ETV Bharat / city

ಪಿಎಸ್ಐ ನೇಮಕಾತಿ ಅಕ್ರಮ : ವಿಚಾರಣೆಗೆ ಕರೆದಿದ್ದ 50 ಅಭ್ಯರ್ಥಿಗಳ ಪೈಕಿ 45 ಮಂದಿ ಹಾಜರು!

author img

By

Published : Apr 20, 2022, 1:46 PM IST

ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದಲ್ಲಿ 45 ಅಭ್ಯರ್ಥಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದ ಐವರು ಅಭ್ಯರ್ಥಿಗಳು ಗೈರು ಹಾಜರಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಭ್ಯರ್ಥಿಗಳು ತಂದಿರುವ ಒಎಂಆರ್ ಶೀಟ್​ಗಳಿಗೂ ಈಗಾಗಲೇ ಕೆಪಿಎಸ್ಸಿಯಿಂದ ಪಡೆದ ಮೂಲ ಒಎಂಆರ್ ಶೀಟ್​ಗಳಿಗೆ ಹೋಲಿಕೆ‌ ಮಾಡಲಾಗುತ್ತಿದೆ..

CID investigating candidates of PSI recruitment
ಪಿಎಸ್ಐ ನೇಮಕಾತಿ ಅಕ್ರಮ

ಬೆಂಗಳೂರು : 545 ಪಿಎಸ್ಐ ಆಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎ‌ನ್ನಲಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪಿಎಸ್​ಐ ಅಭ್ಯರ್ಥಿಗಳಿಗೆ ನೋಟಿಸ್​ ನೀಡಿತ್ತು. ನೋಟಿಸ್ ನೀಡಿದ್ದ 50 ಅಭ್ಯರ್ಥಿಗಳ ಪೈಕಿ 45 ಮಂದಿ ಮಾತ್ರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ವಿಚಾರಣೆಗೆ ಕರೆದಿದ್ದ 50 ಅಭ್ಯರ್ಥಿಗಳ ಪೈಕಿ 45 ಮಂದಿ ಹಾಜರು!

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೇವಲ ಕಲಬುರಗಿ ಅಷ್ಟೇ ಅಲ್ಲದೇ ರಾಜ್ಯದ ಹಲವು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ. 545 ಅಭ್ಯರ್ಥಿಗಳ ಪೈಕಿ ಟಾಪರ್ಸ್ ಆಗಿದ್ದ 50 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್​ ಜಾರಿ ಮಾಡಿತ್ತು. ಈಗಾಗಲೇ 45 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕು.. 50 ಅಭ್ಯರ್ಥಿಗಳ ವಿಚಾರಣೆ

ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದಲ್ಲಿ 45 ಅಭ್ಯರ್ಥಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದ ಐವರು ಅಭ್ಯರ್ಥಿಗಳು ಗೈರು ಹಾಜರಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಭ್ಯರ್ಥಿಗಳು ತಂದಿರುವ ಒಎಂಆರ್ ಶೀಟ್​ಗಳಿಗೂ ಈಗಾಗಲೇ ಕೆಪಿಎಸ್ಸಿಯಿಂದ ಪಡೆದ ಮೂಲ ಒಎಂಆರ್ ಶೀಟ್​ಗಳಿಗೆ ಹೋಲಿಕೆ‌ ಮಾಡಲಾಗುತ್ತಿದೆ. ಬೆಂಗಳೂರಿನ ಪರೀಕ್ಷಾ ಕೇಂದ್ರ ಒಂದರಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗಷ್ಟೇ ನೋಟಿಸ್ ನೀಡಲಾಗಿತ್ತು. ತಮಗೆ ಸಿಕ್ಕಿರುವ ಸಾಕ್ಷಿಗಳನ್ನ ಆಧರಿಸಿ ಸಿಐಡಿ ವಿಚಾರಣೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.