ETV Bharat / city

ಚುನಾವಣೆಗೆ ಪಾಲಿಕೆ ಸಕಲ ರೀತಿಯಲ್ಲೂ ಸಿದ್ಧ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ - ಕಂದಾಯ ಸಚಿವ ಆರ್.ಅಶೋಕ್

ಚುನಾವಣೆ ನಡೆಸಲು ಪಾಲಿಕೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ಡಿ ಲಿಮಿಟೇಶನ್ ಮಾಡಲೇಬಾರದು ಎಂದು ನ್ಯಾಯಪೀಠ ಹೇಳಿಲ್ಲ. ಈ ಕುರಿತು ವಾರ್ಡ್ ವಿಂಗಡಣಾ ಸಮಿತಿ ಸರ್ಕಾರ ಮತ್ತು ಆಯೋಗದ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

Bruhat Bengaluru Mahanagara Palike
ಚುನಾವಣೆ ನಡೆಸಲು ಪಾಲಿಕೆ ಸಕಲ ರೀತಿಯಲ್ಲಿ ಸಿದ್ಧ
author img

By

Published : May 10, 2022, 10:25 PM IST

ಬೆಂಗಳೂರು: ಶೀಘ್ರದಲ್ಲಿಯೇ ಬಿಬಿಎಂಪಿ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಪಾಲಿಕೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ಚುನಾವಣಾ ಆಯೋಗ ಚುನಾವಣೆ ಘೋಷಿಸಿದರೆ ಎಲ್ಲ ರೀತಿಯ ಸಿದ್ದತೆಗಳನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಚುನಾವಣೆ ನಡೆಸಲು ಪಾಲಿಕೆ ಸಕಲ ರೀತಿಯಲ್ಲಿ ಸಿದ್ಧ

ಬಿಬಿಎಂಪಿ ಚುನಾವಣೆ ಕುರಿತು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್, ಡಿ ಲಿಮಿಟೇಶನ್ ಮಾಡಲೇಬಾರದು ಎಂದು ನ್ಯಾಯಪೀಠ ಹೇಳಿಲ್ಲ. ಈ ಕುರಿತು ವಾರ್ಡ್ ವಿಂಗಡಣಾ ಸಮಿತಿ ಸರ್ಕಾರ ಮತ್ತು ಆಯೋಗದ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತದೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನಾವು ಬಿಬಿಎಂಪಿ ಚುನಾವಣೆಗೆ ಸಿದ್ಧ, ನೂರಕ್ಕೆ ನೂರು ಬಿಜೆಪಿನೇ ಗೆಲ್ಲುವುದು: ಸ್ಥಳೀಯ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದು ಮಹತ್ವದ ದಿನ. ನಾನು ಮುಖ್ಯಮಂತ್ರಿಗಳ ಜೊತೆ ಮಾತಾಡುತ್ತೇನೆ. ಇಂದು ನೀಡಿದ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ದೇಶದ ಎಲ್ಲ ರಾಜ್ಯಗಳಿಗೆ ಸಂಬಂಧಿಸಿದ ಆದೇಶ ಇದು. ಎರಡು ವಾರ ಸಮಯ ನೀಡಿದೆ. ಎಲೆಕ್ಷನ್ ಕಮೀಷನ್ ಡೇಟ್ ಘೋಷಣೆ ಮಾಡತ್ತದೆ ಎಂದರು.

ಸುಪ್ರೀಂ ಆದೇಶ ಪಾಲನೆ ಮಾಡಬೇಕು. 198 ವಾರ್ಡ್​​​ಗಳಿಗೆ ಮಾತ್ರ ಚುನಾವಣೆ ‌ನಡೆಯಲಿದೆ. ಮೀಸಲಾತಿ ವಿಚಾರದ ಬಗ್ಗೆ ಅಡ್ವೋಕೆಟ್ ಜನರಲ್ ಜೊತೆ ಮಾತನಾಡುತ್ತೇವೆ. ಕರ್ನಾಟಕ ಮಟ್ಟಿಗೆ ಇದು ಮಹತ್ವದ ಬೆಳವಣಿಗೆ. ಸುಪ್ರೀಂಕೋರ್ಟ್‌ನಲ್ಲಿ ಮದ್ಯಪ್ರದೇಶ ಮತ್ತ ಸುರೇಶ್ ಮಹಾಜನ್ ನಡುವೆ ಕೇಸ್ ನಡೆಯುತ್ತಿತ್ತು. ಮೂರು ಪೀಠದ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ ಎಂದರು.

ನಾವು ಚುನಾವಣೆಗೆ ಸಿದ್ಧ ಇದ್ದೇವೆ. ಬಿಬಿಎಂಪಿ ಚುನಾವಣೆಲಿ ಬಿಜೆಪಿ ನೂರಕ್ಕೆ ನೂರು ಗೆಲುವು ಸಾಧಿಸುತ್ತದೆ. ಭೂತ್​ ಮಟ್ಟದಲ್ಲಿ ಚುನಾವಣೆಯ ಕಾರ್ಯಗಳು ಆಗಿದೆ ಎಂದು ಈ ಸಂದರ್ಭದಲ್ಲಿ ಆರ್.ಅಶೋಕ್ ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್; ಜಲ ಮಂಡಳಿಯಿಂದ 'ನೀರಿನ' ದರ ಹೆಚ್ಚಳ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.