ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ತಿಂಗಳಿಗನುಗುಣವಾಗಿ ಸಾಮಾನ್ಯ ಮಾಸಿಕ ಪಾಸ್ (ರೂ.1,050) ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸ್ ಗಳನ್ನು (ರೂ.945) ವಿತರಣೆ ಮಾಡುತ್ತಿದೆ.
ಮಾಸಿಕ ಪಾಸುಗಳಲ್ಲಿ ಪ್ರಯಾಣಿಕರು ಅನಿಯಮಿತವಾಗಿ ಪ್ರಯಾಣಿಸುವ ಅವಕಾಶವಿದೆ. ಸಾರ್ವಜನಿಕರಿಗೆ ಸುಲಭ ಹಾಗೂ ತ್ವರಿತವಾಗಿ ಮಾಸಿಕ ಪಾಸುಗಳು ದೊರಕಲು ಅನುವಾಗುವಂತೆ ಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡಿದೆ.
ಪ್ರಸ್ತುತ ಸಂಸ್ಥೆಯಲ್ಲಿ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳನ್ನು ಒಳಗೊಂಡಂತೆ 65 ಸ್ಥಳಗಳಲ್ಲಿ ಮಾಸಿಕ ಪಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. ಬೆಂಗಳೂರು ಒನ್‌ನ ಎಲ್ಲಾ 200 ಕೇಂದ್ರಗಳಲ್ಲೂ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತಿದೆ. ಜೊತೆಗೆ ಖಾಸಗಿ ಏಜೆನ್ಸಿಗಳ ಮೂಲಕ ಈ ಪಾಸ್‌ಗಳನ್ನು ಪಡೆಯಬಹುದಾಗಿದೆ.
ಪ್ರಯಾಣಿಕರು ಈ ಅನುಕೂಲವನ್ನು ಜು. 29 ರಿಂದ ಪಡೆದುಕೊಳ್ಳಬಹುದು.