ETV Bharat / city

ಜನೌಷಧಿ ಕೇಂದ್ರದ ನಾಮಫಲಕ ತೆರವು: ಟ್ವೀಟ್ ಮೂಲಕ ಡಿವಿಎಸ್ ಅಸಮಧಾನ! - ದಾಸರಹಳ್ಳಿ ಶಾಸಕ

ಕಳೆದ ಭಾನುವಾರ ದಾಸರಹಳ್ಳಿಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ್ದರು. ಆದರೆ ಇಂದು ಬೆಳಗ್ಗೆ ಏಕಾಏಕಿ ಬಿಬಿಎಂಪಿಯ ಪ್ರಹರಿ ದಳದಿಂದ ಜನೌಷಧಿ ಕೇಂದ್ರಕ್ಕೆ ಹಾಕಿದ್ದ ನಾಮಫಲಕ ತೆರವುಗೊಳಿಸಲಾಗಿದೆ.

ಡಿ.ವಿ ಸದಾನಂದಗೌಡ
author img

By

Published : Jun 25, 2019, 8:11 PM IST

ಬೆಂಗಳೂರು: ಎರಡು ದಿನದ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ನಾಮಫಲಕವನ್ನು ಬಿಬಿಎಂಪಿ ಪ್ರಹರಿ ದಳ ತೆರವುಗೊಳಿಸಿದೆ. ಏಕಾಏಕಿ ನಾಮಫಲಕ ತೆರವು ಮಾಡಿದ್ದಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮಾಡುವ ಮೂಲಕ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಭಾನುವಾರ ದಾಸರಹಳ್ಳಿಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ್ದರು. ಆದರೆ ಇಂದು ಬೆಳಗ್ಗೆ ಏಕಾಏಕಿ ಬಿಬಿಎಂಪಿಯ ಪ್ರಹರಿ ದಳದಿಂದ ಜನೌಷಧಿ ಕೇಂದ್ರಕ್ಕೆ ಹಾಕಿದ್ದ ನಾಮಫಲಕ ತೆರವುಗೊಳಿಸಲಾಗಿದೆ. ಯಾವುದೇ ಸಿಬ್ಬಂದಿ ಇಲ್ಲದೆ ವಾಹನ ಚಾಲಕ ಮಾತ್ರ ನಾಮಫಲಕ ತೆರವುಗೊಳಿಸಿದ್ದಾನೆ. ಈ ವೇಳೆ ಸ್ಥಳೀಯರು ಅಕ್ಕಪಕ್ಕದ‌ ನಾಮಫಲಕ ಬಿಟ್ಟು ಇದೊಂದೇ ಯಾಕೆ ತೆರವು ಮಾಡುತ್ತಿದ್ದೀರಾ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚಾಲಕ ಮೇಲಾಧಿಕಾರಿಗಳ ಸೂಚನೆಯಂತೆ ತೆರವು ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

ನಾಮಫಲಕ ತೆರವಿಗೆ ಡಿವಿಎಸ್ ಟ್ವೀಟಾಸ್ತ

ನಾಮ ಫಲಕ ತೆರವಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕಳೆದ ಭಾನುವಾರ ದಾಸರಹಳ್ಳಿಯಲ್ಲಿ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದ ನಾಮ ಫಲಕವನ್ನು ಇಂದು ಬಿಬಿಎಂಪಿಯ ಪ್ರಹರಿ ದಳದವರು ಕಿತ್ತೊಯ್ದದ್ದು ಯಾವ ಕಾರಣಕ್ಕೆ ಎಂದು ತಿಳಿಸಿರಿ. ಬಡ ಜನರಿಗೋಸ್ಕರ ಇರುವ ಈ ಸೌಲಭ್ಯವನ್ನು ತಿಳಿಸುವ ನಾಮ ಫಲಕ ಕೀಳಿಸಿದ ರೋಗ ಗ್ರಸ್ತ ಮನಸ್ಸು ಯಾವುದು ತಿಳಿಸಿರಿ ಎಂದು ಬಿಬಿಎಂಪಿ ಮೇಯರ್ ಮತ್ತು ಆಯುಕ್ತರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಸಚಿವ ಡಿ.ವಿ ಸದಾನಂದಗೌಡ

ಅಲ್ಲದೆ, ಪ್ರಧಾನ ಮಂತ್ರಿ ಮೋದಿಯವರು ಪ್ರಾರಂಭಿಸಿರುವ ಬಡವರ ಯೋಜನೆಗೆ ಅಡ್ಡಿ ಬಂದರೆ, ನಿಮ್ಮ ಮಾನ್ಯ ಮುಖ್ಯಮಂತ್ರಿ ಹೆಸರಿನ ನಾಮ ಫಲಕವನ್ನು ಇದೇ ಜನ ಸಾಮಾನ್ಯರು ಜನಾದೇಶದ ಮೂಲಕ ಕೆಳಕ್ಕಿಳಿಸುತ್ತಾರೆ. ನಿಮ್ಮ ಪಕ್ಷದ ಮಾನ್ಯ ದಾಸರಹಳ್ಳಿ ಶಾಸಕರಿಗೆ ಈ ಆಲೋಚನೆ ಇಲ್ಲದಿರುವುದು ದುರದೃಷ್ಟಕರ ಎಂದು ಸ್ಥಳೀಯ ಶಾಸಕರಿಗೆ ಡಿವಿಎಸ್ ಎಚ್ಚರಿಕೆ ನೀಡಿ‌ ಟ್ವೀಟ್ ಮಾಡಿದ್ದಾರೆ.

Intro:ಬೆಂಗಳೂರು:ಎರಡು ದಿನದ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ನಾಮಫಲಕವನ್ನು ಬಿಬಿಎಂಪಿ ಪ್ರಹರಿ ದಳ ತೆರವುಗೊಳಿಸಿದೆ.ಏಕಾಏಕಿ ನಾಮಫಲಕ ತೆರವು ಮಾಡಿದ್ದಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.Body:

ಭಾನುವಾರವಷ್ಟೇ ದಾಸರಹಳ್ಳಿಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ್ದರು.ಆದರೆ ಇಂದು ಬೆಳಗ್ಗೆ ಏಕಾಏಕಿ ಬಿಬಿಎಂಪಿಯ ಪ್ರಹರಿ ದಳ ಜನೌಷಧಿ ಕೇಂದ್ರಕ್ಕೆ ಹಾಕಿದ್ದ ನಾಮಫಲಕ ತೆರವುಗೊಳಿಸಿದೆ. ಯಾವುದೇ ಸಿಬ್ಬಂದಿ ಇಲ್ಲದೇ ಚಾಲಕ ಮಾತ್ರ ವಾಹನದೊಂದಿಗೆ ಸ್ಥಳಕ್ಕೆ ತೆರಳಿ ನಾಮಫಲಕ ತೆರವುಗೊಳಿಸಿದ್ದಾರೆ.ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ಕೂಡ ಮೇಲಾಧಿಕಾರಿಗಳು ಹೇಳಿದ್ದಾರೆ ಅದಕ್ಕಾಗಿ ತೆರವು ಮಾಡುತ್ತಿದ್ದೇನೆ ಎನ್ನುವ ಕಾರಣ ನೀಡಿ ನಾಮಫಲಕ ತೆರವುಗೊಳಿಸಿದ್ದಾರೆ.ಅಕ್ಕಪಕ್ಕದ‌ ನಾಮಫಕ ಬಿಟ್ಟು ಇದೊಂದೇ ಯಾಕೆ ತೆರವು ಮಾಡುತ್ತಿದ್ದೀರಿ ಎಂದರೆ ದೂರು ಇದೋಂದೇ ನಾಮಫಲಕ ಸಂಬಂಧ ದೂರು ಬಂದಿದೆ ಎನ್ನುವ ಕಾರಣ ನೀಡಿ ನಾಮಫಲಕ ಕೊಂಡೊಯ್ದಿದ್ದಾರೆ.

ನಾಮ ಫಲಕ ತೆರವಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮೂಲಕ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ
ನಾನು ಕಳೆದ ಭಾನುವಾರ ದಾಸರಹಳ್ಳಿ ಯಲ್ಲಿ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನ ಔಷದಿ ಕೇಂದ್ರದ ನಾಮ ಫಲಕವನ್ನು ಇಂದು ಬಿಬಿಎಂಪಿಯ ಪ್ರಹರಿ ದಳದವರು ಕಿತ್ತೊಯ್ದದ್ದು ಯಾವ ಕಾರಣಕ್ಕೆ ಎಂದು ತಿಳಿಸಿರಿ . ಬಡ ಜನರಿಗೋಸ್ಕರ ಇರುವ ಈ ಸೌಲಭ್ಯವನ್ನು ತಿಳಿಸುವ ನಾಮ ಫಲಕ ಕೀಳಿಸಿದ ರೋಗ ಗ್ರಸ್ತ ಮನಸ್ಸು ಯಾವುದು ತಿಳಿಸಿರಿ ಎಂದು ಬಿಬಿಎಂಪಿ ಮೇಯರ್ ಮತ್ತು ಆಯುಕ್ತರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ಮೋದಿಯವರು ಪ್ರಾರಂಭಿಸಿರುವ ಬಡವರ ಯೋಜನೆಗೆ ಅಡ್ಡಿ ಬಂದರೆ, ನಿಮ್ಮ ಮಾನ್ಯ ಮುಖ್ಯಮಂತ್ರಿ ಹೆಸರಿನ ನಾಮ ಫಲಕವನ್ನು ಇದೇ ಜನ ಸಾಮಾನ್ಯರು ಜನಾದೇಶದ ಮೂಲಕ ಕೆಳಕ್ಕಿಳಿಸುತ್ತಾರೆ ಅನ್ನೋ ಆಲೋಚನೆ ನಿಮ್ಮ ಪಕ್ಷದ ಮಾನ್ಯ ದಾಸರಹಳ್ಳಿ ಶಾಸಕರಿಗೆ ಇಲ್ಲದಿರುವುದು ದುರದೃಷ್ಟಕರ ಎಂದು ಸ್ಥಳೀಯ ಶಾಸಕರಿಗೆ ಡಿವಿಎಸ್ ಎಚ್ಚರಿಕೆ ನೀಡಿ‌ ಟ್ವೀಟ್ ಮಾಡಿದ್ದಾರೆ.
Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.