ETV Bharat / city

ಸಚಿವರ ಪುತ್ರನಿಗೆ ಬೆದರಿಕೆ‌ ಪ್ರಕರಣ: ಶಾಸಕ ಸೇರಿ ಎಂಟು ಮಂದಿಯ ಹೇಳಿಕೆ ದಾಖಲಿಸಿಕೊಂಡ ಸಿಸಿಬಿ - ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ರಾಹುಲ್ ಭಟ್ ಬಂಧನ

ಸಚಿವ ಎಸ್‌.ಟಿ.ಸೋಮಶೇಖರ್ ಪುತ್ರನಿಗೆ ಬೆದರಿಕೆ ಪ್ರಕರಣ ಸಂಬಂಧ ಸೋಮಶೇಖರ್, ಅವರ ಪುತ್ರ ನಿಶಾಂತ್, ಆಪ್ತ ಕಾರ್ಯದರ್ಶಿಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಇಂಡಿ ಶಾಸಕ ಯಶವಂತರಾಯ್ ಪಾಟೀಲ್ ಮತ್ತು ಅವರ ಪುತ್ರಿ, ಆರೋಪಿ ರಾಹುಲ್ ಭಟ್​​ಗೆ ಸಿಮ್ ಕೊಟ್ಟಿದ್ದ ಎನ್ನಲಾಗಿರುವ ಮುಂಬೈನ ರಾಕೇಶ್ ಸೇರಿ ಸಿಸಿಬಿ 8 ಮಂದಿ ಹೇಳಿಕೆ ದಾಖಲಿಸಿಕೊಂಡಿದೆ.

CCB records statement in Nishantha blackmail case
ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಎಂಟು ಮಂದಿಯ ಹೇಳಿಕೆ ದಾಖಲಿಸಿದ ಸಿಸಿಬಿ
author img

By

Published : Jan 10, 2022, 1:05 PM IST

Updated : Jan 10, 2022, 1:33 PM IST

ಬೆಂಗಳೂರು: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಪುತ್ರನಿಗೆ ಬೆದರಿಕೆ ಪ್ರಕರಣ ಸಂಬಂಧ ಬಂಧನಕ್ಕೆ‌ ಒಳಗಾಗಿರುವ ರಾಹುಲ್ ಭಟ್​​ನ ವಿಚಾರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ‌.

ಮತ್ತೊಂದೆಡೆ ಆರೋಪಿ ರಾಹುಲ್ ಭಟ್​ನನ್ನು ವೈದ್ಯಕೀಯ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ಚಿಕಿತ್ಸೆ ಬಳಿಕ ಮತ್ತೆ ಸಿಸಿಬಿ ಎಸಿಪಿ‌ ಜಗನಾಥ್ ರೈ ನೇತೃತ್ವದ ತಂಡ ವಿಚಾರಣೆ ಮುಂದುವರಿಸಲಿದೆ.

ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಎಂಟು ಮಂದಿಯ ಹೇಳಿಕೆ ದಾಖಲಿಸಿದ ಸಿಸಿಬಿ

ಪ್ರಕರಣ ದೂರುದಾರರಾಗಿರುವ ಸಚಿವರ ಪುತ್ರ ನಿಶಾಂತ್​​ಗೆ ಕಳೆದ ತಿಂಗಳು 25 ರಂದು ಕರೆ ಮಾಡಿ ಹಣ ನೀಡದಿದ್ದರೆ ಆಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು‌‌.‌ ಈ ಸಂಬಂಧ‌ ನಿನ್ನೆ ರಾಹುಲ್ ಭಟ್​ನನ್ನು ಬಂಧಿಸಿ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.

ಜಪ್ತಿ ಮಾಡಿಕೊಂಡಿದ್ದ ಮೊಬೈಲ್ ಪರಿಶೀಲನೆ ನಡೆಸಿದಾಗ ನಿಶಾಂತ್​​ಗೆ ಸಂಬಂಧಿಸಿದ ವಿಡಿಯೊ ಪತ್ತೆಯಾಗಿರುವುದು ಕಂಡುಬಂದಿದೆ. ನಿಶಾಂತ್​ಗೆ ಕಳುಹಿಸಲಾಗಿರುವ ಮೂಲ ವಿಡಿಯೋ ದೃಢೀಕರಿಸಲು ಹಾಗೂ ಡಿಲೀಟ್ ಮಾಡಲಾಗಿರುವ ಡೇಟಾ ಸಂಗ್ರಹಕ್ಕಾಗಿ ಮೊಬೈಲ್ ಅನ್ನು ಎಫ್ಎಸ್​​ಎಲ್​ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಸಚಿವ ಸೋಮಶೇಖರ್ ಪುತ್ರನಿಗೆ ಬ್ಲಾಕ್​ಮೇಲ್ : ಆರೋಪಿ ಬಂಧನ

8 ಮಂದಿಯ ಹೇಳಿಕೆ ದಾಖಲಿಸಿಕೊಂಡ‌ ಸಿಸಿಬಿ

ಪ್ರಕರಣದಲ್ಲಿ ಇದುವರೆಗೆ ಸಿಸಿಬಿ ಎಂಟು ಮಂದಿಯಿಂದ ಹೇಳಿಕೆ ದಾಖಲಿಸಿಕೊಂಡಿದೆ. ಸಚಿವ ಎಸ್.ಟಿ.ಸೋಮಶೇಖರ್, ಪುತ್ರ ನಿಶಾಂತ್, ಆಪ್ತ ಕಾರ್ಯದರ್ಶಿಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಇಂಡಿ ಶಾಸಕ ಯಶವಂತರಾಯ್ ಪಾಟೀಲ್ ಮತ್ತು ಅವರ ಪುತ್ರಿ, ಆರೋಪಿ ರಾಹುಲ್ ಭಟ್​​ಗೆ ಸಿಮ್ ಕೊಟ್ಟಿದ್ದ ಎನ್ನಲಾಗಿರುವ ಮುಂಬೈನ ರಾಕೇಶ್ ಹೇಳಿಕೆ ದಾಖಲಿಸಿಕೊಂಡಿದೆ.

ಸಚಿವರ ಪಿಎಗಳಾದ ಭಾನುಪ್ರಕಾಶ್ ಮತ್ತು ಶ್ರೀನಿವಾಸಗೌಡರ ಮೊಬೈಲ್​ಗೆ ವಿಡಿಯೋ ಸಂದೇಶ ಬಂದಿತ್ತು. ಈ‌ ಬಗ್ಗೆ ದೂರಿನಲ್ಲಿ ನಿಶಾಂತ್ ಉಲ್ಲೇಖಿಸಿದ್ದರು. ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಕ್ರೀನ್ ಶಾಟ್ ಸಮೇತ ಸಿಸಿಬಿ ಹೇಳಿಕೆ ದಾಖಲಿಸಿಕೊಂಡಿತ್ತು.

Last Updated : Jan 10, 2022, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.