ಬೆಂಗಳೂರು : ಮೂರು ವರ್ಷದ ನಂತರ ಈ ಬಾರಿ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಡಿ.13 ರಿಂದ ಡಿ.24ರವರೆಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ, ಬೆಳಗಾವಿ ಅಧಿವೇಶನ ಸಂಬಂಧ ಸರ್ಕಾರ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎಂದರು.
ಏರ್ಪೋರ್ಟ್ನಲ್ಲಿ ಕೋವಿಡ್ ಪರೀಕ್ಷೆಗೆ ದುಬಾರಿ ಹಣ ಪಡೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಟೆಕ್ನಾಲಜಿ ಹಾಗೆ ಇದೆ. 500 ರೂ.ಗೂ ಟೆಸ್ಟ್ ಆಗುತ್ತದೆ. ಟೆಸ್ಟ್ಗೆ ವಿಶೇಷ ಸಲಕರಣೆಗಳನ್ನು ಬಳಕೆ ಮಾಡುತ್ತಾರೆ.
ಬೇರೆಡೆ ಹೋಲಿಕೆ ಮಾಡಿದರೆ ನಮ್ಮಲ್ಲೇ ದರ ಕಡಿಮೆ. ತಮಿಳುನಾಡಿನಲ್ಲಿ ನಮಗಿಂತಲೂ ಹೆಚ್ಚು ದರ ಇದೆ. ತಂತ್ರಜ್ಞಾನ ಆಧಾರಿತ ಪರೀಕ್ಷೆ ಮಾಡುವುದರಿಂದ ದರ ಸ್ವಲ್ಪ ಹೆಚ್ಚು ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಚಳಿಗಾಲ ಅಧಿವೇಶನ: ಕೋವಿಡ್ ವರದಿ, ಲಸಿಕೆ ಪ್ರಮಾಣ ಪತ್ರ ಇದ್ದರೆ ಮಾತ್ರ ಸುವರ್ಣ ಸೌಧಕ್ಕೆ ಎಂಟ್ರಿ
ಮತಾಂತರ ನಿಷೇಧ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ವಿರೋಧ ಪಕ್ಷ. ಹಾಗಾಗಿ, ಎಲ್ಲದಕ್ಕೂ ವಿರೋಧ ಮಾಡ್ತಾರೆ ಎಂದು ಹೇಳಿದರು.