ಬೆಂಗಳೂರು : ಗಾಂಧಿ ಜಯಂತಿ ಅಂಗವಾಗಿ ಅವಧೂತ ವಿನಯ್ ಗುರೂಜಿ ಅವರ ಸಾರಥ್ಯದಲ್ಲಿ ಇಂದು ಸಾರ್ವಜನಿಕರಲ್ಲಿ ಪರಿಸರ ಕಾಳಜಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಜರುಗಲಿರುವ ಎರಡು ಕಾರ್ಯಕ್ರಮಗಲ್ಲಿ ವಿನಯ್ ಗುರೂಜಿ ಕೂಡ ಭಾಗವಹಿಸಲಿದ್ದಾರೆ.
ಇಂದಿನ ಕಾರ್ಯಕ್ರಮಗಳ ಪಟ್ಟಿ
1. ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಸಂಘದ ಆಶ್ರಯದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಬಯೋಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಕ್ಲೀನಥಾನ್ ಜಾಥ ಬೆಳಿಗ್ಗೆ 6 ಗಂಟೆಗೆ ಆಯೋಜನೆ.
2. ಬೆಳಿಗ್ಗೆ 8 ಗಂಟೆಗೆ ಉತ್ತರಹಳ್ಳಿ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸಸಿ ನೆಡುವುದು, ಉತ್ತರಹಳ್ಳಿ ವಾರ್ಡ್‌ನ ಭಾರತ್ ಹೌಸಿಂಗ್ ಕೊ-ಅಪರೇಟಿವ್ ಸೊಸೈಟಿ, ಪಾದುಕಾ ಮಂದಿರದ ಹತ್ತಿರ ಗಿಡ ನೆಡುವ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಭಾಗಿ
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕಾರ್ಯದರ್ಶಿಗಳು, ಗುರೂಜಿ ಅನುಯಾಯಿಗಳು, ಯುನಿವರ್ಸಿಟಿ ವಿದ್ಯಾರ್ಥಿಗಳು, ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ಸೇರಿದಂತೆ ನೂರಾರು ಜನ ಭಾಗಿಯಾಗಲಿದ್ದಾರೆ. ಇದರ ಜೊತೆ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಗುರೂಜಿ ಅನುಯಾಯಿಗಳು ಮತ್ತು ಭಕ್ತರು ಸ್ವಚ್ಛತಾ ಕಾರ್ಯಕ್ರಮ, ಗಿಡ ನೆಡುವ ಕಾರ್ಯಕ್ರಮ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗಾಂಧಿ ಜಯಂತಿ: ಬೆಂಗಳೂರಿನಲ್ಲಿ ವಿನಯ್ ಗುರೂಜಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ - ಬೆಂಗಳೂರು ಸುದ್ದಿ
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಅವಧೂತ ವಿನಯ್ ಗುರೂಜಿ ನೇತೃತ್ವದಲ್ಲಿ ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.