ETV Bharat / city

ಕೊರೊನಾ ಎಫೆಕ್ಟ್: ರಾಜ್ಯದ ಎಲ್ಲಾ ನ್ಯಾಯಾಲಯಗಳ ಬೇಸಿಗೆ ರಜೆ ರದ್ದು

author img

By

Published : Apr 17, 2020, 9:26 PM IST

ರಾಜ್ಯದಲ್ಲಿ ತಿಂಗಳಿಗೂ ಹೆಚ್ಚು ಕಾಲ ರಜೆ ನೀಡಿರುವ ಕಾರಣ ಎಲ್ಲಾ ಕೋರ್ಟ್​​ಗಳಿಗೆ ಬೇಸಿಗೆ ರಜೆ ರದ್ದುಪಡಿಸಲಾಗಿದೆ.

Cancel summer leave for the courts
ಬೇಸಿಗೆ ರಜೆ ರದ್ದು ಮಾಡಿದ ಹೈಕೋರ್ಟ್

ಬೆಂಗಳೂರು: ಕೊರೊನಾ ಭೀತಿಯಿಂದ ಲಾಕ್​​​​​ಡೌನ್ ಜಾರಿ‌ ಮಾಡಿದ ಬಳಿಕ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್​​​​​​​​​ಗಳಿಗೆ ತಿಂಗಳಿಗೂ ಹೆಚ್ಚು ಕಾಲ ರಜೆ ನೀಡಿದ್ದರ ಪರಿಣಾಮ ಈ ವರ್ಷದ ಬೇಸಿಗೆ ರಜೆ ರದ್ದುಪಡಿಸಲಾಗಿದೆ.

ಲಾಕ್​​​​​ಡೌನ್ ಜಾರಿ ಮಾಡಿದ ಬಳಿಕ ಹೈಕೋರ್ಟ್,‌ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಮಾರ್ಚ್ 24ರಿಂದ ಮೇ 3ರವರೆಗೆ ರಜೆ ಘೋಷಿಸಿದೆ. ಹೀಗಾಗಿ, ಏಪ್ರಿಲ್ 27ರಿಂದ ಮೇ. 24ರವರೆಗೆ ನಿಗದಿಯಾಗಿದ್ದ ಬೇಸಿಗೆ ರಜೆಯನ್ನು ರದ್ದು ಮಾಡಿ ಹೈಕೋರ್ಟ್​ನ ಪೂರ್ಣ ಪೀಠ ನಿರ್ಣಯ ಕೈಗೊಂಡಿದೆ.

ಕೊರೊನಾ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಲಾಕ್​​​​​ಡೌನ್ ಜಾರಿ ಮಾಡಿದಾಗ ಮೊದಲಿಗೆ ಮಾರ್ಚ್ 24ರಿಂದ‌ ಏ. 14ರವರೆಗೆ ಹೈಕೋರ್ಟ್ ಸೇರಿ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿತ್ತು‌.

ಕೇಂದ್ರ ಮತ್ತೆ ಲಾಕ್​​​​​ಡೌನ್ ಆದೇಶವನ್ನು ಮೇ. 3ರವರೆಗೆ ವಿಸ್ತರಿಸಿದ ಕಾರಣ ಕೋರ್ಟ್​​​ಗಳಿಗೆ ನೀಡಿದ್ದ ರಜೆಯನ್ನೂ ಮೇ. 3ರವರೆಗೂ ವಿಸ್ತರಿಸಿ ಹೈಕೋರ್ಟ್ ಆದೇಶಿಸಿತ್ತು. ರಜೆ ಹೆಚ್ಚಾಗಿ ನೀಡಿದ ಕಾರಣ ಏ. 27ರಿಂದ ಮೇ‌ 24ರವರೆಗೆ ನಿಗದಿಯಾಗಿದ್ದ ಬೇಸಿಗೆ ರಜೆಯನ್ನು ರದ್ದುಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.