ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾದ ಕಾರಣ ರಾತ್ರಿ ಕರ್ಫ್ಯೂ ತೆರವು ಮಾಡಿದ ಬೆನ್ನಲ್ಲೇ ಬಿಎಂಟಿಸಿ ರಾತ್ರಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಕೊರೊನಾ ಕಾರಣಕ್ಕೆ ಲಾಕ್ಡೌನ್ ಹಾಗೂ ಹಲವು ಚಟುವಟಿಕೆಗೆ ಸರ್ಕಾರ ನಿರ್ಬಂಧ ಹೇರಿತ್ತು. ಇದೀಗ ಸೋಂಕಿನ ತೀವ್ರತೆ ಕಡಿಮೆ ಆಗುತ್ತಿದ್ದು, ಹಂತ ಹಂತವಾಗಿ ಕೋವಿಡ್ ನಿರ್ಬಂಧ ಸಡಿಲಿಸಲಾಗುತ್ತಿದೆ. ನೈಟ್ ಕರ್ಫ್ಯೂ ಇದ್ದ ಕಾರಣ ಬಿಎಂಟಿಸಿ ರಾತ್ರಿ ಓಡಾಟವನ್ನ ನಿಲ್ಲಿಸಿತ್ತು. ಇದೀಗ ಮತ್ತೆ ಸಂಚಾರ ಆರಂಭಿಸಲು ಸಿದ್ಧವಾಗಿದೆ.
ನಗರದೊಳಗೆ ಮತ್ತು ಹೊರವಲಯದ ಪ್ರಯಾಣಿಕರಿಗೆ ಸಾರಿಗೆ ಸೇವೆಯ ಆವಶ್ಯಕತೆಯನ್ನು ಪರಿಗಣಿಸಿ ಸರ್ಕಾರದ ಮಾರ್ಗಸೂಚಿಗಳನ್ವಯ ಪ್ರಮುಖ ಬಸ್ ನಿಲ್ದಾಣ ಮತ್ತು ಇತರೆ ನಿಲ್ದಾಣಗಳಿಂದ ಸಂಚಾರ ಆರಂಭಿಸಲು ಮುಂದಾಗಿದೆ.
ನಗರದ ವಿವಿಧ ಪ್ರದೇಶಗಳಿಗೆ 48 ಮಾರ್ಗಗಳಲ್ಲಿ ಒಟ್ಟು 70 ಬಸ್ಗಳು ರಾತ್ರಿ ಸೇವೆಗೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿದುಬಂದಿದೆ.