ETV Bharat / city

ನಿರ್ದೇಶಕ ಇಂದ್ರಜಿತ್ ಲಂಕೇಶ್​ಗೆ ಸಿಸಿಬಿ ನೋಟಿಸ್​

ಸ್ಯಾಂಡಲ್​ವುಡ್​ನಲ್ಲಿ‌ ಯಾರ್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಪೊಲೀಸರು ಭದ್ರತೆ ನೀಡಿದರೆ ಎಲ್ಲವನ್ನೂ ಹೇಳುವೆ ಎಂದು ಹೇಳಿಕೆ ನೀಡಿದ್ದ ಲಂಕೇಶ್​ಗೆ, ಪೊಲೀಸರು‌ ನೋಟಿಸ್ ನೀಡಿದ್ದಾರೆ. ಮಾಹಿತಿ ನೈಜವಾಗಿದ್ದರೆ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

CCB Notice to Director Indrajit Lankesh
ಇಂದ್ರಜಿತ್ ಲಂಕೇಶ್​ಗೆ ಸಿಸಿಬಿ ನೋಟಿಸ್​
author img

By

Published : Aug 29, 2020, 4:11 PM IST

ಬೆಂಗಳೂರು: ಎನ್​ಆರ್​ಬಿ ಅಧಿಕಾರಿಗಳ ಜೊತೆಗೂಡಿರುವ ಸಿಸಿಬಿ ಪೊಲೀಸರು, ಬೃಹತ್ ಮಾದಕ ದ್ರವ್ಯ ಜಾಲ ಪ್ರಕರಣ ಸಂಬಂಧ ನಿರ್ದೇಶಕ ಇಂದ್ರಜಿತ್ ಲಂಕೇಶ್​​ಗೆ ನೊಟೀಸ್ ನೀಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ‌ ಯಾರ್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಪೊಲೀಸರು ಭದ್ರತೆ ನೀಡಿದರೆ ಎಲ್ಲವನ್ನೂ ಹೇಳುವೆ ಎಂದು ಹೇಳಿಕೆ ನೀಡಿದ್ದ ಲಂಕೇಶ್​ಗೆ, ಪೊಲೀಸರು‌ ನೋಟಿಸ್ ನೀಡಿದ್ದಾರೆ. ಈ ವೇಳೆ ಪೊಲೀಸರು ಲಂಕೇಶ್ ಅವರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಮಾಹಿತಿ ನೈಜವಾಗಿದ್ದರೆ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಮಾದಕ ದ್ರವ್ಯ ಸಾಗಣೆ ಪ್ರಕರಣವನ್ನು ಎನ್‌ಆರ್​ಬಿ ಅಧಿಕಾರಿಗಳು ತನಿಖೆ‌ ನಡೆಸುತ್ತಿದ್ದಾರೆ. ಅವರ ತನಿಖೆ ಅಡ್ಡಿಪಡಿಸುವುದಿಲ್ಲ. ಇನ್ನೊಂದೆಡೆ ಸ್ಯಾಂಡಲ್​ವುಡ್​ನಲ್ಲಿ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಬಗ್ಗೆ ಮಾತನಾಡಿರುವ ನಿರ್ದೇಶಕರಿಗೆ ಪೊಲೀಸ್ ಭದ್ರತೆ ಕೊಡುತ್ತೇವೆ. ಅವರು ಈ ಬಗ್ಗೆ‌ ಪೊಲೀಸರಿಗೆ ಹೇಳುವುದಾರೆ ಹೇಳಲಿ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ನಿರ್ದೇಶಕರಿಗೆ ನೋಟಿಸ್ ನೀಡಬಹುದಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.