ಆನೇಕಲ್: ಕಾರ್ಮಿಕ ಕಾನೂನು ತಿದ್ದುಪಡಿ ವಾಪಸ್ ಹಾಗೂ ಕಾರ್ಮಿಕರ ತುಟ್ಟಿ ಭತ್ಯೆ ಮುಂದೂಡಿಕೆಯನ್ನು ವಿರೋಧಿಸಿ ತಾಲೂಕು ಸಿಐಟಿಯು ಹಾಗೂ ಸಿಡಬ್ಲೂಎಫ್ಐ ವತಿಯಿಂದ ಬೆಂಗಳೂರು ಹೊರವಲಯ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು, ಕಂಪನಿ, ಕಾರ್ಖಾನೆಗಳ ಮಾಲೀಕರ ಮಾತಿಗೆ ಮಣಿದ ರಾಜ್ಯ ಸರ್ಕಾರ 2020 ರ ಎಪ್ರಿಲ್ ನಿಂದ ಸಿಗಬೇಕಿದ್ದ ತುಟ್ಟಿ ಭತ್ಯೆ (ವಿಡಿಎ)ಯನ್ನು 2021 ನೇ ಮಾರ್ಚ್ 31ರ ತನಕ ಮುಂದೂಡಿರುವುದು ಕಾರ್ಮಿಕರಿಗೆ ಮಾಡುತ್ತಿರುವ ಮೋಸವಾಗಿದೆ ಎಂದರು.
ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸರ್ಕಾರ ಹೊರಡಿಸಿರುವ ತುಟ್ಟಿ ಭತ್ಯೆ ಮುಂದೂಡಿಕೆ ಆದೇಶದ ಪ್ರತಿಯನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.