ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ವಿಚಾರದಲ್ಲಿ ಸಿಸಿಬಿ ಮುತ್ತಪ್ಪ ರೈ ವಿಚಾರಣೆ ನಡೆಸುತ್ತಿದ್ದು, ಅನಾರೋಗ್ಯದ ನಡುವೆಯೂ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸಿಸಿಬಿ ಎಸಿಪಿ ವೇಣುಗೋಪಾಲ್ ಹಾಗೂ ಇನ್ಸ್ಪೆಕ್ಟರ್ ಬೋಳೆತ್ತಿನ ಅವರು ಮುತ್ತಪ್ಪ ರೈ ಮನೆಗೆ ತೆರಳಿ 2 ಗಂಟೆಗಳ ಕಾಲ ರವಿ ಪೂಜಾರಿ ಕುರಿತು ವಿಚಾರಣೆ ನಡೆಸಿದ್ದಾರೆ. ಸದ್ಯ ಮುತ್ತಪ್ಪ ರೈ ಆರೋಗ್ಯ ಬಹಳ ಹದಗೆಟ್ಟಿದೆ. ಮತ್ತೊಂದೆಡೆ ಭೂಗತ ಪಾತಕಿ ರವಿ ಪೂಜಾರಿ ಮುತ್ತಪ್ಪ ರೈ ಜೊತೆ ಬಹಳ ಒಡನಾಟ ಹೊದಿದ್ದ. ಹಾಗೆಯೇ ಇಬ್ಬರೂ ಕೆಲವೊಂದು ವ್ಯವಹಾರಗಳನ್ನ ನಡೆಸಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಹೀಗಾಗಿ ರವಿ ಪೂಜಾರಿ ಜೊತೆ ಮುತ್ತಪ್ಪ ರೈ ಒಡನಾಟ ಹೇಗಿತ್ತು. ಕೆಲವು ಕೇಸ್ಗಳಲ್ಲಿ ಮುತ್ತಪ್ಪ ರೈ ಕೂಡ ಭಾಗಿಯಾಗಿದ್ದು ಯಾಕೆ ಭಾಗಿಯಾಗಿದ್ರಿ. ರವಿ ಪೂಜಾರಿ ಎಲ್ಲಿ ಹೇಗೆ ಪರಿಚಯ, ಭೂಗತ ಜಗತ್ತಿನಲ್ಲಿ ಯಾರ ಜೊತೆ ಜಾಸ್ತಿ ಒಡನಾಟ ಹೊಂದಿದ್ದಿರಿ, ಎನ್ನುವ ಕುರಿತು ಪ್ರಶ್ನೆ ಮಾಡಿದ್ದಾರೆ.
ಸದ್ಯ ರವಿ ಪೂಜಾರಿ ಮೇಲೆ ಒಟ್ಟು 90ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ, ಅದರಲ್ಲಿ ಬೆಂಗಳೂರಿನಲ್ಲಿ 39 ಪ್ರಕರಣಗಳು ಹಾಗೂ ಮಂಗಳೂರಿನಲ್ಲಿ ಕೂಡ ಇದೆ. ಈ ಹಿನ್ನೆಲೆ ಸತತ 2 ಗಂಟೆಗಳ ಕಾಲ. ಮುತ್ತಪ್ಪ ರೈ ವಿಚಾರಣೆ ನಡೆಸಿದ್ದು ಮುಂದೆ ಇನ್ನಷ್ಟು ತನಿಖೆಗೆ ಅಗತ್ಯವಿದ್ದರೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.