ETV Bharat / city

ವೃದ್ಧೆಯರನ್ನೆ ಟಾರ್ಗೇಟ್ ಮಾಡಿ ಸರಗಳ್ಳತನ : ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ

ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಇನ್ಸ್​​ಪೆಕ್ಟರ್ ಹಜರೇಶ್ ಮತ್ತು ತಂಡ ಬಂಧಿಸಿದೆ..

chain snatching case
ಬೆಂಗಳೂರು ಸರಗಳ್ಳತನ ಪ್ರಕರಣ
author img

By

Published : Apr 8, 2022, 10:07 AM IST

ಬೆಂಗಳೂರು : ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ಹುಸೇನ್, ಅಪ್ಸರ್ ಅಹಮ್ಮದ್, ಅಸ್ಗರ್ ಮಾದಿ ಹಾಗೂ ತೌಸಿಫ್ ಬಂಧಿತ ಆರೋಪಿಗಳು.

chain snatching case: four accused arrested
ಸರಗಳ್ಳತನ ಪ್ರಕರಣ : ಬಂಧಿತ ಆರೋಪಿಗಳು

ಸರಗಳ್ಳರು ಏರಿಯಾಗಳಲ್ಲಿ ರೌಂಡ್ಸ್ ಹೊಡೆದು ಮೊದಲು ಏರಿಯಾ ಸರ್ವೆ ಮಾಡುತ್ತಿದ್ದರು. ಯಾವ ರಸ್ತೆಯಲ್ಲಿ ಸರಗಳವು ಮಾಡಿದರೆ ಸುಲಭವಾಗಿ ಎಸ್ಕೇಪ್ ಆಗಬಹುದು ಎಂದು ಪ್ಲ್ಯಾನ್ ಮಾಡುತ್ತಿದ್ದರು. ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವ ಮಹಿಳೆಯರು, ವೃದ್ಧೆಯರನ್ನು ಟಾರ್ಗೆಟ್ ಮಾಡಿ, ಪಲ್ಸರ್ ಬೈಕ್ ಹಾಗೂ ಡಿಯೋ ಬೈಕ್​​ಗಳಲ್ಲಿ ಬಂದು ಸರಗಳ್ಳತನ ಮಾಡುತಿದ್ದರು. ಕೃತ್ಯವೆಸಗಿದ ಮಾರ್ಗ‌‌ ಮಧ್ಯೆ ಬೈಕ್‌ನಲ್ಲೇ ಬಿಡುತ್ತಿದ್ದರು.

ಸರಗಳ್ಳತನ ಪ್ರಕರಣ : ಸಿಸಿಬಿ ಇನ್ಸ್​​ಪೆಕ್ಟರ್ ಹಜರೇಶ್ ಮಾಹಿತಿ ನೀಡುತ್ತಿರುವುದು..

ಸೂಕ್ತ ಮಾಹಿತಿ ಪಡೆದ ಸಿಸಿಬಿ ಇನ್ಸ್​​ಪೆಕ್ಟರ್ ಹಜರೇಶ್ ಮತ್ತು ತಂಡ ಸರಗಳ್ಳರನ್ನು ಬಂಧಿಸಿ 10ಕ್ಮೂ ಹೆಚ್ಚು ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 25 ಲಕ್ಷ ಬೆಲೆ ಬಾಳುವ 490 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ವಿವಿಧ ಅಪರಾಧ‌‌ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.