ETV Bharat / city

ಮೊಬೈಲ್ ಚಾರ್ಜರ್​​ನಲ್ಲಿ ರಹಸ್ಯ ಕ್ಯಾಮರಾ: ಪರಿಚಯಸ್ಥ ಯುವತಿಗೆ ಲೈಂಗಿಕ ಸಂಪರ್ಕಕ್ಕಾಗಿ ಬ್ಲ್ಯಾಕ್​ಮೇಲ್ - ಕ್ಯಾಮರಾ ಅಳವಡಿಸಿರುವ ಮೊಬೈಲ್ ಚಾರ್ಜರ್

ತನ್ನ ಪರಿಚಯಸ್ಥ ಯುವತಿ ಮನೆಯಲ್ಲಿ ಕ್ಯಾಮರಾ ಅಳವಡಿಸಿರುವ ಮೊಬೈಲ್ ಚಾರ್ಜರ್ ಇಟ್ಟು, ಆಕೆಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

blackmail-to-a-woman-by-using-a-mobile-charger-with-camera
ಮೊಬೈಲ್ ಚಾರ್ಜರ್​​ನಲ್ಲಿ ರಹಸ್ಯ ಕ್ಯಾಮರಾ: ಪರಿಚಯಸ್ಥ ಯುವತಿಗೆ ಲೈಂಗಿಕ ಸಂಪರ್ಕಕ್ಕಾಗಿ ಬ್ಲ್ಯಾಕ್​ಮೇಲ್
author img

By

Published : Aug 20, 2022, 11:03 PM IST

ಬೆಂಗಳೂರು: ಯುವತಿಯೊಬ್ಬಳ ಜೊತೆ ಲೈಂಗಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಆಕೆಯ ಖಾಸಗಿ ಕೋಣೆಯಲ್ಲಿ ಮೊಬೈಲ್ ಚಾರ್ಜರ್​ನಲ್ಲಿ ರಹಸ್ಯ ಕ್ಯಾಮರಾ ಇಟ್ಟು, ಅಶ್ಲೀಲ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಮಹೇಶ್ (30) ಎಂಬಾತನೇ ಬಂಧಿತ. ಈ ಬಂಧಿತನಿಂದ ರಹಸ್ಯ ಕ್ಯಾಮರಾ ಅಳವಡಿಸಿದ್ದ ಮೊಬೈಲ್ ಚಾರ್ಜರ್, ಲ್ಯಾಪ್‌ಟಾಪ್, 2 ಮೆಮೊರಿ ಕಾರ್ಡ್, ಪೆನ್‌ಡ್ರೈವ್ ಹಾಗೂ 2 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದೂರುದಾರ ಸಂತ್ರಸ್ತೆಯ ಪರಿಚಯಸ್ಥನಾಗಿದ್ದು, ಆಕೆಯ ಮನೆಗೆ ಬಂದಾಗ ರಹಸ್ಯ ಕ್ಯಾಮರಾ ಇಟ್ಟು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಚಾರ್ಜರ್‌ನಲ್ಲಿ ಕ್ಯಾಮರಾ: ಆರೋಪಿ ಮಹೇಶ್​ಗೆ ಸಂತ್ರಸ್ತೆಯು ದೂರದ ಸಂಬಂಧಿ ಹಾಗೂ ಪರಿಚಯಸ್ಥನಾಗಿದ್ದು, ಆ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಅಪೇಕ್ಷಿಸಿದ್ದ. ಹೀಗಾಗಿ ಅವರಿಗೆ ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಯುವತಿಯ ಮನೆಗೆ ಹೋಗಿದ್ದಾಗ ಅವರ ಬೆಡ್‌ರೂಮ್‌ನಲ್ಲಿ ಮೊಬೈಲ್ ಚಾರ್ಜರ್‌ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ. ಇದರಲ್ಲಿ ಯುವತಿಯ ಖಾಸಗಿ ದೃಶ್ಯಗಳು ಸೆರೆಯಾಗಿವೆ. ಅದನ್ನು ಆರೋಪಿ ಸಂಗ್ರಹಿಸಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟ್ರಾಗ್ರಾಂನಲ್ಲಿ ಬಂದ ಸಂದೇಶ: ಇನ್‌ಸ್ಟ್ರಾಗ್ರಾಂನಲ್ಲಿಅಪರಿಚಿತ ವ್ಯಕ್ತಿಯೊಬ್ಬ ಮೊದಲಿಗೆ ಸಂದೇಶ ಕಳುಹಿಸಿದ್ದಾನೆ. ಪರಿಚಯವಿಲ್ಲದರಿಂದ ಸಂತ್ರಸ್ತೆ ಆತನನ್ನು ಬ್ಲಾಕ್​ ಮಾಡಿದ್ದರು. ಪುನಃ ಬೇರೆ-ಬೇರೆ ನಕಲಿ ಇನ್‌ಸ್ಟ್ರಾಗ್ರಾಂ ಖಾತೆಯಿಂದ ಸಂದೇಶ ಮಾಡಿದ ಆರೋಪಿ, ಸಲುಗೆಯಿಂದ ಮಾತನಾಡುವಂತೆ ಸೂಚಿಸಿದ್ದಾನೆ. ಒಂದು ವೇಳೆ ಚಾಟ್ ಮಾಡದಿದ್ದರೆ ನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ, ಅದನ್ನು ಸಂತ್ರಸ್ತೆ ನಿರ್ಲಕ್ಷಿಸಿದ್ದಾರೆ.

ಇದಾದ ಬಳಿಕ ಆಕೆಯ ಕೆಲ ಸೆಕೆಂಡ್‌ಗಳ ವಿಡಿಯೋ ಕಳುಹಿಸಿ ಎಚ್ಚರಿಕೆ ನೀಡಿದ್ದಾನೆ. ಅದನ್ನು ನೋಡಿದ ಸಂತ್ರಸ್ತೆಗೆ ಇದನ್ನು ತಮ್ಮ ಖಾಸಗಿ ಕೋಣೆಯಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಖಾತ್ರಿಯಾಗಿದೆ. ಅಂತೆಯೇ ಕೂಡಲೇ ಸೆನ್ ಠಾಣೆಗೆ ದೂರು ನೀಡಿದ್ದಾರೆ.

ಬಳಿಕ ತನಿಖೆ ನಡೆಸಿದ ಸೆನ್ ಠಾಣೆಯ ಠಾಣಾಧಿಕಾರಿ ಸಂತೋಷ್ ರಾಮ್ ಮತ್ತು ತಂಡ ಆರೋಪಿಯನ್ನು ಪತ್ತೆ ಹಚ್ಚಿ, ಮೈಸೂರಿನ ಟಿ.ನರಸಿಪುರದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಯುವತಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಲು ನಿರ್ಧರಿಸಿ, ಬ್ಲ್ಯಾಕ್‌ಮೇಲ್ ಮೂಲಕ ತನ್ನ ಆಸೆ ಈಡೇರಿಸಿಕೊಳ್ಳಲು ಮುಂದಾಗಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದ್ಧಾರೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಲವ್ವಿಡವ್ವಿ.. ಪತಿಯ ಕೊಲೆಗೆ ಸುಪಾರಿ ನೀಡಿದ್ಲು ಅರ್ಧಾಂಗಿ: ಗಂಡ ಜೀವಂತ, ಲವರ್​ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.