ETV Bharat / city

ವಿಡಿಯೋ ಗೇಮ್ಸ್ ಮೂಲಕ ಜೂಜು ನಡೆಸುತ್ತಿದ್ದ ಐವರನ್ನು ಬಂಧಿಸಿದ ಸಿಸಿಬಿ.. - ವಿಡಿಯೋ ಗೇಮ್ಸ್ ಜೂಜು

ಸಿಸಿಬಿ ಪೊಲೀಸರು ವಿಡಿಯೋ ಗೇಮ್ಸ್ ಜೂಜು ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ..

CCB arrested five people under video games gambling case
ವಿಡಿಯೋ ಗೇಮ್ಸ್ ಮೂಲಕ ಜೂಜಾಟ ನಡೆಸಿದವರ ಬಂಧನ
author img

By

Published : Nov 26, 2021, 7:39 PM IST

ಬೆಂಗಳೂರು : ವಿಡಿಯೋ ಗೇಮ್ಸ್ ಜೂಜು ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 5 ಮಂದಿಯನ್ನು ಬಂಧಿಸಿ 10 ಸಾವಿರ ರೂ. ಹಣ, 83 ವಿಡಿಯೋ ಗೇಮ್ ಯಂತ್ರಗಳು ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್​ಕೆಬಿ ರಸ್ತೆಯ ರಂಖನಗರದ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ಸಾಯಿ ವಿನಾಯಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್​ ಅಸೋಸಿಯೇಷನ್‌ನಲ್ಲಿ ಐದಾರು ಮಂದಿ ಸೇರಿ ಹಣವನ್ನು ಪಣವಾಗಿಟ್ಟುಕೊಂಡು ವಿಡಿಯೋ ಗೇಮ್ಸ್ ಜೂಜಾಟ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾವು ಯಾರ ಜೊತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ಆರೋಪಿಗಳ ವಿರುದ್ಧ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಪೊಲೀಸ್ ಆಯುಕ್ತ ಹನುಮಂತರಾಯ ಹಾಗೂ ಇನ್‌ಸ್ಪೆಕ್ಟರ್ ಶಿವಪ್ರಸಾದ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.