ETV Bharat / city

ಉಪಸಮರಕ್ಕೆ ಮುಹೂರ್ತ ಫಿಕ್ಸ್‌: ಇಲ್ಲಿದೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ

ಕೊನೆಗೂ 12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕವನ್ನು ಇಂದು ಬೆಂಗಳೂರಿನ‌‌ ಮುಖ್ಯ ಚುನಾವಣಾಧಿಕಾರಿ‌ ಕಚೇರಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರಕಟಿಸಿದ್ರು.

ಉಪಚುನಾವಣೆ ದಿನಾಂಕ ಘೋಷಣೆ ಮಾಡಿದ ಸಂಜೀವ್ ಕುಮಾರ್
author img

By

Published : Sep 21, 2019, 5:26 PM IST

ಬೆಂಗಳೂರು: 12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ‌ ಸಂಜೀವ್ ಕುಮಾರ್ ತಿಳಿಸಿದರು.

ಉಪಚುನಾವಣೆ ದಿನಾಂಕ ಘೋಷಣೆ ಮಾಡಿದ ಸಂಜೀವ್ ಕುಮಾರ್

-ಸೆಪ್ಟೆಂಬರ್ 30- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

-ಅಕ್ಟೋಬರ್ 3- ನಾಮಪತ್ರ ಹಿಂಪಡೆಯಲು ಕೊನೆಯ ದಿನ.

-ಅಕ್ಟೋಬರ್ 21ರಂದು ಚುನಾವಣೆ

- 24 ಕ್ಕೆ ಮತ ಎಣಿಕೆ

- 27 ಅಕ್ಟೋಬರ್‌ ಪ್ರಕ್ರಿಯೆ ಅಂತ್ಯ

- ಒಟ್ಟು ಮತದಾರರು 37,49,047

- ಪುರುಷ ಮತದಾರರು- 19,12,084

-ಮಹಿಳಾ ಮತದಾರರು- 18,36,566

- ಮೊದಲ ಬಾರಿ ಮತ ಹಾಕುವವರು- 70,619

- ಮತಗಟ್ಟೆಗಳ ಸಂಖ್ಯೆ 4,185

- ಚುನಾವಣಾ ಸಿಬ್ಬಂದಿ- 15,782

ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದೇನು?

ಚುನಾವಣಾ ಕೆಲಸದ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಈಗಾಗಲೇ ಚುನಾವಣೆಗೆ ಅಗತ್ಯವಾದ ವಿವಿಪ್ಯಾಟ್​ ಮತ್ತು ಮತಯಂತ್ರಗಳನ್ನು ಹೊಂದಿಸಿಕೊಳ್ಳಲಾಗಿದ್ದು, ನೆರೆಯ ರಾಜ್ಯಗಳಿಂದಲೂ ತರಿಸಿದ್ದೇವೆ. ಮತಪಟ್ಟಿಯಲ್ಲಿ ಹೆಸರಿರದ ಮತದಾರರು ಕೂಡಲೇ ಹೆಸರು ಸೇರಿಸಬೇಕು. ಮಂಗಳವಾರದ ನಂತರ ನಾವೂ ಈ ವಿಚಾರದಲ್ಲಿ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.‌

'ಅನರ್ಹ ಶಾಸಕರು ಸ್ಪರ್ಧೆ ಮಾಡಲು ಅವಕಾಶವಿಲ್ಲ'

ಚುನಾವಣಾ ತಕರಾರು ಅರ್ಜಿಗಳು ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆ ಮಸ್ಕಿ, ಆರ್ ಆರ್ ನಗರ ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ ಎಂದು ಸಂಜೀವ್ ಕುಮಾರ್ ತಿಳಿಸಿದರು. ಈ ವಿಚಾರ ಕೋರ್ಟ್‌ನಲ್ಲಿ ನಿರ್ಧಾರವಾಗುವವರೆಗೆ ಚುನಾವಣೆ ನಡೆಯಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡಲು ಅವಕಾಶವಿಲ್ಲ. ಸ್ಪೀಕರ್ ಆದೇಶ ಈ ಚುನಾವಣೆಗೂ ಅನ್ವಯವಾಗುವ ಹಿನ್ನೆಲೆ ಈ ಚುನಾವಣೆಯಲ್ಲಿ ಅನರ್ಹರಿಗೆ ಅವಕಾಶವಿಲ್ಲ ಅಂತ‌ ಮಾಹಿತಿ ನೀಡಿದರು.

ಮೈಸೂರು ದಸರಾ ಆಚರಣೆಗೆ ವಿಶೇಷ ಅನುಮತಿ;

ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಉಪ ಚುನಾವಣೆ ಅಡ್ಡಿಯಾಗಲಿದೆಯಾ? ಎಂಬ‌ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ದಸರಾಗೆ ವಿಶೇಷ ಅನುಮತಿ ಪಡೆಯುತ್ತಾರೆ. ಅನೇಕ ಬಾರಿ ಹೀಗಾಗಿದೆ. ದಸರಾ ಆಚರಣೆಯ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳಿಗೆ ಕೆಲವು ವಿಚಾರಗಳಲ್ಲಿ ಮಾತ್ರ ನಿರ್ಬಂಧ ಇರಲಿದೆ ಎಂದರು. ಇದೇ ವೇಳೆ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಹಿನ್ನೆಲೆ ಹಲವರು ಪರಿಹಾರಕ್ಕೆ ಮುಂದಾಗುತ್ತಿದ್ದು, ಇದಕ್ಕೂ ಕೂಡ ಯಾವುದೇ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದರು.

ಉಪಚುನಾವಣೆ ನಡೆಯುವ 15 ಕ್ಷೇತ್ರಗಳಾವುವು?

1)ಅಥಣಿ
2)ಕಾಗವಾಡ
3)ಗೋಕಾಕ್
4)ಯಲ್ಲಾಪುರ
5)ಹಿರೆಕೆರೂರ್
6)ರಾಣೆಬೆನ್ನೂರು
7)ವಿಜಯನಗರ
8)ಚಿಕ್ಕಬಳ್ಳಾಪುರ
9)ಕೆ.ಆರ್ ಪುರ
10)ಯಶವಂತಪುರ
11)ಮಹಾಲಕ್ಷ್ಮಿ ಲೇಔಟ್
12)ಶಿವಾಜಿನಗರ
13)ಹೊಸಕೋಟೆ
14)ಕೆ.ಆರ್ ಪೇಟೆ
15)ಹುಣಸೂರು.

Intro:12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆ..‌

ಬೆಂಗಳೂರು: ಅಂತೂ ಇಂತೂ 12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದೆ.. ಈ ಸಂಬಂಧ‌ ಇಂದು ಬೆಂಗಳೂರಿನ‌‌ ಮುಖ್ಯ ಚುನಾವಣಾಧಿಕಾರಿ‌ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಂದು ಸುದ್ದಿಗೋಷ್ಟಿ ನಡೆಸಿದರು..

ಇದೇ ವೇಳೆ ಮಾತಾನಾಡಿದ ಅವರು, ಕರ್ನಾಟಕದ ಒಟ್ಟು 15 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದೆ.. ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.. ಅಕ್ಟೋಬರ್ 3 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, 24 ಕ್ಕೆ ಮತ ಎಣಿಕೆ ಮತ್ತು 27 ಅಕ್ಟೋಬರ್ ಒಳಗೆ ಎಲ್ಲಾ ಕ್ಷೇತ್ರಗಳ ಚುನಾವಣೆ ಮುಗಿಯಲಿದೆ ಅಂತ ತಿಳಿಸಿದರು..‌

ಒಟ್ಟು, 37,49,047 ಮತದಾರರು ಇದ್ದು,
ಇವರಲ್ಲಿ 19,12, 084- ಪುರುಷರು, 1836566- ಮಹಿಳೆಯರು ಮತ್ತು 70619 ಮೊದಲ ಮತದಾರರು ಇದ್ದಾರೆ.. ಒಟ್ಟು 4185 ಮತಗಟ್ಟೆಗಳು ಇರಲಿದ್ದು 15,782 ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ.. ಸಿಬ್ಬಂದಿಗಳಿಗೆ ಚುನಾವಣಾ ಕೆಲಸದ ತರಬೇತಿ ನೀಡಲಾಗುತ್ತಿದೆ..‌

ಈಗಾಗಲೇ ಚುನಾವಣೆಗೆ ಅಗತ್ಯವಾದ ವಿವಿಪ್ಯಾಟ್ ಮತ್ತು ಮತಯಂತ್ರಗಳನ್ನು ಹೊಂದಿಸಿಕೊಳ್ಳಲಾಗಿದ್ದು, ನೆರೆಯ ರಾಜ್ಯಗಳಿಂದಲೂ ತರಿಸಿದ್ದೇವೆ ಅಂತ ತಿಳಿಸಿದರು..‌ ಇನ್ನು ಮತದಾರರು ತಮ್ಮ ಹೆಸರು ಮತಪಟ್ಟಿಯಲ್ಲಿ ಇರದಿದ್ರೆ ಕೂಡಲೇ ಅದನ್ನು ಸೇರಿಸುವ ಪ್ರಕ್ರಿಯೆ ಕ್ಷಿಪ್ರವಾಗಿ ಮಾಡಬೇಕು..
ಮಂಗಳವಾರದ ನಂತರ ನಾವೂ ಈ ವಿಚಾರದಲ್ಲಿ ಏನೂ ಮಾಡಲು ಸಾಧ್ಯವಾಗಲ್ಲ ಅಂತ‌ ಹೇಳಿದರು..‌

==============================

ಚುನಾವಣಾ ತಕರಾರು ಅರ್ಜಿಗಳು ಹೈಕೋರ್ಟಿನಲ್ಲಿ; ಮಸ್ಕಿ- ಆರ್ ಆರ್ ನಗರಕ್ಕಿಲ್ಲ ಬೈ ಎಲೆಕ್ಷನ್..

ಬೆಂಗಳೂರು: ಚುನಾವಣಾ ತಕರಾರು ಅರ್ಜಿಗಳು ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ ಅಂತ ಮುಖ್ಯ ಚುನಾವಣಾಧಿಕಾರಿ ಸಂಜೀವ್ ತಿಳಿಸಿದರು..
ಮಸ್ಕಿ ಮತ್ತು ಆರ್ ಆರ್ ನಗರ ವಿಚಾರಗಳು ಕೋರ್ಟಿನಲ್ಲಿದೆ. ಇದು ಕೋರ್ಟಿನಲ್ಲಿ ನಿರ್ಧಾರವಾಗುವವರಗೆ ಅಲ್ಲಿ ಚುನಾವಣೆ ಆಗಲ್ಲ ಸ್ಪಷ್ಟ ಪಡಿಸಿದರು..

**ಚುನಾವಣೆಯಲ್ಲಿ ಅನರ್ಹರಿಗೆ ಸ್ಪರ್ಧೆಗೆ ಅವಕಾಶವಿಲ್ಲ**

ಇನ್ನು‌ ಸ್ಪೀಕರ್ ಆದೇಶ ಈ ಚುನಾವಣೆಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಅನರ್ಹರಿಗೆ ಸ್ಪರ್ಧೆಗೆ ಅವಕಾಶವಿಲ್ಲ ಅಂತ‌ ಮಾಹಿತಿ ನೀಡಿದರು..

+++++++++++++++++++++++++++++
**ಮೈಸೂರು ದಸರಾ ಆಚರಣೆಗೆ ವಿಶೇಷ ಅನುಮತಿ; ನೆರೆ ಹಾವಳಿ ಪರಿಹಾರಕ್ಕಿಲ್ಲ ನೀತಿಸಂಹಿತೆ..***

ಇನ್ನು ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಉಪ ಚುನಾವಣೆ ಅಡ್ಡಿಯಾಗಲಿದ್ಯಾ ಎಂಬ‌ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ದಸರಾಗೆ ವಿಶೇಷ ಅನುಮತಿ ಪಡೆಯುತ್ತಾರೆ.. ಅನೇಕ ಬಾರಿ ಹೀಗಾಗಿದೆ.. ದಸರಾ ಆಚರಣೆಯ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳ ಕೆಲವು ವಿಚಾರಗಳಲ್ಲಿ ಮಾತ್ರ ನಿರ್ಬಂಧನೆ ಇರಲಿದೆ ಅಂತ ತಿಳಿಸಿದರು...

ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಹಿನ್ನೆಲೆ ಹಲವರು ಪರಿಹಾರಕ್ಕೆ ಮುಂದಾಗುತ್ತಿದ್ದು, ಇದಕ್ಕೂ ಕೂಡ ಯಾವುದೇ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಅಂತ ತಿಳಿಸಿದರು..
ಚುನಾವಣಾ ನೀತಿ ಸಂಹಿತೆ ಆಯಾ ಜಿಲ್ಲೆಗೆ ಅನ್ವಯವಾಗಲಿದ್ದು, ನೆರೆಪರಿಹಾರ ಕೆಲಸಕ್ಕೆ ಯಾವುದೇ ತೊಂದರೆಯಾಗಲ್ಲ, ಆದರೆ ರಾಜಕಾರಣಿಗಳು ಕಾರ್ಯಕ್ರಮ ಮತ್ತು ಉದ್ಘಾಟನೆ ಮಾಡುವಂತಿಲ್ಲ..

====================

ಯಾವ್ಯಾವುದು 15 ಕ್ಷೇತ್ರಗಳು???

1)ಅಥಣಿ
2)ಕಾಗವಾಡ
3)ಗೋಕಾಕ್
4)ಯಲ್ಲಾಪುರ
5)ಹಿರೆಕೆರೂರ್
6)ರಾಣೆಬೆನ್ನೂರು
7)ವಿಜಯನಗರ
8)ಚಿಕ್ಕಬಳ್ಳಾಪುರ
9)ಕೆ.ಆರ್ ಪುರ
10)ಯಶವಂತಪುರ
11)ಮಹಾಲಕ್ಷ್ಮಿ ಲೇಔಟ್
12)ಶಿವಾಜಿನಗರ
13)ಹೊಸಕೋಟೆ
14)ಕೆ.ಆರ್.ಪೇಟೆ
15)ಹುಣಸೂರು

KN_BNG_03_BYELECTION_PRESSMEET_SCRIPT_7201801

ಈಗಾಗಲೇ ವಿಡಿಯೋ ಬ್ಯಾಕ್ ಪ್ಯಾಕ್ ಮೂಲಕ ಎಲೆಕ್ಷನ್‌ಕಮಿಷನ್‌‌ ಪಿಸಿ ಅಂತ ಕಳುಹಿಸಲಾಗಿದೆ

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.