ETV Bharat / city

ಕಾಂಪ್ರೆಹೆನ್ಸಿವ್ ವಿಮೆಯಲ್ಲಿ ಕಾರಿನ ಪ್ರಯಾಣಿಕ ಕೂಡ ಸೇರಿರುತ್ತಾನೆ: ಹೈ ಕೋರ್ಟ್ - ಬೆಂಗಳೂರು

ವಿಮಾ ಪ್ಯಾಕೇಜ್ ಪಾಲಿಸಿ ಅಡಿಯಲ್ಲಿ ಕಾರಿನ ಪ್ರಯಾಣಿಕ ಕೂಡ ವಿಮೆಯ ಪರಿಹಾರಕ್ಕೆ ಹಕ್ಕುದಾರ ಎಂದು ರಾಜ್ಯದ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

car driver also comes under comprehensive insurance covers high court
ಸಮಗ್ರ ವಿಮೆಯಲ್ಲಿ ಕಾರಿನ ಪ್ರಯಾಣಿಕ ಕೂಡ ಸೇರಿರುತ್ತಾರೆ: ಹೈ ಕೋರ್ಟ್
author img

By

Published : Aug 10, 2021, 3:01 AM IST

ಬೆಂಗಳೂರು: ಸಮಗ್ರ ವಿಮಾ ಪ್ಯಾಕೇಜ್ ಪಾಲಿಸಿ ಅಡಿಯಲ್ಲಿ ಕಾರಿನ ಪ್ರಯಾಣಿಕ ಕೂಡ ವಿಮೆಯ ಪರಿಹಾರಕ್ಕೆ ಹಕ್ಕುದಾರ. ವಿಮೆ ಸಂಸ್ಥೆ ಪರಿಹಾರ ನೀಡಬೇಕು ಎಂದು ಬೆಂಗಳೂರು ವಾಹನ ಅಪಘಾತ ಕ್ಲೇಮ್ ಹೈಕೋರ್ಟ್ ಹೇಳಿದ್ದು, ನ್ಯೂ ಇಂಡಿಯಾ ಇನ್ಸೂರೆನ್ಸ್ ಸಂಸ್ಥೆಗೆ 6 ವಾರದೊಳಗೆ 14.9 ಲಕ್ಷ ರೂ.ಶೇ. 6ರಷ್ಟು ಬಡ್ಡಿಯ ಸಮೇತ ಪರಿಹಾರ ನೀಡಲು ಹೇಳಿದೆ. ಮೋಟಾರು ವಾಹನ ಅಪಘಾತ ಕ್ಲೇಮ್ ನ್ಯಾಯಾಧಿಕರಣ ತೀರ್ಪನ್ನು ಎತ್ತಿಹಿಡಿದಿದೆ.

ಪುಣೆ ಮೂಲದ ಅರೆಕ್‌ ಟೂಲಿಂಗ್‌ ಸೆರ್ಮೊ ಇಂಡಿಯಾ ಪ್ರೈವೇಟ್‌ ಲಿಮಿಟಿಡೆಟ್‌ ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ 2009ರ ನವೆಂಬರ್ 16 ಹಾಗೂ 2009ರ ಡಿಸೆಂಬರ್‌ 3 ರಂದು ಎರಡೂ ಸುತ್ತೋಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ನಿಲುವನ್ನ ಸ್ಪಷ್ಟಪಡಿಸಿದೆ ಎಂದು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಹೇಳಿದರು. ಇದಲ್ಲದೆ ನ್ಯಾಯಾಧೀಶರು IRDA ಸುತ್ತೋಲೆಗಳನ್ನ ಸರ್ವೋಚ್ಚ ನ್ಯಾಯಾಲಯ ಬಾಲಕೃಷ್ಣ ಪ್ರಕರಣದಲ್ಲಿ ದಾಖಲಿಸಿಕೊಂಡಿದೆ. ಹಾಗೂ ಈ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.