ETV Bharat / city

ವೃಷಾಭಾವತಿ ವ್ಯಾಲಿಗೆ ಕೆಮಿಕಲ್ ನೀರು ಹಾಕುತ್ತಿದ್ದ ವಾಹನ ವಶಕ್ಕೆ - Chemical water flow into the Vrushabhavati river

ಕೆಮಿಕಲ್ ನೀರನ್ನು ವೃಷಭಾವತಿ ನದಿಗೆ ಹರಿಸುತ್ತಿದ್ದ ಟ್ಯಾಂಕರ್​​​ ಮತ್ತು ಚಾಲಕನನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಶಕ್ಕೆ ಪಡೆದುಕೊಂಡಿದೆ.

Vehicle seized KS PCB
ವಾಹನ ವಶಕ್ಕೆ ಪಡೆದ ಕೆಎಸ್​ಪಿಸಿಬಿ
author img

By

Published : Dec 11, 2020, 11:29 PM IST

ಬೆಂಗಳೂರು: ವೃಷಭಾವತಿ ವ್ಯಾಲಿಗೆ ನಸುಕಿನ ಜಾವ ಕೆಮಿಕಲ್ ನೀರು ಹರಿಸುತ್ತಿದ್ದ ಟ್ಯಾಂಕರ್​​​ ಮತ್ತು ಚಾಲಕನನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೃಷ್ಣ ಗಾರ್ಡನ್ ಹಾಗೂ ಕಾನ್ಕಾರ್ಡ್ ಬಡಾವಣೆಯ ನಿವಾಸಿಗಳು ವೃಷಭಾವತಿ ನದಿಗೆ ನಸುಕಿನ ಜಾವ ಕೈಗಾರಿಕೆಗಳಿಂದ ತಂದ ರಾಸಾಯನಿಕ ನೀರನ್ನು ಹರಿಸುತ್ತಾರೆ ಎಂದು ಕೆಎಸ್​ಪಿಸಿಬಿಗೆ ದೂರು ಸಲ್ಲಿಸಿದ್ದರು. ಹೀಗಾಗಿ, ಕಾರ್ಯಾಚರಣೆ ಕೈಗೊಳ್ಳಲೆಂದೇ ಗಸ್ತು ತಿರುಗಲು ಮಾರ್ಷಲ್ಸ್ ಅನ್ನು ಕೆಎಸ್​ಪಿಸಿಬಿ ನೇಮಿಸಿತು. ಈ ಮೂಲಕ ಘಟನೆ ಪತ್ತೆ ಹಚ್ಚಲಾಗಿದೆ.

ಕೆಎಸ್​ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು

ಈ ಬಗ್ಗೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಮಾತನಾಡಿ, ವ್ಯಾಲಿಗೆ ತ್ಯಾಜ್ಯ ನೀರು ಹರಿಸುವ ಬಗ್ಗೆ ದೂರು ಕೇಳಿಬಂದಿತ್ತು. ಈ ಬಗ್ಗೆ ತಂಡವೊಂದನ್ನು ರಚಿಸಿ, ಗಸ್ತು ವಾಹನ ನಿಯೋಜಿಸಲಾಗಿತ್ತು. ಮೂರ್ನಾಲ್ಕು ಕಡೆ ನಾಕಾಬಂದಿ ಹಾಕಿ ರಾತ್ರಿ ಕಾರ್ಯಾಚರಣೆ ನಡೆಸಿದಾಗ ನದಿಗೆ ತ್ಯಾಜ್ಯ ನೀರು ಹಾಕುತ್ತಿದ್ದದ್ದು ಪತ್ತೆಯಾಗಿದೆ. ಈ ವಾಹನ ಯಾವ ಕಾರ್ಖಾನೆಗೆ ಸೇರಿದ್ದು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಪತ್ತೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.