ETV Bharat / city

ಶ್ರೀಕಿ ವಿರುದ್ಧ 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ.. - charge sheet against Shreeki

ಹ್ಯಾಕರ್ ಶ್ರೀಕಿ ವಿರುದ್ಧ ವೆಬ್‌ಸೈಟ್ ಹ್ಯಾಕಿಂಗ್ ಪ್ರಕರಣದಲ್ಲಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ವಿಶೇಷ ನ್ಯಾಯಾಲಯಕ್ಕೆ ಶ್ರೀಕಿ ಸೇರಿ 18 ಆರೋಪಿಗಳ ವಿರುದ್ಧ 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ..

CID filed a 500 page charge sheet against Shreeki
ಶ್ರೀಕಿ ವಿರುದ್ಧ 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ
author img

By

Published : Dec 17, 2021, 1:54 PM IST

ಬೆಂಗಳೂರು : ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದ ಅಂತಾರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ವೆಬ್‌ಸೈಟ್ ಹ್ಯಾಕಿಂಗ್ ಪ್ರಕರಣದಲ್ಲಿ ಸಿಐಡಿ ಆರೋಪಪಟ್ಟಿ ಸಲ್ಲಿಸಿದೆ. ವಿಶೇಷ ನ್ಯಾಯಾಲಯಕ್ಕೆ ಶ್ರೀಕಿ ಸೇರಿ 18 ಆರೋಪಿಗಳ ವಿರುದ್ಧ 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಣ ವರ್ಗಾವಣೆ ಸಂಬಂಧ ದಾಖಲೆ ಕೂಡ ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 420, ಐಟಿ ಕಾಯ್ದೆಯ ಸೆಕ್ಷನ್ 43 ಮತ್ತು ಸೆಕ್ಷನ್ 66ರ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಶ್ರೀಕಿ ಗುತ್ತಿಗೆದಾರರಾಗಿರುವ ತನ್ನ ಸ್ನೇಹಿತ ಮತ್ತು ಸಹ ಆರೋಪಿಯ ನಿರ್ದೇಶನದ ಮೇರೆಗೆ ಹ್ಯಾಕ್ ಮಾಡಿದ್ದ ಎಂದು ಉಲ್ಲೇಖಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಎಸ್​ವೈ-ಬೊಮ್ಮಾಯಿ‌ ಆಪ್ತ ಸಮಾಲೋಚನೆ.. ಸಚಿವ ಭೈರತಿ ಪರ ನಿಲ್ಲಲು ಹಾಲಿಗೆ ಮಾಜಿ ಸಿಎಂ ಸಲಹೆ..

2019ರಲ್ಲಿ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್ ಮಾಡಿ 11.55 ಕೋಟಿ ರೂ. ಕದಿಯಲಾಗಿತ್ತು. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ವೇಳೆ ಇ-ಪ್ರಕ್ಯೂರ್‌ಮೆಂಟ್‌ ವೆಬ್ ಸೈಟ್ ಮಾತ್ರವಲ್ಲದೇ 3 ಬಿಟ್ ಕಾಯಿನ್ ಎಕ್ಸ್ ಚೇಂಜ್ ಏಜೆನ್ಸಿಗಳು, 10 ಪೋಕರ್ ವೆಬ್‌ಸೈಟ್ ಗಳು ಮತ್ತು 3 ಮಾಲ್‌ವೇರ್‌ ಎಕ್ಸ್‌ಪ್ಲೋಟೆಡ್ ಅನ್ನು ಶ್ರೀಕಿ ಹ್ಯಾಕ್ ಮಾಡಿದ್ದು ಬೆಳಕಿಗೆ ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.