ETV Bharat / city

ಹೈಕೋರ್ಟ್ ಆವರಣದಲ್ಲಿ ಇ-ಸೇವಾ ಕೇಂದ್ರ ಉದ್ಘಾಟಿಸಿದ ಸಿಜೆ ರಿತುರಾಜ್ ಅವಸ್ಥಿ - e service center at High Court

ಹೈಕೋರ್ಟ್ ಆವರಣದಲ್ಲಿ ಇ-ಸೇವಾ ಕೇಂದ್ರ ಸ್ಥಾಪಿಸಲಾಗಿದ್ದು ಬುಧವಾರ (ನಿನ್ನೆ) ಈ ಕೇಂದ್ರವನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಉದ್ಘಾಟಿಸಿದರು.

cj ritu raj awasthi inaugurated e service center at High Court premises
ಹೈಕೋರ್ಟ್ ಆವರಣದಲ್ಲಿ ಇ-ಸೇವಾ ಕೇಂದ್ರ ಉದ್ಘಾಟಿಸಿದ ಸಿಜೆ ರಿತುರಾಜ್ ಅವಸ್ಥಿ
author img

By

Published : Feb 10, 2022, 6:42 AM IST

ಬೆಂಗಳೂರು: ಹೈಕೋರ್ಟ್​ನ ಪ್ರಧಾನ ಪೀಠದಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಕ್ಷೀದಾರರು ಹಾಗೂ ವಕೀಲರಿಗೆ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇ-ಸೇವಾ ಕೇಂದ್ರ ಲೋಕಾರ್ಪಣೆಗೊಂಡಿದೆ.

ಹೈಕೋರ್ಟ್ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದ ಸಮೀಪದಲ್ಲಿ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಕೌಂಟರ್​ಗಳು ಹಾಗೂ ವಿಡಿಯೋ ಕಾನ್ಫರೆನ್ಸ್ ಕ್ಯಾಬಿನ್​​ಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಹಿಜಾಬ್​ ಪ್ರಕರಣ: ಸಿಜೆ ನೇತೃತ್ವದಲ್ಲಿ ವಿಶೇಷ ಪೀಠ ರಚನೆ, ಇಂದು ಮಧ್ಯಾಹ್ನವೇ ವಿಚಾರಣೆ

ಉದ್ದೇಶವೇನು?: ಇ-ಸೇವಾ ಕೇಂದ್ರದಲ್ಲಿ ವಕೀಲರು ಹಾಗೂ ಕಕ್ಷೀದಾರರು ತಮ್ಮ ಪ್ರಕರಣಗಳ ಸ್ಥಿತಿಗತಿ, ಮುಂದಿನ ವಿಚಾರಣೆಯ ದಿನಾಂಕ ಸೇರಿದಂತೆ ಮತ್ತಿತರೆ ವಿವರಗಳನ್ನು ತಿಳಿದುಕೊಳ್ಳಬಹುದು. ಹಾಗೆಯೇ, ಇ-ಫೈಲಿಂಗ್ ಸುಲಭಗೊಳಿಸಲು ನೆರವು, ನ್ಯಾಯಾಲಯದ ಆದೇಶಗಳ ವಿದ್ಯುನ್ಮಾನ ಪ್ರತಿಗಳನ್ನು ಪಡೆಯಲು ಕೂಡ ಇಲ್ಲಿ ಅವಕಾಶವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.