ಬೆಂಗಳೂರು: 4 ನೇ ಹಂತದ ಲಾಕ್ಡೌನ್ ಸಡಿಲಿಕೆಯಾದ ಮೇಲೆ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ನಿಗಮವೂ ಟಿಕೆಟ್ ನೀಡದೆ ಬಸ್ಪಾಸ್ ನೀಡಿ ಪ್ರಯಾಣಿಕರ ಬೇಬಿಗೆ ಕತ್ತರಿ ಹಾಕಿತ್ತು. ಈ ಹಿನ್ನೆಲೆ ಪ್ರಯಾಣಿರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಹೊಸ ಪಾಸ್ ಪರಿಚಯಿಸಿದೆ.
ಮೊದಲು ಪರಿಚಯಿಸಿದ ಪಾಸ್ಗೆ 70 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಇದರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಬಸ್ ಇದ್ದರೂ ಸಹ ಪ್ರಯಾಣಿಕರು ನಿಲ್ದಾಣದ ಕಡೆಗೆ ಮುಖ ಹಾಕುತ್ತಿರಲಿಲ್ಲ. ಹಾಗಾಗಿ ಇದೀಗ ಪ್ರಯಾಣಿಕರ ಮನವಿಗೆ ಸ್ಪಂದಿಸಿರುವ ಬಿಎಂಟಿಸಿ, 70 ರೂ. ಪಾಸ್ ದರವನ್ನು 50 ರೂ.ಗೆ ಇಳಿಕೆ ಮಾಡಿದೆ. ಜೊತೆಗೆ ಹೊಸದಾಗಿ 5, 10 ಹಾಗೂ 15, 20, 30 ರೂಪಾಯಿಗಳ ಪಾಸ್ಗಳ ಪರಿಚಯ ಮಾಡಿದೆ.
ಹೊಸ ಪಾಸ್ ದರದ ವಿವರ ಹೀಗಿದೆ:
1) 2 ಕಿ.ಮೀ ವರೆಗೆ- 5 ರೂ.
2) 3-4 ಕಿ.ಮೀ ವರೆಗೆ-10ರೂ.
3) 5-6 ಕಿ.ಮೀ ವರೆಗೆ -15 ರೂ.
4) 7-14 ಕಿ.ಮೀ ವರೆಗೆ- 20 ರೂ.
5)15-40 ಕಿ.ಮೀ ವರೆಗೆ-25 ರೂ.
6) 41ಕಿ.ಮೀ ಗಿಂತ ಹೆಚ್ಚಿನ ದೂರ ಪ್ರಯಾಣಿಸಿದರೆ 30 ರೂಪಾಯಿ ನಿಗದಿ ಮಾಡಿದೆ.