ETV Bharat / city

ಅಗತ್ಯ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಬಸ್​ ಸೌಲಭ್ಯ: ಏರ್ಪೋರ್ಟ್ ವೋಲ್ವೋ ಬಸ್ ಸೇವೆ ಅಭಾದಿತ - ಬೆಂಗಳೂರಲ್ಲಿ ಮಾತ್ರ ಸೇವೆಗೆ ನಿರ್ಧಾರ

ಕರ್ನಾಟಕದಲ್ಲಿ ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತುರ್ತುಸೇವೆ ಸಲ್ಲಿಸುವ ನೌಕರರಿಗೆ ಬಿಎಂಟಿಸಿ ವಿಶೇಷ ಬಸ್​ ಸೇವೆ ನೀಡಲು ಮುಂದಾಗಿದೆ. ಈ ಸಂಬಂಧ ಅದು ಪ್ರಕಟಣೆ ಹೊರಡಿಸಿದೆ. ಇನ್ನು ಏರ್ಪೋಟ್​ಗೆ ವೋಲ್ವೋ ಬಸ್​ ಸೇವೆ ಅಭಾದಿತ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ಅಗತ್ಯ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಬಸ್
BMTC_PRESS_RELEASE_ESSENTIAL_SERVICES_TO_AIRPORT
author img

By

Published : Apr 27, 2021, 8:15 PM IST

ಬೆಂಗಳೂರು: 14 ದಿನದ ಕಠಿಣ ಕರ್ಫ್ಯೂ ಹಿನ್ನೆಲೆಯಲ್ಲಿ ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಅಗತ್ಯ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿ, ಕೇಂದ್ರ, ರಾಜ್ಯ ಸರ್ಕಾರದ‌ ಅಗತ್ಯ ಸೇವೆ ಸಲ್ಲಿಸುವ ನೌಕರರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

ಕಠಿಣ ಕರ್ಫ್ಯೂ ವೇಳೆ 150 ನಗರ ಸಾರಿಗೆ ಬಸ್​​​ಗಳು ಸಂಚರಿಸಲಿದ್ದು, ಬೆಳಗ್ಗೆ 6 ರಿಂದ ಸಂಜೆ 7ರ ವರೆಗೂ ಬಸ್ ಸಂಚಾರ ನಡೆಸಲಿವೆ. ಅಗತ್ಯ ಸೇವೆ ಸಲ್ಲಿಸುವ ಬಸ್ ಸಂಚಾರ ನಡೆಸಲಿದ್ದು, 6 ವಾಯುವಜ್ರ ಬಸ್​​​ಗಳು 24 ಗಂಟೆ ಸೇವೆ ನೀಡಲಿವೆ, ಏರ್ಪೋರ್ಟ್ ನಿಂದ ಮೆಜೆಸ್ಟಿಕ್​​​ಗೆ ವೋಲ್ವೋ ಸಂಚಾರ ಎಂದಿನಂತೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.