ETV Bharat / city

ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲ.. ವಿಚಾರಣೆಗೆ ಹಾಜರಾಗಲು ದಿಗಂತ್-ಐಂದ್ರಿತಾಗೆ ಸಿಸಿಬಿ ನೋಟಿಸ್ - ಸ್ಯಾಂಡಲ್​ವುಡ್​​ ಡ್ರಗ್ಸ್​ ಪ್ರಕರಣ

ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜು ಆರೋಪ ಹೊತ್ತಿರುವ ಶೇಖ್ ಫಾಜಿಲ್ ಸದ್ಯ ತಲೆಮರೆಸಿಕೊಂಡಿದ್ದಾನೆ. ನಾಳಿನ ವಿಚಾರಣೆಯಲ್ಲಿ ಶೇಖ್‌ ಫಾಜಿಲ್​ನೊಂದಿಗೆ ‌ನಂಟಿರುವ ಬಗ್ಗೆ ಐಂದ್ರಿತಾ ರೇಯನ್ನು ಸಿಸಿಬಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ..

ccb-sent-notices-to-actor-digant-and-aindrita-for-attend-inquiry
ದಿಗಂತ್ ಐಂದ್ರಿತಾ
author img

By

Published : Sep 15, 2020, 3:16 PM IST

ಬೆಂಗಳೂರು : ಶ್ರೀಲಂಕಾದ‌‌ ಕೊಲಂಬೊದ ಕ್ಯಾಸಿನೋ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗುಳಿ‌ ಕೆನ್ನೆ ನಟ ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೇ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಗೆ ಹಾಜರಾಗುವಂತೆ ದಿಗಂತ್-ಐಂದ್ರಿತಾಗೆ ಸಿಸಿಬಿ ನೋಟಿಸ್

ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್ ಫಾಜಿಲ್ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಭಾಗಿಯಾಗಿರುವುದಾಗಿ ಐಂದ್ರಿತಾ ರೇ ಹೇಳಿಕೆ ನೀಡಿದ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋ ಆಧರಿಸಿ ನಾಳೆ ಬೆಳಗ್ಗೆ 11 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ‌ ಕಚೇರಿಗೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ.‌

ಶೇಖ್​​ ಫಾಜಿಲ್​​ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ನಟ-ನಟಿಯರನ್ನು ಹೈಫೈ ಫಾರ್ಟಿಗಳಿಗೆ‌ ಆಹ್ವಾನಿಸುತ್ತಿದ್ದ. ಇದರಂತೆ ನಟಿ ಸಂಜನಾ‌ ಗಲ್ರಾನಿ, ಐಂದ್ರಿತಾ ರೇ ಪಾರ್ಟಿಗೆ ಹೋಗಿ ಬಂದಿದ್ದರು.‌

ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜು ಆರೋಪ ಹೊತ್ತಿರುವ ಶೇಖ್ ಫಾಜಿಲ್ ಸದ್ಯ ತಲೆಮರೆಸಿಕೊಂಡಿದ್ದಾನೆ. ನಾಳಿನ ವಿಚಾರಣೆಯಲ್ಲಿ ಶೇಖ್‌ ಫಾಜಿಲ್​ನೊಂದಿಗೆ ‌ನಂಟಿರುವ ಬಗ್ಗೆ ಐಂದ್ರಿತಾ ರೇಯನ್ನು ಸಿಸಿಬಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.