ETV Bharat / city

ಹಿಂದೂಗಳಲ್ಲದವರಿಗೆ ದೇವಾಲಯ ಜಾಗ ಗುತ್ತಿಗೆ ನೀಡತಕ್ಕದ್ದಲ್ಲ: ಸಿಎಂಗೆ ಪತ್ರ ಬರೆದ ಬೋಪಯ್ಯ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ಉಪ ನಿಯಮ - 31(12) ರ ಅಂಶಗಳನ್ನು ಯಥಾವತ್ತಾಗಿ ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಕಾಲ ಸಚಿವ ಬಿ‌ಸಿ ನಾಗೇಶ್​ಗೆ ಬೋಪಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.

ಶಾಸಕ ಕೆ.ಜಿ ಬೋಪಯ್ಯ
ಶಾಸಕ ಕೆ.ಜಿ ಬೋಪಯ್ಯ
author img

By

Published : Mar 30, 2022, 9:01 AM IST

ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳಲ್ಲದ ವರ್ತಕರಿಗೆ ದೇವಾಲಯಗಳ ಆವರಣಗಳ ಮಳಿಗೆ ಜಾಗ ಗುತ್ತಿಗೆ ನೀಡಬಾರದು ಎನ್ನುವ ವಿವಾದ ತಲೆ ಎತ್ತಿರುವ ನಡುವೆ 2002ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮ 31 (12) ರಲ್ಲಿ ಸ್ಪಷ್ಟಪಡಿಸಲಾಗಿರುವಂತೆ 'ಸಂಸ್ಥೆಯ ಸಮೀಪದ ಜಮೀನು, ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ' ಎಂಬುದನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಶಾಸಕ ಕೆ.ಜಿ ಬೋಪಯ್ಯ ಪತ್ರ ಬರೆದಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ಉಪ ನಿಯಮ - 31(12) ರ ಅಂಶಗಳನ್ನು ಯಥಾವತ್ತಾಗಿ ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಕಾಲ ಸಚಿವ ಬಿ‌ಸಿ ನಾಗೇಶ್​ಗೆ ಬೋಪಯ್ಯ ಪತ್ರ ಬರೆದಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮ 1997 (2010ರ ಕರ್ನಾಟಕ ಅಧಿನಿಯಮ, 33)ರ 76ನೇ ಪ್ರಕರಣದ(1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳನ್ನು 2002ರಲ್ಲಿ ಜಾರಿಗೆ ತಂದಿರುತ್ತದೆ.

ಈ ನಿಯಮಾವಳಿಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ರಕ್ಷಣೆ, ನಿರ್ವಹಣೆ ಬಗ್ಗೆ ನಿಯಮಾವಳಿಗಳನ್ನು ರೂಪಿಸಲಾಗಿರುತ್ತದೆ. ಸದರಿ ನಿಯಮದಲ್ಲಿ ದೇವಸ್ಥಾನಗಳಿಗೆ ಸಂಬಂಧಪಟ್ಟ ಅಧಿಸೂಚಿತ ಸಂಸ್ಥೆಗಳಿಗೆ ಸೇರಿದ ಸ್ಥಿರಸ್ವತ್ತಿನ ಮಾರಾಟ, ಅಡಮಾನ, ದಾನ, ಗುತ್ತಿಗೆ ಅಥವಾ ವಿನಿಮಯಕ್ಕೆ ಸಂಬಂಧಪಟ್ಟ ಕಾರ್ಯವಿಧಾನಗಳನ್ನು ರೂಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸಿಎಂಗೆ ಪತ್ರ ಬರೆದ ಬೋಪಯ್ಯ
ಸಿಎಂಗೆ ಪತ್ರ ಬರೆದ ಬೋಪಯ್ಯ

ಸದರಿ ನಿಯಮಾವಳಿಗಳಲ್ಲಿ ನಿಯಮ 31(12)ರಡಿ, 'ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ'. ಈ ನಿಯಮಾವಳಿಗಳಲ್ಲಿನ ಅಂಶಗಳು ರಾಜ್ಯದಲ್ಲಿ ಎಲ್ಲೆಡೆ ಸರಿಯಾಗಿ ಆಗಿರುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿರುತ್ತದೆ.

ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ 2002ರಲ್ಲಿ ರಾಜ್ಯ ಸರ್ಕಾರವು ಮೇಲ್ಕಂಡ ನಿಯಮಾವಳಿಗಳನ್ನು ಅಳವಡಿಸಿಕೊಂಡಿರುತ್ತದೆಯಾದರೂ ಅದು, ಈ ವರೆವಿಗೂ ನಿಟ್ಟಿನಲ್ಲಿ ಜಾರಿಗೆ ಬಂದಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಲಾಲ್ ಸಹಿತ ಅನ್ಯಧರ್ಮಗಳಲ್ಲಿ ಹಲವು ಪದ್ಧತಿಗಳು ಜಾರಿಯಲ್ಲಿದ್ದು, ಧರ್ಮದ ಆಚರಣೆ, ನಂಬಿಕೆ ಹಾಗೂ ಪಾವಿತ್ರ್ಯತೆಯ ಸಂಬಂಧ ನಾವು ಅದನ್ನು ಗೌರವಿಸುತ್ತೇವೆ. ಆದರೆ, ಅನ್ಯ ಧರ್ಮಗಳಲ್ಲಿನ ಆಹಾರ ಪದ್ಧತಿಯಲ್ಲಿ ಗೋಮಾಂಸ ಸೇವಿಸುತ್ತಾರೆ. ಹಾಗೆಯೇ ಮೂರ್ತಿ ಪೂಜೆ ನಿಷಿದ್ದ.

ಆದರೆ, ಹಿಂದುಗಳಾದ ನಾವು ಗೋವನ್ನು ತಾಯಿ ಎಂದು ಪೂಜಿಸುತ್ತೇವೆ. ಜಾತ್ರೆಯ ಸಮಯದಲ್ಲಿ ಅಲ್ಲಿ ಅಂಗಡಿ ಹಾಕುವ ಅನ್ಯಧರ್ಮಿಯರು ಗೋಮಾಂಸ ಸೇವಿಸಿ ಬರುವ ಸಾಧ್ಯತೆ ಇರುತ್ತದೆ. ಆದರಿಂದ ಆ ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ಬರುತ್ತದೆ.

ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರತೆಯನ್ನು ಕಾಪಾಡಲು 2002ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮ 31 (12) ರಲ್ಲಿ ಸ್ಪಷ್ಟಪಡಿಸಲಾಗಿರುವಂತೆ 'ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ, ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ' ಎಂಬುದನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಹಾಗೂ ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸುತ್ತೇನೆ ಎಂದು ಬೋಪಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯಾವಾಗ ಮುಗಿಯುತ್ತೋ ಯುದ್ಧ.. ರಷ್ಯಾ ದಾಳಿಯಿಂದ ಉಕ್ರೇನ್​​ಗೆ​​​​​ ಬರೋಬ್ಬರಿ 1 ಲಕ್ಷ ಕೋಟಿ ರೂ. ನಷ್ಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.