ETV Bharat / city

ಕೂಡಲೇ ರಸ್ತೆ ಗುಂಡಿ ಮುಚ್ಚಿ... ಅಧಿಕಾರಿಗಳಿಗೆ ಮೇಯರ್​ ತಾಕೀತು - banglore latest news

ನಗರದಲ್ಲಿ ಎಲ್ಲೆಲ್ಲಿ ರಸ್ತೆಗುಂಡಿಗಳು ಬಿದ್ದಿದೆ ಎಂಬುದನ್ನ ಗುರುತಿಸಿ, ಕೂಡಲೇ ಗುಂಡಿ ಮುಚ್ಚಿಸಬೇಕು ಎಂದು ಬಿಬಿಎಂಪಿ ಮೇಯರ್​ ಗಂಗಾಬಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕೂಡಲೇ ಗುಂಡಿ ಮುಚ್ಚಿ..ಅಧಿಕಾರಿಗಳಿಗೆ ಮೇಯರ್​ ತಾಕೀತು
author img

By

Published : Aug 20, 2019, 4:48 AM IST

ಬೆಂಗಳೂರು: ನಗರದಲ್ಲಿ ಎಲ್ಲೆಲ್ಲಿ ರಸ್ತೆಗುಂಡಿಗಳು ಬಿದ್ದಿದೆ ಎಂಬುದನ್ನ ಗುರುತಿಸಿ, ಕೂಡಲೇ ಗುಂಡಿ ಮುಚ್ಚಿಸಬೇಕು ಎಂದು ಬಿಬಿಎಂಪಿ ಮೇಯರ್​ ಗಂಗಾಬಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕೂಡಲೇ ಗುಂಡಿ ಮುಚ್ಚಿ..ಅಧಿಕಾರಿಗಳಿಗೆ ಮೇಯರ್​ ತಾಕೀತು

ನಗರದ ರಸ್ತೆಗಳಲ್ಲಿ ಒಂದು ಗುಂಡಿ ಕೂಡಾ ಇರಬಾರದು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ನೀವು ಯಾವ ಕಾರಣಕ್ಕೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಾ. ವಾಹನ ಸವಾರರು ಬಿದ್ದು, ಅಪಘಾತಗಳು ಸಂಭವಿಸಿದರೆ ಯಾರು ಹೊಣೆ? ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು. ಎಲ್ಲೆಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ ಎಂಬುದನ್ನು ಪಟ್ಟಿ ಮಾಡಿ ಗುತ್ತಿಗೆದಾರರಿಗೆ ಮಾಹಿತಿ ನೀಡಿ, ಕೂಡಲೆ ದುರಸ್ತಿ ಕಾರ್ಯ ನಡೆಸಬೇಕು. ಅಲ್ಲದೆ ಎರಡು ದಿನದೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅದಕ್ಕೆ ಪಾಲಿಕೆ ಮುಖ್ಯ ರಸ್ತೆ ಕಾರ್ಯನಿರ್ವಾಹಕ ಇಂಜಿನಿಯರ್ ನಂದೀಶ್ ಪ್ರತಿಕ್ರಿಯಿಸಿ, ಹೊರ ವರ್ತುಲ ರಿಂಗ್ ರಸ್ತೆಯನ್ನು 2016-17ರ ಮೊದಲನೇ ಹಂತದ ವೈಟ್ ಟಾಪಿಂಗ್ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಹೆಬ್ಬಾಳದ ಕಡೆಯಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ ಎಂಬುದನ್ನು ಪರಿಶೀಲಿಸಿ ದುರಸ್ತಿ ಪಡಿಸಲಾಗುವುದು ಎಂದರು.

ಗೊರಗುಂಟೆ ಪಾಳ್ಯ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ನೀರು ನಿಂತಿರುವುದನ್ನು ಕಂಡ ಮೇಯರ್, ನಿಂತಿರುವ ನೀರನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಿದರು. ಬಳಿಕ ಮೇಲ್ಸೇತುವೆಯಲ್ಲಿ ಡಾಂಬರೀಕರಣ ಎಲ್ಲೆಂದರಲ್ಲಿ ಕಿತ್ತುಹೋಗಿ, ಗುಂಡಿಗಳು ಬಿದ್ದಿರುವುದನ್ನು ಕಂಡು ಗುತ್ತಿಗೆದಾರರನ್ನು ಕರೆಸಿ ಕೂಡಲೇ ದುರಸ್ತಿ ಕಾರ್ಯ ನಡೆಸುವಂತೆ ಸೂಚಿಸಿದರು.

ಲಗ್ಗೆರೆ ಬ್ರಿಡ್ಜ್ ಬಳಿಯ ಕೆಳ ಸೇತುವೆ ಮಾರ್ಗವಾಗಿ ಹಾದು ಹೋಗುವ ರಸ್ತೆಯನ್ನು ಮೇಯರ್ ತಪಾಸಣೆ ನಡೆಸಿದರು. ರಸ್ತೆ ಡಾಂಬರೀಕರಣ ಆಗದಿರುವುದನ್ನು ಕಂಡು ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಮಳೆ ಬಂದ ವೇಳೆ ನೀರು ರಸ್ತೆಯ ಮೇಲೆ ಹರಿಯುವ ಪರಿಣಾಮ ರಸ್ತೆಗೆ ಡಾಂಬರೀಕರಣ ಹಾಕಿದರೂ ಕೆಲವೇ ದಿನಗಳಲ್ಲಿ ಕಿತ್ತುಹೋಗುತ್ತಿದೆ. ಅಲ್ಲದೆ ಈ ಹಿಂದೆ ಈ ರಸ್ತೆಯನ್ನು ಬಿಡಿಎ ನಿರ್ವಹಣೆ ಮಾಡುತ್ತಿತ್ತು. ಈಗ ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಪಾಲಿಕೆ ಅನುದಾನದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ 140 ಕೋಟಿ ರೂಗಳನ್ನು ಎಸ್ಕೋ ಖಾತೆಯಲ್ಲಿ ಮೀಸಲಿಡಲಾಗಿದೆ. ಆ ಅನುದಾನವನ್ನು ಬಳಸಿ ಕೂಡಲೇ ರಸ್ತೆ ದುರಸ್ತಿ ನಡೆಸಿ, ವಾಹನ ಸವಾರರ ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.

ಬಳಿಕ ಮಾಗಡಿ ಮುಖ್ಯ ರಸ್ತೆಯನ್ನು ಪರಿಶೀಲಿಸಿ, ರಸ್ತೆ ನಡುವೆ ಅಗೆದು ದುರಸ್ತಿ ಪಡಿಸದೇ ಇರುವುದನ್ನು ಕಂಡು ಸ್ಥಳದಲ್ಲಿಯೇ ಟ್ರ್ಯಾಕ್ಟರ್​ನಲ್ಲಿ ಜಲ್ಲಿಪುಡಿಯನ್ನು ತರಿಸಿ ಮುಚ್ಚಿಸಿದರು. ಅಲ್ಲದೇ, ಅದರ ಮೇಲೆ ಡಾಂಬರೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Intro:ಬೆಂಗಳೂರು-
ಮೇಯರ್ ಗಂಗಾಂಬಿಕೆ ರಾತ್ರಿ ವೇಳೆಯಲ್ಲಿ ರಸ್ತೆಗುಂಡಿಗಳ ತಪಾಸಣೆಗೆ ಅಧಿಕಾರಿಗಳೊಂದಿಗೆ ತೆರಳಿದರು‌. ಬಿಇಎಲ್ ವೃತ್ತದ ಬಳಿ ತಪಾಸಣೆ ನಡೆಸಿ, ಸರ್ವೀಸ್ ರಸ್ತೆ ಹಾಗೂ ರಿಂಗ್ ರಸ್ತೆಯಲ್ಲಿದ್ದ ರಸ್ತೆಗುಂಡಿ ನೋಡಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು‌. ಕೂಡಲೆ ಗುಂಡಿ ಮುಚ್ಚುವಂತೆ ತಾಕೀತು ಮಾಡಿದರು.
ನಗರದ ರಸ್ತೆಗಳಲ್ಲಿ ಒಂದು ಗುಂಡಿ ಕೂಡಾ ಇರಬಾರದು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ನೀವು ಯಾವ ಕಾರಣಕ್ಕೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಾ. ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸಿದರೆ ಯಾರು ಹೊಣೆ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು. ಎಲ್ಲೆಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ ಎಂಬುದನ್ನು ಪಟ್ಟಿ ಮಾಡಿ ಗುತ್ತಿಗೆದಾರರಿಗೆ ಮಾಹಿತಿ ನೀಡಿ ಕೂಡಲೆ ದುರಸ್ತಿ ಕಾರ್ಯ ನಡೆಸಬೇಕು. ಅಲ್ಲದೆ ಎರಡು ದಿನದೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅದಕ್ಕೆ ಪಾಲಿಕೆ ಮುಖ್ಯ ರಸ್ತೆ ಕಾರ್ಯನಿರ್ವಾಹಕ ಇಂಜಿನಿಯರ್ ನಂದೀಶ್ ಪ್ರತಿಕ್ರಿಯಿಸಿ, ಹೊರ ವರ್ತುಲ ರಿಂಗ್ ರಸ್ತೆಯನ್ನು 2016-17ರ ಮೊದಲನೇ ಹಂತದ ವೈಟ್ ಟಾಪಿಂಗ್ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಹೆಬ್ಬಾಳದ ಕಡೆಯಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ ಎಂಬುದನ್ನು ಪರಿಶೀಲಿಸಿ ದುರಸ್ತಿ ಪಡಿಸಲಾಗುವುದು ಎಂದರು.
ಗೊರಗುಂಟೆ ಪಾಳ್ಯ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ನೀರು ನಿಂತಿರುವುದನ್ನು ಕಂಡ ಮೇಯರ್, ನಿಂತಿರುವ ನೀರನ್ನು ಕೂಡಲೆ ತೆರವು ಮಾಡುವಂತೆ ಸೂಚಿಸಿದರು. ಬಳಿಕ ಮೇಲ್ಸೇತುವೆಯಲ್ಲಿ ಡಾಂಬರೀಕರಣ ಎಲ್ಲೆಂದರಲ್ಲಿ ಕಿತ್ತುಹೋಗಿ ಗುಂಡಿಗಳು ಬಿದ್ದಿರುವುದನ್ನು ಕಂಡು ಗುತ್ತಿಗೆದಾರರನ್ನು ಕರೆಸಿ ಕೂಡಲೆ ದುರಸ್ತಿ ಕಾರ್ಯ ನಡೆಸುವಂತೆ ಸೂಚಿಸಿದರು.
ಲಗ್ಗೆರೆ ಬ್ರಿಡ್ಜ್ ಬಳಿಯ ಕೆಳ ಸೇತುವೆ ಮಾರ್ಗವಾಗಿ ಆದು ಹೋಗುವ ರಸ್ತೆಯನ್ನು ಮೇಯರ್ ತಪಾಸಣೆ ನಡೆಸಿದರು. ರಸ್ತೆ ಡಾಂಬರೀಕರಣ ಹಾಕದಿರುವುದನ್ನು ಕಂಡು ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ಮಳೆ ಬಂದ ವೇಳೆ ನೀರು ರಸ್ತೆಯ ಮೇಲೆ ಹರಿಯುವ ಪರಿಣಾಮ ಪರಿಣಾಮ ರಸ್ತೆಗೆ ಡಾಂಬರೀಕರಣ ಹಾಕಿದರೂ ಕೆಲವೇ ದಿನಗಳಲ್ಲಿ ಕಿತ್ತುಹೋಗುತ್ತಿದೆ. ಅಲ್ಲದೆ ಈ ಹಿಂದೆ ಈ ರಸ್ತೆಯು ಬಿಡಿಎ ನಿರ್ವಹಣೆ ಮಾಡುತ್ತಿತ್ತು. ಈಗ ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಪಾಲಿಕೆ ಅನುದಾನದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ 140 ಕೋಟಿ ರೂ.ಗಳನ್ನು ಎಸ್ಕೋ ಖಾತೆಯಲ್ಲಿ ಮೀಸಲಿಡಲಾಗಿದೆ. ಆ ಅನುದಾನವನ್ನು ಬಳಸಿ ಕೂಡಲೆ ರಸ್ತೆ ದುರಸ್ತಿ ನಡೆಸಿ ವಾಹನ ಸವಾರರ ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಬಳಿಕ ಮಾಗಡಿ ಮುಖ್ಯ ರಸ್ತೆಯನ್ನು ಪರಿಶೀಲಿಸಿ, ರಸ್ತೆ ನಡುವೆ ಅಗೆದು ದುರಸ್ತಿ ಪಡಿಸದೇ ಇರುವುದನ್ನು ಕಂಡು ಸ್ಥಳದಲ್ಲಿಯೇ ಟ್ರ್ಯಾಕ್ಟರ್ ನಲ್ಲಿ ಜಲ್ಲಿಪುಡಿಯನ್ನು ತರೆಸಿ ಮುಚ್ಚಿಸಿದರು. ಅಲ್ಲದೆ ನಾಳೆ ಅದರ ಮೇಲೆ ಡಾಂಬರೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೌಮ್ಯಶ್ರೀ
Kn_Bng_08_mayor_pothole_inspection_7202707Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.