ETV Bharat / city

ಮಹಿಳಾ ಪ್ರಯಾಣಿಕರಿಗೆ ಈ ಬಾರಿ ಬಜೆಟ್‌ನಲ್ಲಿ ಗುಡ್ ನ್ಯೂಸ್ ಕೊಡ್ತಾರಾ ಸಿಎಂ ಬೊಮ್ಮಾಯಿ? - CM basavaraja Bommai may give good news to women travelers in up coming budget

ಮಹಿಳೆಯರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸಂಬಂಧ ಬಿಎಂಟಿಸಿ ಉಪಾಧ್ಯಕ್ಷ ಎಂ ಆರ್ ವೆಂಕಟೇಶ್ ಹಾಗೂ ಅಧಿಕಾರಿಗಳ ತಂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೆಂಗಳೂರಿನಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

CM basavaraja Bommai may give good news to women travelers in up coming budget
ಮಹಿಳಾ ಪ್ರಯಾಣಿಕರಿಗೆ ಈ ಬಾರಿಯ ಬಜೆಟ್‌ನಲ್ಲಿ ಗುಡ್ ನ್ಯೂಸ್ ಕೊಡ್ತಾರಾ ಸಿಎಂ ಬೊಮ್ಮಾಯಿ?
author img

By

Published : Feb 26, 2022, 5:57 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಮಾರ್ಚ್ 4 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಪೂರ್ವಭಾವಿ ಸಭೆಯನ್ನ ನಡೆಸುತ್ತಿರುವ ಸಿಎಂ ಈ ಬಾರಿ ಬಜೆಟ್ ನಲ್ಲಿ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡ್ತಾರಾ ಎಂಬ ಕೂತುಹಲ ಮೂಡಿಸಿದೆ.‌ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಂಪರ್ ಕೊಡುಗೆ ನೀಡುವ ನಿರೀಕ್ಷೆ ಇದೆ.

ಡೆಲ್ಲಿ ಟ್ರಾನ್ಸ್‌ಪೋರ್ಟ್‌ನಂತೆ ಬೆಂಗಳೂರು ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್‌ನಲ್ಲಿಯೂ ಮಹಿಳೆಯರಿಗೆ ಸಂಪೂರ್ಣ ಉಚಿತ ಸಂಚಾರಕ್ಕೆ ಚಿಂತನೆ ನಡೆದಿದೆ.‌ ದೆಹಲಿ, ಪಂಜಾಬ್ ನಂತೆ ಬೆಂಗಳೂರಿನಲ್ಲಿಯೂ ಉಚಿತ ಬಸ್ ಪ್ರಯಾಣಕ್ಕೆ ಒತ್ತಡ ಹೆಚ್ಚಿದೆ‌. ಹೀಗಾಗಿ ಮಾರ್ಚ್ 4 ರ ಬಜೆಟ್‌ನಲ್ಲಿ ಮಹಿಳೆಯರಿಗೆ ಸಿಟಿ ಬಸ್ ನಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು.‌

ನಿತ್ಯ 10 ಲಕ್ಷ ಮಹಿಳಾ ಕಾರ್ಮಿಕರು, ಮಹಿಳಾ ನೌಕರರು ಬಿಎಂಟಿಸಿ ಬಸ್‌ಗಳಲ್ಲೇ ಪ್ರಯಾಣ ಮಾಡುತ್ತಿದ್ದಾರೆ.‌ ಹಣ ಕೊಟ್ಟು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡೋದು ಮಹಿಳೆಯರಿಗೆ ಕಷ್ಟ, ಹೀಗಾಗಿ ಬಿಎಂಟಿಸಿ ಉಪಾಧ್ಯಕ್ಷ ಎಂ ಆರ್ ವೆಂಕಟೇಶ್ ಹಾಗೂ ಅಧಿಕಾರಿಗಳ ತಂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ದೆಹಲಿ, ಪಂಜಾಬ್, ನೆರೆಯ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಸಂಚಾರ ಭಾಗ್ಯ ಇದೆ. ಹೀಗಾಗಿ ಬೆಂಗಳೂರಿನಲ್ಲೂ ಉಚಿತ ಸಂಚಾರಕ್ಕೆ ಅವಕಾಶ ನೀಡಿ ಅಂತ ಮನವಿ ಮಾಡಿದ್ದಾರೆ.

ಕಳೆದ ಬಜೆಟ್‌ನಲ್ಲಿ ಗಾರ್ಮೆಂಟ್ಸ್‌ಗೆ ಹೋಗುವ ಮಹಿಳೆಯರಿಗೆ ಬಿಎಸ್‌ವೈ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದರು.‌ ಹೀಗಾಗಿ, ಮಾರ್ಚ್ 4ರ ಬಜೆಟ್ ನಲ್ಲಿ ಸರ್ಕಾರ ಅಧಿಕೃತ ಘೋಷಣೆ ಮಾಡಿದರೆ ಬಿಎಂಟಿಸಿಗೆ ಆಗುವ ನಷ್ಟ ಸರ್ಕಾರ ಭರಿಸುವ ಸಾಧ್ಯತೆ ಇದೆ. ಈಗಾಗಲೇ ಕೋಟ್ಯಂತರ ರೂ. ನಷ್ಟದಲ್ಲಿ ಸಿಲುಕಿದ ಬಿಎಂಟಿಸಿ ನಷ್ಟದ ಮೊತ್ತ ಸರ್ಕಾರ ಭರಿಸಿದ್ರೆ ಯೋಜನೆ ಜಾರಿಗೊಳಿಸಲಿ ಅಂತ ಬಿಎಂಟಿಸಿ ತೀರ್ಮಾನ ಮಾಡಿದೆ.‌

ಇದನ್ನೂ ಓದಿ: ಆರ್ಥಿಕ ಸಂಕಟದ ಮಧ್ಯೆ ಬಜೆಟ್ ತಯಾರಿ: ಕೇಂದ್ರ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಪರಿಹಾರ, ಅನುದಾನದ ಮೊತ್ತ ಎಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.