ಬೆಂಗಳೂರು: ರಾಜ್ಯದ ವಿಧಾನಪರಿಷತ್ನ 2 ಪದವೀಧರರ ಕ್ಷೇತ್ರಗಳು ಹಾಗೂ 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್ 28 ರಂದು ಈ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 2ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿನ ತಲಾ ಎರಡು ಸ್ಥಾನಗಳ ಅವಧಿ ಜೂನ್ ಮುಕ್ತಾಯವಾಗಿದ್ದು, ಕೋವಿಡ್ನಿಂದಾಗಿ ಚುನಾವಣೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿತ್ತು.
ಕೋವಿಡ್-19 ಕಾಲಘಟದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನ ಪರಿಷತ್ ಚುನಾವಣೆ ಇದಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚುನಾವಣೆ ಎದುರಿಸಬೇಕಾಗಿದೆ. ಆಯೋಗ ಕೂಡ ಚುನಾವಣೆ ವೇಳೆ ಕೋವಿಡ್-19 ನಿರ್ಬಂಧಗಳನ್ನು ಪಾಲಿಸಲು ಸಜ್ಜಾಗಿದೆ.