ಬೆಂಗಳೂರು: 16 ವಿವಿಧ ಸಂಪುಟ ಉಪಸಮಿತಿಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ವಿವಿಧ ಸಂಪುಟ ಉಪಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಆದೇಶಿಸಲಾಗಿದೆ.
ಕೃಷ್ಣಾ, ಮಹಾದಾಯಿ ಹಾಗೂ ಇತರ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ನ್ಯಾಯಾಧೀಕರಣಗಳ ತೀರ್ಪುಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಹಾಗೂ ಕೃಷ್ಣಾ ಮೇಲ್ದಂಡೆ ಹಂತ-3ಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಭೂ ಪರಿಹಾರ ದರ ನಿಗದಿಪಡಿಸುವ ಕುರಿತು ಪರಿಶೀಲಿಸಲು ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅಧ್ಯಕ್ಷರಾಗಿರಲಿದ್ದು, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಸಿಸಿ ಪಾಟೀಲ್, ಹಾಲಪ್ಪ ಆಚಾರ್, ಶಶಿಕಲಾ ಜೊಲ್ಲೆ ಸದಸ್ಯರಾಗಿರಲಿದ್ದಾರೆ.
ಇನ್ನು ರಾಜ್ಯದಲ್ಲಿನ ಬರ, ಪ್ರವಾಹ ಪರಿಸ್ಥಿತಿ ಹಾಗೂ ಇತರ ನೈಸರ್ಗಿಕ ವಿಪತ್ತುಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷರಾಗಿರಲಿದ್ದು, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ, ಬಿ.ಸಿ. ಪಾಟೀಲ್, ಪ್ರಭು ಚೌಹಾಣ್, ಮುನಿರತ್ನ ಸದಸ್ಯರಾಗಿರಲಿದ್ದಾರೆ.
ಬೆಂಬಲ ಬೆಲೆ ನಿಗದಿ ಕುರಿತ ಸಂಪುಟ ಉಪಸಮಿತಿಗೆ ಸಚಿವ ಉಮೇಶ ಕತ್ತಿ ಅಧ್ಯಕ್ಷರಾಗಿರಲಿದ್ದರೆ, ಸಚಿವರಾದ ಬಿ.ಸಿ. ಪಾಟೀಲ್, ಮುನಿರತ್ನ, ನಾರಾಯಣಗೌಡ, ಎಸ್.ಟಿ, ಸೋಮಶೇಖರ್, ಶಶಿಕಲಾ ಜೊಲ್ಲೆ ಮತ್ತು ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಸದಸ್ಯರಾಗಿರಲಿದ್ದಾರೆ.
ಹೈದ್ರಾಬಾದ್-ಕರ್ನಾಟಕ ಪ್ರದೇಶ ಮೇಲಿನ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಚಿವ ಬಿ. ಶ್ರೀರಾಮುಲು
ಸದಸ್ಯರು - ಮುರುಗೇಶ್ ರುದ್ರಪ್ಪ ನಿರಾಣಿ, ಆನಂದ್ ಸಿಂಗ್, ಹಾಲಪ್ಪ ಆಚಾರ್, ಬಿ.ಸಿ. ನಾಗೇಶ್, ಪ್ರಭು ಚೌಹಾಣ್
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತ ಪರಿಶೀಲಿಸಿ ಸಚಿವ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಚಿವ ಜೆ.ಸಿ. ಮಾಧುಸ್ವಾಮಿ
ಸದಸ್ಯರು - ಸಚಿವ ಉಮೇಶ ವಿಶ್ವನಾಥ ಕತ್ತಿ, ಡಾ.ಕೆ. ಸುಧಾಕರ್, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಹಾಲಪ್ಪ ಆಚಾರ್
ರಾಜ್ಯದಲ್ಲಿ ಬೃಹತ್ ಬಂಡವಾಳ ಹೂಡಿಕೆ ಪ್ರಸ್ತಾವನೆ ಪರಿಶೀಲಿಸಿ ವಿಶೇಷ ರಿಯಾಯಿತಿ ಮತ್ತು ಉತ್ತೇಜನಗಳನ್ನು ಮಂಜೂರು ಮಾಡುವ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಿಎಂ ಬಸವರಾಜ ಬೊಮ್ಮಾಯಿ
ಸದಸ್ಯರು - ಮುರುಗೇಶ್ ರುದ್ರಪ್ಪ ನಿರಾಣಿ, ಆರ್. ಅಶೋಕ್, ವಿ. ಸೋಮಣ್ಣ, ಡಾ.ಅಶ್ವತ್ಥ ನಾರಾಯಣ, ವಿ. ಸುನೀಲ್ ಕುಮಾರ್, ಕೆ. ಗೋಪಾಲಯ್ಯ
ಪರಿಶಿಷ್ಟ ಜಾತಿ / ಪಂಗಡಗಳ ಹಿಂಬಾಕಿ (ಬ್ಯಾಕ್‌ಲಾಗ್) ಹುದ್ದೆ ಭರ್ತಿ ಮಾಡುವ ಬಗ್ಗೆ ಪರಾಮರ್ಶಿಸಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಗೋವಿಂದ ಎಂ. ಕಾರಜೋಳ
ಸದಸ್ಯರು - ಸಚಿವ ಬಿ. ಶ್ರೀರಾಮುಲು, ಕೋಟಾ ಶ್ರೀನಿವಾಸ ಪೂಜಾರಿ, ಅಂಗಾರ ಎಸ್., ಪ್ರಭು ಚೌಹಾಣ್, ಎಂಟಿಬಿ ನಾಗರಾಜು
ಸರ್ಕಾರದ ವಿವಿಧ ಇಲಾಖೆ/ಕಚೇರಿಗಳ ವಿಲೀನಾತಿ, ರದ್ದತಿ ಹಾಗೂ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ವಿವಿಧ ವೃಂದಗಳ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ/ಹುದ್ದೆಗಳ ರದ್ಧತಿ/ಮರುವಿನ್ಯಾಸ ಕುರಿತು ಹಾಗೂ ಈ ಸಂಬಂಧ 6ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಗಮನದಲ್ಲಿರಿಸಿಕೊಂಡು, ಪರಿಶೀಲಿಸಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಆರ್. ಅಶೋಕ್
ಸದಸ್ಯರು - ಕೋಟಾ ಶ್ರೀನಿವಾಸ ಪೂಜಾರಿ, ಜೆ.ಸಿ.ಮಾಧುಸ್ವಾಮಿ, ಡಾ. ಅಶ್ವಥ ನಾರಾಯಣ, ಕೆ. ಸುಧಾಕರ್, ಆರಗ ಜ್ಞಾನೇಂದ್ರ
NICE ಯೋಜನೆಯಡಿ ಬರುವ ಜಮೀನುಗಳ ಬಗ್ಗೆ ಇರುವ ವ್ಯಾಜ್ಯಗಳ ಕುರಿತು ಪರಿಶೀಲಿಸಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಿ.ಸಿ.ಪಾಟೀಲ್
ಸದಸ್ಯರು - ಆರ್.ಅಶೋಕ್, ಗೋವಿಂದ ಎಂ. ಕಾರಜೋಳ, ಎಸ್.ಟಿ. ಸೋಮಶೇಖರ್
ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಎ ವೃಂದದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ, ದಂಡನೆ ವಿಧಿಸುವ ಸಂಬಂಧ ಲೋಕಾಯುಕ್ತರ ಉಪ ಲೋಕಾಯುಕ್ತರ ಶಿಫಾರಸ್ಸುಗಳನ್ನು ತಿರಸ್ಕರಿಸುವ, ಮಾರ್ಪಾಡಿಸುವ ಪ್ರಸ್ತಾವನೆಗಳನ್ನು ಪರಾಮರ್ಶಿಸಲು ಸಂಪುಟ ಉಪಸಮಿತಿ:
ಅಧ್ಯಕ್ಷ - ಜೆ.ಸಿ. ಮಾಧುಸ್ವಾಮಿ
ಸದಸ್ಯರು - ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ, ಬಿ. ಶ್ರೀರಾಮುಲು, ಅಂಗಾರ ಎಸ್, ಶಿವರಾಂ ಹೆಬ್ಬಾರ್
ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸಂರಕ್ಷಣಾ ನಿಗಮದ ಕ್ರಿಯಾ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವುದನ್ನು ಮೇಲ್ವಿಚಾರಣೆ ಮಾಡಲು/ನಿರ್ಣಯಗಳನ್ನು ತೆಗೆದುಕೊಳ್ಳಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಚಿವ ಆನಂದ್ ಸಿಂಗ್
ಸದಸ್ಯರು - ಸಚಿವ ಉಮೇಶ್ ಕತ್ತಿ, ಸಿ.ಸಿ. ಪಾಟೀಲ್, ಕೆ. ಸುಧಾಕರ್, ಹಾಲಪ್ಪ ಆಚಾರ್, ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ ಮತ್ತು ಸುತ್ತಮುತ್ತಲಿನ 52 ಜನವಸತಿಗಳಿಗೆ ಜಲ ಜೀವನ್ ಮಿಷನ್‌ನಡಿ ನೀರು ಸರಬರಾಜು ಮಾಡುವ ಯೋಜನೆ ಕುರಿತು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಚಿವ ಕೆ.ಎಸ್. ಈಶ್ವರಪ್ಪ
ಸದಸ್ಯರು - ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ, ಮುನಿರತ್ನ, ನಾರಾಯಣಗೌಡ, ಕೆ.ಗೋಪಾಲಯ್ಯ
ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮತ್ತು ಡಾ|| ಕಸ್ತೂರಿ ರಂಗನ್ ವರದಿ ಹಾಗೂ ಇತರೆ ಸಂಬಂಧಿಸಿದ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಚಿವ ಉಮೇಶ್ ಕತ್ತಿ
ಸದಸ್ಯರು - ಸಚಿವ ಆರ್. ಅಶೋಕ್, ಮುರುಗೇಶ್ ಆರ್. ನಿರಾಣಿ, ಭೈರತಿ ಬಸವರಾಜ, ಆನಂದ್ ಸಿಂಗ್
ಗ್ರಾಮೀಣ ಪ್ರದೇಶಗಳಲ್ಲಿ 'ಇ-ಸ್ವತ್ತು ಮತ್ತು ನಗರ ಪ್ರದೇಶಗಳಲ್ಲಿ ಇ-ಖಾತಾ (FORM-3) ನೀಡುವ ಕುರಿತು ಪರಾಮರ್ಶಿಸಲು ಸಚಿವ ಸಂಪುಟದ ಉಪಸಮಿತಿ ರಚಿಸಿರುವ ಬಗ್ಗೆ ಪರಾಮರ್ಶಿಸಲು ರಚಿಸಲಾಗಿರುವ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಚಿವ ಕೆ.ಎಸ್. ಈಶ್ವರಪ್ಪ
ಸದಸ್ಯರು - ಆರ್. ಅಶೋಕ್, ಜೆ.ಸಿ.ಮಾಧುಸ್ವಾಮಿ, ಭೈರತಿ ಬಸವರಾಜ, ಎಂಟಿಬಿ ನಾಗರಾಜು, ಶಿವರಾಂ ಹೆಬ್ಬಾರ್, ಕೆ. ಗೋಪಾಲಯ್ಯ
ಕರ್ನಾಟಕ ರಾಜ್ಯ ಜಲ ನೀತಿಯ ಕುರಿತು ಪರಾಮರ್ಶಿಸಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಗೋವಿಂದ ಎಂ. ಕಾರಜೋಳ
ಸದಸ್ಯರು - ಕೆ.ಎಸ್. ಈಶ್ವರಪ್ಪ, ಮುರುಗೇಶ್ ನಿರಾಣಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಎಂಟಿಬಿ ನಾಗರಾಜು, ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ
ಕಾವೇರಿ ನೀರಾವರಿ ಯೋಜನೆಗಳ ಅನುಷ್ಠಾನ/ ನ್ಯಾಯಾಧೀಕರಣಗಳ ತೀರ್ಪುಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಲು ರಚಿಸಲಾದ ಸಂಪುಟ ಉಪಸಮಿತಿ:
ಅಧ್ಯಕ್ಷ - ಸಿಎಂ ಬಸವರಾಜ್ ಬೊಮ್ಮಾಯಿ
ಸದಸ್ಯರು - ಗೋವಿಂದ ಎಂ. ಕಾರಜೋಳ, ಆರ್. ಅಶೋಕ್, ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಎಸ್.ಟಿ. ಸೋಮಶೇಖರ್