ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳುತ್ತಿದ್ದು, ಶುಕ್ರವಾರವೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಜನವರಿ 29 ರಂದು ಬೆಳಗಾವಿ ಹಾಗು ಶಿವಮೊಗ್ಗ ಪ್ರವಾಸಕ್ಕೆ ತೆರಳಲಿರುವ ಸಿಎಂ, 30ನೇ ತಾರೀಖಿನಂದು ದೆಹಲಿಗೆ ತೆರಳುತ್ತಿದ್ದಾರೆ. ಅಂದು ಬೆಳಗ್ಗೆ 11.30ರ ವಿಮಾನದಲ್ಲಿ ದೆಹಲಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರಲ್ಲಿ ಟಿಕೆಟ್ ಬುಕ್ ಆಗಿದೆ ಎನ್ನುವ ಮಾಹಿತಿ ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಜನವರಿ 30ರ ರಾತ್ರಿಯೇ ಸಿಎಂ ದೆಹಲಿಯಿಂದ ವಾಪಸ್ಸಾಗಲಿದ್ದು, ಮಾತುಕತೆ ಫಲಪ್ರದವಾದರೆ ಜ. 31 ರಂದೇ ನೂತನ ಸಚಿವರ ಪ್ರಮಾಣವಚನ ಸಮಾರಂಭವೂ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.