ETV Bharat / city

ಬೆಂಗಳೂರು ಗಲಭೆ: ಮಫ್ತಿಯಲ್ಲಿ ಸಂಪತ್​ರಾಜ್ ಆರೋಗ್ಯದ ಬಗ್ಗೆ ವಿಚಾರಿಸಿದ ಸಿಸಿಬಿ

ಬೆಂಗಳೂರು ಗಲಭೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮಾಜಿ ಮೇಯರ್ ಸಂಪತ್​ ರಾಜ್ ಆರೋಗ್ಯದ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Bengaluru violence case
ಬೆಂಗಳೂರು ಗಲಭೆ ಪ್ರಕರಣ
author img

By

Published : Oct 21, 2020, 2:45 PM IST

ಬೆಂಗಳೂರು: ಡಿ.ಜೆ‌.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸುವಂತೆ ಹೈಕೋರ್ಟ್​ ಸೂಚನೆ ನೀಡಿದ್ದರಿಂದ ಸಿಸಿಬಿ ಪೊಲೀಸರು ಮಾಜಿ ಮೇಯರ್ ಸಂಪತ್​ರಾಜ್​ ಆರೋಗ್ಯದ ಬಗ್ಗೆ ಸ್ಥಿತಿ ವಿಚಾರಿಸಿದ್ದಾರೆ.

ಮಾಜಿ ಮೇಯರ್ ಸಂಪತ್ ರಾಜ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಪ್ರಕರಣದ ತನಿಖೆಗೆ ಸಂಪತ್ ರಾಜ್ ಬಂಧನ ಅತ್ಯಗತ್ಯವಾಗಿದ್ದು, ಸಂಪತ್​ ರಾಜ್ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಸಿಸಿಬಿ ಪೊಲೀಸರು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರು. ಈಗ ಹೆಬ್ಬಾಳ ಬಳಿಯಿರುವ ಖಾಸಗಿ ಆಸ್ಪತ್ರೆಗೆ ಮಫ್ತಿಯಲ್ಲಿ ತೆರಳಿ ಸಂಪತ್​​ ರಾಜ್ ಆರೋಗ್ಯದ ಮಾಹಿತಿ ಕಲೆಹಾಕಿದ್ದಾರೆ.

ಸಿಸಿಬಿ ಈಗ ಆರೋಗ್ಯ ಇಲಾಖೆ ನೀಡುವ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಿದ್ದಾರೆ. ಮತ್ತೊಂದೆಡೆ ಸಂಪತ್​ ಜೊತೆ ಸಂಪರ್ಕ ಹೊಂದಿದ್ದ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್​ ಕೂಡಾ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.

ಮಾಜಿ ಮೇಯರ್ ಕಾಲ್ ಲಿಸ್ಟ್​​​ ಸಿಸಿಬಿ ಕೈಗೆ

ಮಾಜಿ ಮೇಯರ್ ಸಂಪತ್​ ರಾಜ್ ಸಿಸಿಬಿ ವಿಚಾರಣೆಗೆ ಒಂದು ಬಾರಿ ಹಾಜರಾಗಿದ್ದರು. ಇದೇ ವೇಳೆ ಸಿಸಿಬಿ ಪೊಲೀಸರು ಸಂಪತ್ತ್ ರಾಜ್ ಮೊಬೈಲ್ ಜಪ್ತಿ ಮಾಡಿದ್ದರು. ತದನಂತರ ಎಫ್​​ಎಸ್ಎಲ್​ಗೆ ಮೊಬೈಲ್ ಅನ್ನು ರವಾನೆ ಮಾಡಿದ್ದರು.

ಘಟನೆ ನಡೆಯುವ ಕೆಲ ವಾರಗಳ ಮುಂಚೆ ಸಂಪತ್ ರಾಜ್ ಮಾತನಾಡಿದ್ದ ಕಾಲ್ ಲಿಸ್ಟ್​​ಗಳು ಸಿಸಿಬಿ ಕೈ ಸೇರಿವೆ. ಕಾಲ್​ ಲಿಸ್ಟ್​​ನಲ್ಲಿ ಬೆಂಗಳೂರು ಗಲಭೆಯಲ್ಲಿ ಬಂಧಿತರಾದ ಪ್ರಮುಖ ಅಪರಾಧಿಗಳ ಬಗ್ಗೆ ಮಾತನಾಡಿರುವ ಬಗ್ಗೆ ಗೊತ್ತಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.