ETV Bharat / city

ಖಾಸಗಿ ಉದ್ಯಮಗಳಲ್ಲಿ ಆದ್ಯತೆ ಮೇರೆಗೆ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಸಂಪುಟ ನಿರ್ಧಾರ

ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಕಡ್ಡಾಯಗೊಳಿಸಲು ಹಿಂಜರಿದಿರುವ ಸರ್ಕಾರ, ಆದ್ಯತೆಯ ಮೇಲೆ ಈ ಹುದ್ದೆಗಳನ್ನು ಕನ್ನಡಿಗರಿಗೆ ಒದಗಿಸಬೇಕು ಎಂದು ಕಂಪನಿಗಳಿಗೆ ಮನವಿ ಮಾಡಿಕೊಂಡಿದೆ.

cabinet-decision-to-create-employment-for-kannadigaas
author img

By

Published : Oct 31, 2019, 10:08 PM IST

ಬೆಂಗಳೂರು: ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಕಡ್ಡಾಯಗೊಳಿಸಲು ಹಿಂಜರಿದಿರುವ ಸರ್ಕಾರ, ಆದ್ಯತೆಯ ಮೇಲೆ ಈ ಹುದ್ದೆಗಳನ್ನು ಕನ್ನಡಿಗರಿಗೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಕಡ್ಡಾಯಗೊಳಿಸುವ ಸಂಬಂಧ 2016ರಲ್ಲೇ ಶಿಫಾರಸು ಬಂದಿತ್ತು. ಆದರೆ ಅದನ್ನು ಜಾರಿಗೊಳಿಸಲಿರುವ ಅಡ್ಡಿಗಳನ್ನು ಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

ರಾಜ್ಯದ 37 ಪ್ರಾಥಮಿಕ ಶಾಲಾ ಮಕ್ಕಳಿಗೆ ತಲಾ ₹ 250 ವೆಚ್ಚದಲ್ಲಿ 2ನೇ ಸಮವಸ್ತ್ರ ನೀಡಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಜವಳಿ ಹಾಗೂ ಟೆಕ್ಸ್​ಟೈಲ್ಸ್​ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಎ, ಬಿ, ಸಿ ಮತ್ತು ಡಿ ಎಂಬ ವಲಯಗಳನ್ನು ಮಾಡಿದೆ. ಎ ವಲಯವನ್ನು ಹೈದ್ರಾಬಾದ್-ಕರ್ನಾಟಕ ವಿಭಾಗಕ್ಕೆ ನೀಡಲಾಗಿದೆ ಎಂದರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ

ರಾಜ್ಯದಲ್ಲಿ ಲಭ್ಯವಾಗುವ ಕಬ್ಬಿಣದ ಅದಿರಿನ ಪೈಕಿ ಆರು ಮಿಲಿಯನ್ ಟನ್ ಕಬ್ಬಿಣದ ಅದಿರು ಉಳಿಯುತ್ತಿದ್ದು, ಅದಿರನ್ನು ರಫ್ತು ಮಾಡುವ ಬದಲು ಕಬ್ಬಿಣವನ್ನಾಗಿ ಪರಿವರ್ತಿಸಿ ಮೌಲ್ಯವರ್ಧಿತ ತೆರಿಗೆ ರಾಜ್ಯಕ್ಕೆ ದಕ್ಕುವಂತೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಜಿಂದಾಲ್ ಸಂಸ್ಥೆ ಅವರು ಆಸ್ಟ್ರೇಲಿಯಾ ಹಾಗೂ ಒಡಿಶಾದಿಂದ 6 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಆ ಪ್ರಮಾಣದ ಉತ್ಪನ್ನ ನಮ್ಮಲ್ಲಿ ಉಳಿಯುತ್ತಿದೆ. ಆದರೆ ಯಾವ ಕಾರಣಕ್ಕೂ ಅದನ್ನು ರಫ್ತು ಮಾಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದರ ಬದಲು ಬಿಡಿಭಾಗಗಳ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಅದನ್ನು ಕಬ್ಬಿಣವನ್ನಾಗಿ ಮಾಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಗೆ ಹೊಸತಾಗಿ ಎಂಜಿನಿಯರ್​ಗಳನ್ನು ಕೆಪಿಎಸ್ ಮೂಲಕವೇ ನೇಮಕ ಮಾಡಿಕೊಳ್ಳುವ ಸಂಬಂಧ ಸಂಪುಟ ಸಭೆ ತೀರ್ಮಾನಿಸಿದೆ. ಕೊಡಗು ಹಾಗೂ ರಾಯಚೂರು ವೈದ್ಯಕೀಯ ಕಾಲೇಜುಗಳಿಗೆ 300 ಹಾಸಿಗೆಗಳ ಸಾಮರ್ಥ್ಯದ ಕಟ್ಟಡಗಳನ್ನು ಸ್ಥಾಪಿಸಲು ತಲಾ ₹37 ಕೋಟಿ ನೀಡಲಾಗುವುದು ಎಂದು ಹೇಳಿದರು.

ವಸತಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್​ ಒದಗಿಸಲು ₹17ಕೋಟಿ ನೀಡಲು ತೀರ್ಮಾನಿಸಲಾಗಿದೆ. ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಸೈನಿಕ ತರಬೇತಿ ಶಾಲೆ ಸ್ಥಾಪಿಸಲು ಹನ್ನೆರಡು ಎಕರೆ ಭೂಮಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿಗೆ ಸೇರಿರುವ ಮಂಚೇನಹಳ್ಳಿಯನ್ನು ಹೊಸ ತಾಲೂಕು ಎಂದು ಘೋಷಿಸಲು ಸಂಪುಟ ಅನುಮೋದನೆ ನೀಡಿದೆ. ಕಲ್ಯಾಣ ಕರ್ನಾಟಕದಲ್ಲಿ 83 ಪಶು ಪಶು ವೈದ್ಯಕೀಯ ಸಹಾಯಕರ ಹುದ್ದೆ, 61 ಪಶು ವೈದ್ಯಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕಾನೂನು ಕಾಲೇಜಿಗೆ ಯುಜಿಸಿ ಅಡಿಯಲ್ಲಿ ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ನೀಡಲು ನಿರ್ಧರಿಸಲಾಗಿದೆ. ಮೇವು ಬ್ಯಾಂಕ್ ಸ್ಥಾಪನೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಒಂದು ನೀತಿ ರೂಪಿಸಲು ತೀರ್ಮಾನಿಸಲಾಗಿದೆ. ಮಾವಳ್ಳಿಪುರ ಘನತ್ಯಾಜ್ಯ ನಿರ್ವಹಣ ಘಟಕದ 46 ಎಕರೆ ಜಮೀನುನ್ನು 20 ಎಕರೆ ಸ್ಥಳವನ್ನು ಎನ್​​ಇಜಿ ಸಂಸ್ಥೆಗೆ ನೀಡಲಾಗಿದೆ. ಆ ಸಂಸ್ಥೆ 600 ಮೆಟ್ರಿಕ್ ಟನ್ ಘನತ್ಯಾಜ್ಯ ಬಳಸಿ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಎನ್ ಇಜಿ ಸಂಸ್ಥೆಯವರು ಮುಂದೆ ಬಂದಿದ್ದಾರೆ. ಹಾಗಾಗಿ, 25 ವರ್ಷಕ್ಕೆ ಲೀಸ್ ಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Intro:ಬೆಂಗಳೂರು : ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಕಡ್ಡಾಯಗೊಳಿಸಲು ಹಿಂಜರಿದಿರುವ ಸರ್ಕಾರ, ಆದ್ಯತೆಯ ಮೇಲೆ ಈ ಹುದ್ದೆಗಳನ್ನು ಕನ್ನಡಿಗರಿಗೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದೆ.Body:ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಕಡ್ಡಾಯಗೊಳಿಸಲು ಮುಂದಾದರೆ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಇಲ್ಲವೇ ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂಬ ಕಾರಣಕ್ಕಾಗಿ ಸರ್ಕಾರ ಕನ್ನಡಿಗರ ಕೈ ಹಿಡಿದಂತೆ ಪ್ರದರ್ಶನ ಮಾಡುವಷ್ಟಕ್ಕೆ ಸೀಮಿತವಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ವಿವರ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಕಡ್ಡಾಯಗೊಳಿಸುವ ಸಂಬಂಧ 2016 ರಲ್ಲೇ ಶಿಫಾರಸು ಬಂದಿತ್ತು. ಆದರೆ ಅದನ್ನು ಜಾರಿಗೊಳಿಸಲು ಇರುವ ಅಡ್ಡಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಏನೇ ಕಾನೂನು ಮಾಡಲು ಹೋದರೂ ಬಂಡವಾಳ ಹೂಡಿಕೆದಾರರ ಮನಸ್ಸನ್ನೂ ಅರ್ಥ ಮಾಡಿಕೊಳ್ಳಬೇಕು. ಬಲವಂತವಾಗಿ ಏನನ್ನು ಮಾಡಲು ಹೋದರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು.
ರಾಜ್ಯದ ಮೂವತ್ತೇಳು ಶಾಲಾ ಮಕ್ಕಳಿಗೆ ತಲಾ 250 ರೂ ವೆಚ್ಚದಲ್ಲಿ ಎರಡನೇ ಸಮವಸ್ತ್ರ ನೀಡಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರ ನೀಡಿದರು.
ಈ ಹಿಂದೆ ಶಾಲಾ ಮಕ್ಕಳಿಗೆ ಒಂದೇ ಜತೆ ಸಮವಸ್ತ್ರ ಒದಗಿಸಲಾಗಿತ್ತು.ಆದರೆ ಒಂದು ಜತೆ ಸಮವಸ್ತ್ರ ಸಾಲದು ಎಂಬ ಕಾರಣಕ್ಕಾಗಿ ಹೈಕೋರ್ಟ್ ಎರಡನೇ ಜತೆ ಸಮವಸ್ತ್ರವನ್ನು ಒದಗಿಸಲು ಸೂಚನೆ ನೀಡಿತ್ತು.ಸರ್ಕಾರ ಅದನ್ನು ಪಾಲನೆ ಮಾಡಲು ತೀರ್ಮಾನಿಸಿದೆ ಎಂದರು.
ರಾಜ್ಯದಲ್ಲಿ ಜವಳಿ ಹಾಗೂ ಟೆಕ್ಸ್ಟೈಲ್ಸ್ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಎ,ಬಿ,ಸಿ ಮತ್ತು ಡಿ ಎಂಬ ವಲಯಗಳನ್ನು ಮಾಡಿದೆ. ಎ ವಲಯವನ್ನು ಹೈದ್ರಾಬಾದ್-ಕರ್ನಾಟಕ ವಿಭಾಗಕ್ಕೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಲಭ್ಯವಾಗುವ ಕಬ್ಬಿಣದ ಅದಿರಿನ ಪೈಕಿ ಆರು ಮಿಲಿಯನ್ ಟನ್ ಕಬ್ಬಿಣದ ಅದಿರು ಉಳಿಯುತ್ತಿದ್ದು ಇದನ್ನು ರಫ್ತು ಮಾಡುವ ಸಂಬಂಧ ಚರ್ಚೆ ನಡೆಯಿತು.ಆದರೆ ಅದಿರನ್ನು ರಫ್ತು ಮಾಡುವ ಬದಲು ಕಬ್ಬಿಣವನ್ನಾಗಿ ಪರಿವರ್ತಿಸಿ ಮೌಲ್ಯವರ್ಧಿತ ತೆರಿಗೆ ರಾಜ್ಯಕ್ಕೆ ದಕ್ಕುವಂತೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.
ಜಿಂದಾಲ್ ಸಂಸ್ಥೆಯವರು ಆಸ್ಟ್ರೇಲಿಯಾ ಹಾಗೂ ಒರಿಸ್ಸಾಗಳಿಂದ ಆರು ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುತ್ತಿದ್ದು ಇದರಿಂದಾಗಿ ಆ ಪ್ರಮಾಣದ ಉತ್ಪನ್ನ ನಮ್ಮಲ್ಲಿ ಉಳಿಯುತ್ತಿದೆ.ಆದರೆ ಯಾವ ಕಾರಣಕ್ಕೂ ಅದನ್ನು ರಫ್ತು ಮಾಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದರ ಬದಲು ರಾಜ್ಯದಲ್ಲಿರುವ ಬಿಡಿಭಾಗಗಳ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಅದನ್ನು ಕಬ್ಬಿಣವನ್ನಾಗಿ ಮಾಡಲಾಗುವುದು,ಬಿಡಿ ಭಾಗಗಳನ್ನು ಉತ್ಪಾದಿಸಲಾಗುವುದು ಎಂದು ಅವರು ವಿವರಿಸಿದರು.
ಲೋಕೋಪಯೋಗಿ ಇಲಾಖೆಗೆ ಹೊಸತಾಗಿ ಎಂಜಿನಿಯರುಗಳನ್ನು ಕೆಪಿಎಸ್ ಮೂಲಕವೇ ನೇಮಕ ಮಾಡಿಕೊಳ್ಳುವ ಸಂಬಂಧ ಸಂಪುಟ ಸಭೆ ತೀರ್ಮಾನಿಸಿದೆ. ಕೊಡಗು ಹಾಗೂ ರಾಯಚೂರು ವೈದ್ಯಕೀಯ ಕಾಲೇಜುಗಳಿಗೆ 300 ಹಾಸಿಗೆಗಳ ಸಾಮರ್ಥ್ಯದ ಕಟ್ಟಡಗಳನ್ನು ಸ್ಥಾಪಿಸಲು ತಲಾ ಮೂವತ್ತೇಳು ಕೋಟಿ ರೂಪಾಯಿ ನೀಡಲಾಗುವುದು ಎಂದು ಹೇಳಿದರು.
ವಸತಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ಗಳನ್ನು ಒದಗಿಸಲು ಹದಿನೇಳು ಕೋಟಿ ರೂಪಾಯಿಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಸೈನಿಕ ತರಬೇತಿ ಶಾಲೆ ಸ್ಥಾಪಿಸಲು ಹನ್ನೆರಡು ಎಕರೆ ಭೂಮಿ ನೀಡಲು ತೀರ್ಮಾನಿಲಾಗಿದೆ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿಗೆ ಸೇರಿರುವ ಮಂಚೇನಹಳ್ಳಿಯನ್ನು ಹೊಸ ತಾಲೂಕು ಎಂದು ಘೋಷಿಸಲು ಸಂಪುಟ ಅನುಮೋದನೆ ನೀಡಿದೆ. ಕಲ್ಯಾಣ ಕರ್ನಾಟಕದಲ್ಲಿ 83 ಪಶು ಪಶು ವೈದ್ಯಕೀಯ ಸಹಾಯಕರ ಹುದ್ದೆ, 61 ಪಶು ವೈದ್ಯಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕಾನೂನು ಕಾಲೇಜ್ ಗೆ ಯುಜಿಸಿ ಅಡಿಯಲ್ಲಿ ಬೋಧಕ ಸಿಬ್ಬಂದಿಗೆ ಏಳನೇ ವೇತನ ಆಯೋಗದ ಪರಿಷ್ಕೃತ ವೇತನ ನೀಡಲು ನಿರ್ಧರಿಸಲಾಗಿದೆ. ಮೇವು ಬ್ಯಾಂಕ್ ಸ್ಥಾಪನೆಗೆ ಹೆಚ್ಚು ಒತ್ತುವ ಕೊಡುವ ನಿಟ್ಟಿನಲ್ಲಿ ಒಂದು ನೀತಿಯನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾವಳ್ಳಿಪುರ ಘನತ್ಯಾಜ್ಯ ನಿರ್ವಹಣ ಘಟಕದ 46 ಎಕರೆ ಜಮೀನುನ್ನು 20 ಎಕರೆ ಸ್ಥಳವನ್ನು ಎನ್ ಇಜಿ ಸಂಸ್ಥೆಗೆ ನೀಡಲಾಗಿದೆ. ಆ ಸಂಸ್ಥೆ 600 ಮೆಟ್ರಿಕ್ ಟನ್ ಘನತ್ಯಾಜ್ಯ ಬಳಸಿ 12 ಮೆಕಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಎನ್ ಇಜಿ ಸಂಸ್ಥೆಯವರು ಮುಂದೆ ಬಂದಿದ್ದಾರೆ. ಹಾಗಾಗಿ, 25 ವರ್ಷಕ್ಕೆ ಲೀಸ್ ಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.