ETV Bharat / city

ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ವಿಪಕ್ಷದವರಿಂದ ರಾಜಕೀಯಕ್ಕಾಗಿ ಆರೋಪ ಎಂದ ಸಿಎಂ

author img

By

Published : Jun 25, 2022, 3:21 PM IST

ವಾರ್ಡ್​ ಮರುವಿಂಗಡಣೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಧಿ ಇದೆ. ಆಕ್ಷೇಪಣೆಗಳನ್ನು ನೋಡಿ ಸರಿಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ತಿಳಿಸಿದರು.

CM Basavaraj Bommai
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಕುರಿತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆ ರಾಜಕೀಯ ಪ್ರೇರಿತ. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಿದ್ದೇವೆ. ಆಕ್ಷೇಪಣೆಗಳನ್ನು ನೋಡಿಕೊಂಡು ಏನು ಸರಿಪಡಿಸಬೇಕೋ ಅದನ್ನು ಮಾಡ್ತೇವೆ. ವಿಪಕ್ಷದವರು ಕೇವಲ ರಾಜಕೀಯ ಆರೋಪಗಳು ಮಾಡುತ್ತಿದ್ದಾರೆ ಅಷ್ಟೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಿಧಾನಸೌಧದಲ್ಲಿ ವಾರ್ಡ್​ ಮರುವಿಂಗಡಣೆ ಕುರಿತ ವಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರು.

ಇದೇ ವೇಳೆ ಮಾತನಾಡಿದ ಸಂಸದ ಪಿ.ಸಿ ಮೋಹನ್, ಚುನಾವಣೆ ನಡೆದರೆ 243 ವಾರ್ಡ್ ಪೈಕಿ 150ಕ್ಕೂ ಹೆಚ್ಚು ಗೆಲ್ಲುತ್ತೇವೆ. ಉಪನಗರ ರೈಲ್ವೆ ಯೋಜನೆ, ವಿಮಾನ ನಿಲ್ದಾಣವರೆಗೆ ಮೆಟ್ರೋ ವಿಸ್ತರಣೆ ಆಗುತ್ತಿದೆ. ಯಾವ ವಾರ್ಡಿಗೆ ಹೆಚ್ಚು ಜಾಗ ಇರುತ್ತೋ ಅದರ ಹೆಸರಿಡಲಾಗುತ್ತದೆ. ವಾರ್ಡ್​ಗಳ ಹೆಸರು ಬದಲಾವಣೆಗೆ ಆಕ್ಷೇಪಣೆ ಇದ್ದರೆ ಸರಿಪಡಿಸಲಾಗುತ್ತೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತೆ. ಚಾಣಕ್ಯ ಬಗ್ಗೆ ಯುವಕರು ತುಂಬಾ ತಿಳಿದುಕೊಳ್ಳಬೇಕು. ಅದಕ್ಕೆ ವಾರ್ಡ್​ವೊಂದಕ್ಕೆ ಚಾಣಕ್ಯ ಹೆಸರಿಡಲು ಚಿಂತಿಸಿದ್ದಾರೆ ಎಂದರು.

ಕಳಪೆ ಕಾಮಗಾರಿಗೆ ಕ್ರಮ: ಮೋದಿ ಆಗಮನ ವೇಳೆ ರಸ್ತೆಗುಂಡಿ ಲೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗಡಿಬಿಡಿಯಲ್ಲಿ ರಸ್ತೆ ಕಾಮಗಾರಿ ಆಗಿದೆ. ರಸ್ತೆ ಮತ್ತೆ ದುರಸ್ತಿ ಆದರೆ ಅದನ್ನು ಮತ್ತೆ ಸರಿಪಡಿಸಲಾಗುವುದು. ಕಳಪೆ ಕಾಮಗಾರಿ ಆಗಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಇಬ್ಭಾಗವಾಗಲು ಬಿಡಲ್ಲಾ: ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ರಾಜ್ಯ ಇಬ್ಭಾಗ ಆಗಲು ಬಿಜೆಪಿ ಬಿಡಲ್ಲ. ಕರ್ನಾಟಕ ಯಾವಾಗಲೂ ಒಂದೇ ಆಗಿರುತ್ತದೆ. ಈತರದ ಮಾತುಗಳಿಗೆ ನಾವು ಬೆಲೆ ಕೊಡಲ್ಲ. ನಮ್ಮದು ಡಬಲ್ ಇಂಜಿನ್ ಸರ್ಕಾರ. ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಹಿರಂಗ ಚರ್ಚೆಗೆ ಡೇಟ್ ಫಿಕ್ಸ್ ಮಾಡಿದ ಲಕ್ಷ್ಮಣ್: ಜೂ. 29 ಪ್ರತಾಪಸಿಂಹ ಪಟಾಲಂ ಜೊತೆ ಬರಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.