ETV Bharat / city

ಎಟಿಎಂಗಳಲ್ಲಿ ಸಹಾಯ ಕೇಳುವಾಗ ಹುಷಾರ್: ಯಾಕಂದ್ರೆ ಇಂತವರು ಇರ್ತಾರೆ!

author img

By

Published : Jul 2, 2022, 10:08 PM IST

ಎಟಿಎಂಯಿಂದ ಹಣ ಡ್ರಾ ಮಾಡುವಾಗ ಜಾಗೃತಿ ವಹಿಸಬೇಕು. ಎಟಿಎಂ ಪಿನ್ ನಂಬರ್ ಯಾರಿಗೂ ಹೇಳಬಾರದು ಎಂದು ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

ATM theft
ಎಟಿಎಂ ದರೋಡೆ

ಬೆಂಗಳೂರು: ಎಟಿಎಂಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿ ಮಲ್ಲಿನಾಥ್ ಅಂಗಡಿ ಎಂಬಾತನನ್ನು (32) ಈಶಾನ್ಯ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 15 ಗ್ರಾಂ ತೂಕದ 4 ಚಿನ್ನದ ಸರಗಳು, 3 ಚಿನ್ನದ ಉಂಗುರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆದು ಒಂದು ಡೆಬಿಟ್ ಕಾರ್ಡ್‌ ಪಡೆದುಕೊಂಡು ಹಣ ಪಡೆಯಲು ಎಟಿಎಂಗೆ ಹೋಗುತ್ತಿದ್ದ. ಸಹಾಯ ಮಾಡುವ ನೆಪದಲ್ಲಿ ಪಿನ್ ನಂಬರ್ ತಿಳಿದುಕೊಂಡು ಡೆಬಿಟ್ ಕಾರ್ಡ್ ಬದಲಿಸಿ, ನಂತರ ಹಣ ವಿಥ್ ಡ್ರಾ ಮಾಡಿಕೊಳ್ಳುತ್ತಿದ್ದ. ಈ ಕುರಿತು ಸಿಇಎನ್ ಠಾಣೆ ನೀಡಲಾದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಟಿಎಂಯಿಂದ ಹಣ ಡ್ರಾ ಮಾಡುವಾಗ ಜಾಗೃತಿ ವಹಿಸಿ: ಎಟಿಎಂ ಅಲ್ಲಿ ಹಣ ಪಡೆಯುವ ವೇಳೆ ಜಾಗೃತಿ ವಹಿಸಿ. ಯಾವುದೇ ಅಪರಿಚಿತ ವ್ಯಕ್ತಿಯನ್ನು ನಂಬಬೇಡಿ. ಸಹಾಯ ಪಡೆದರೂ ಅವರಿಗೆ ಪಿನ್ ನಂಬರ್ ತಿಳಿಸಬೇಡಿ ಎಂದು ಈ ಪ್ರಕರಣದ ಬಳಿಕ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

(ಇದನ್ನೂ ಓದಿ: ಕಳ್ಳತನವಾಗಿದ್ದ ದೇವರ ವಿಗ್ರಹ ಸೇರಿ 1 ಕೆಜಿ ಚಿನ್ನ, 8 ಕೆಜಿ ಬೆಳ್ಳಿ ಪತ್ತೆ ಹಚ್ಚಿದ ಪೊಲೀಸರು: ಖುಷಿಯಲ್ಲಿ ವಾರಸುದಾರರು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.