ETV Bharat / city

ವಿವಿಧ ಕಂಪನಿಗಳಿಗೆ ಗ್ರಾಹಕರ ಮಾಹಿತಿ ನೀಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದವ ಅಂದರ್​!

ವಿವಿಧ ಕಂಪನಿಗಳಿಗೆ ಗ್ರಾಹಕರ ಮಾಹಿತಿ ನೀಡುವುದಾಗಿ ನಂಬಿಸಿ ವಂಚಿಸಿದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.‌ ನಾಪತ್ತೆಯಾಗಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

sandeep patil
ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್
author img

By

Published : Nov 30, 2021, 7:01 AM IST

ಬೆಂಗಳೂರು: ವಿಮಾ, ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ವಿವಿಧ ಕಂಪನಿಗಳಿಗೆ ಗ್ರಾಹಕರ ಮಾಹಿತಿ ನೀಡುವುದಾಗಿ ನಂಬಿಸಿ ಹಂತ - ಹಂತವಾಗಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಮೂಲಕ ವಂಚಿಸಿರುವ ಆರೋಪದಡಿ ಖಾಸಗಿ ಕಂಪನಿಯೊಂದರ ಮಾಲೀಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.‌ ನಿಶ್ಚಿತ್ ಸಿ.ಎಸ್ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿ ಸ್ಟೇಕ್ ಮ್ಯಾನೇಜ್​ಮೆಂಟ್ ಸಲ್ಯೂಷನ್ ಕಂಪನಿ ಮಾಲೀಕನಾಗಿದ್ದು, ಹಲವು ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದ ಎನ್ನುವ ಆರೋಪವಿದೆ. ಸಿಸಿಬಿ ನಗರ ಘಟಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನ.26 ರಂದು ದಾಖಲಾದ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ವಂಚನೆ ಪ್ರಕರಣ - ಸಂದೀಪ್​ ಪಾಟೀಲ್​ ಮಾಹಿತಿ ನೀಡಿರುವುದು

ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ಕಚೇರಿ ತೆರೆದು ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಫೊಸೀಸ್ ಕಂಪನಿ ಹೆಸರಿನಲ್ಲಿ ನಕಲಿ ಐಡಿ:

ಸ್ಟೇಕ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ ಪ್ರೈ.ಲಿ. ಕಂಪನಿಯ ಸಿಬ್ಬಂದಿಯಿಂದ ಇ - ಮೇಲ್ ಮೂಲಕ ಮೆಸೇಜ್ ಮಾಡಿ ಎಲ್‌ಐಸಿ ಲೀಡ್‌ಗಳನ್ನು ಕೊಡುವುದಾಗಿ ಗ್ರಾಹಕರು ಮತ್ತು ಏಜೆಂಟ್‌ಗಳನ್ನು ಪರಿಚಯಿಸಿಕೊಳ್ಳುತ್ತಿದ್ದರು. ಅಲ್ಲದೇ, ಇನ್ಫೋಸಿಸ್ ಕಂಪನಿಯ ಹೆಚ್‌ಆರ್‌ಎ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿ ಎಲ್‌ಐಸಿ ಗ್ರಾಹಕರುಗಳ ಲೀಡ್‌ಗಳನ್ನು ಕೊಡುವುದಾಗಿ ಹೇಳಿ ನಂಬಿಸಿದ್ದರು.

ಬಳಿಕ ಹಂತ ಹಂತವಾಗಿ 14 ಲಕ್ಷ ರೂ. ಪಡೆದುಕೊಂಡು ಯಾವುದೇ ಲೀಡ್ ಕೊಡದೇ ಮೋಸ ಮಾಡಿದ್ದಾರೆ ಎಂದು ವಂಚನೆಗೊಳಗಾದವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಜ್ಯಾದ್ಯಂತ ಸ್ಟೇಕ್ ಮ್ಯಾನೇಜ್‌ಮೆಂಟ್ ಸೆಲ್ಯೂಷನ್ ಪ್ರೈ.ಲಿ. ಕಂಪನಿ ಹೆಸರಿನಲ್ಲಿ ಇ-ಪ್ರಾಫಿಟ್ ಶ್ಯೂರ್ ವೆಬ್‌ಸೈಟ್ ಮೂಲಕ ವ್ಯವಹಾರ ನಡೆಸಲಾಗುತ್ತಿತ್ತು. ಇದರಲ್ಲಿ ಇನ್ಸ್ಯೂರೆನ್ಸ್ ಸಾಲಕ್ಕೆ ಸಂಬಂಧಿಸಿದ ಮಾಹಿತಿ, ರಿಯಲ್ ಎಸ್ಟೇಟ್ ಪ್ರಾಡೆಕ್ಟ್, ಪ್ಲಾನಿಂಗ್, ಫೈನಾನ್ಷಿಯಲ್ ಪ್ಲಾನಿಂಗ್ ಇತ್ಯಾದಿಗಳಿಗೆ ಸಲಹೆ ನೀಡುವುದಾಗಿ ಕಂಪನಿಯ ಮಹಿಳಾ ಸಿಬ್ಬಂದಿ ಗ್ರಾಹಕರು ಮತ್ತು ಏಜೆಂಟ್‌ಗಳಿಗೆ ಕರೆ ಮಾಡಿ ಸಂಪರ್ಕಿಸುತ್ತಿದ್ದರು.

ಏಜೆಂಟ್‌ಗಳಿಗೆ ಬೇಕಾಗಿರುವ ಅಗತ್ಯ ಗ್ರಾಹಕರ ಮಾಹಿತಿ ನೀಡುವುದಾಗಿ ನಂಬಿಸುತ್ತಿದ್ದರು. ಇದಕ್ಕೆ ಹಂತ ಹಂತವಾಗಿ ಹಣ ಪಡೆದುಕೊಂಡು ಬಳಿಕ ಯಾವುದೇ ಲೀಡ್‌ಗಳನ್ನು ಕೊಡದೇ ಆರೋಪಿಗಳು ವಂಚಿಸುತ್ತಿದ್ದರು. ಇನ್ನು ಬಂಧಿತ ಆರೋಪಿ ವಿಚಾರಣೆ ವೇಳೆ ಇದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ದನ ಬೆದರಿಸುವ ಸ್ಪರ್ಧೆ: ವ್ಯಕ್ತಿಯನ್ನು ಮೇಲಕ್ಕೆತ್ತಿ ಎಸೆದ ಹೋರಿ.. VIDEO

ಈ ಹಿಂದೆ ಸ್ಟೇಕ್ ಮ್ಯಾನೇಜ್‌ಮೆಂಟ್ ಸೆಲ್ಯೂಷನ್ ಪ್ರೈ.ಲಿ. ಕಂಪನಿಯ ಹೆಸರಿನಲ್ಲಿ ಮಲ್ಲೇಶ್ವರ ಹಾಗೂ ಕೋರಮಂಗಲದಲ್ಲಿ ಕಚೇರಿ ತೆರೆದು ಸಾರ್ವಜನಿಕರಿಗೆ ವಂಚಿಸಲಾಗಿದೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ಹಾಗೂ ಕೇರಳದ ವೈಯನಾಡಿನ ಕಲ್‌ಪೇಟ್ಟ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ಇನ್ನು ಕೋರಮಂಗಲ ಮತ್ತು ಮಲ್ಲೇಶ್ವರದಲ್ಲಿರುವ ಸ್ಟೇಕ್ ಮ್ಯಾನೇಜ್‌ಮೆಂಟ್ ಸೆಲ್ಯೂಷನ್ ಪ್ರೈ.ಲಿ. ಕಂಪನಿಯಲ್ಲಿ ಹಲವು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.