರ್ಕಾರ: ಸಿಎಂ ಬೊಮ್ಮಾಯಿ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.