ETV Bharat / city

ಕೋವಿಡ್ ನಂತರ ಬ್ಲ್ಯಾಕ್ ಫಂಗಸ್ ಕಾಟ.. ಕೊರೊನಾದಿಂದ ಇಮ್ಯುನಿಟಿ ಕಳೆದುಕೊಂಡವರೇ ಇದರ ಟಾರ್ಗೆಟ್!

author img

By

Published : May 11, 2021, 7:48 PM IST

ಕೋವಿಡ್ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಳೆದುಕೊಂಡವರೇ ಇದಕ್ಕೆ ಟಾರ್ಗೆಟ್ ಆಗ್ತಿದ್ದಾರೆ.‌ ಹೀಗಾಗಿ ಕೊರೊನಾ‌ ಗೆದ್ದೆವು ಎಲ್ಲಾ ಮುಗಿತಪ್ಪಾ, ಇನ್ನು ಸಮಸ್ಯೆ ಇಲ್ಲ ಅಂತ ರಿಲ್ಯಾಕ್ಸ್ ಆಗುವಂತಿಲ್ಲ. ಯಾಕೆಂದರೆ ಈ ಶಿಲೀಂದ್ರ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆ ಕಾಡಲಿದೆ. ಒಂದು ವೇಳೆ ಆರಂಭದಲ್ಲೇ ಚಿಕಿತ್ಸೆ ಪಡೆಯದೇ ಇದ್ದರೆ ನಂತರದ ದಿನಗಳಲ್ಲಿ ಮೆದುಳಿಗೆ ಸೋಂಕು ವ್ಯಾಪಿಸಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇರಲಿದೆ ಅಂತಾರೆ ವೈದ್ಯರು.

black-fungus-diseases-found-in-corona-patient
ಬ್ಲ್ಯಾಕ್ ಫಂಗಸ್

ಬೆಂಗಳೂರು: ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ಜನ ಸಾಮಾನ್ಯರು, ಇದೀಗ ಬ್ಲ್ಯಾಕ್ ಫಂಗಸ್ ಕಾಟವನ್ನೂ ಸಹಿಸಿಕೊಳ್ಳಬೇಕಿದೆ. ಕೊರೊನಾ ಸೋಂಕಿನ ಕುರಿತೇ ಇನ್ನೂ ಸರಿಯಾಗಿ ತಿಳಿಯಲು ಆಗದೇ ಇರುವಾಗ ಇದೀಗ ಬ್ಲ್ಯಾಕ್ ಫಂಗಸ್ ಬಗ್ಗೆ ಜನ ಚಿಂತೆಗೀಡಾಗಿದ್ದಾರೆ.

ಕೋವಿಡ್ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಳೆದುಕೊಂಡವರೇ ಇದಕ್ಕೆ ಟಾರ್ಗೆಟ್ ಆಗ್ತಿದ್ದಾರೆ.‌ ಹೀಗಾಗಿ ಕೊರೊನಾ‌ ಗೆದ್ದೆವು ಎಲ್ಲಾ ಮುಗಿತಪ್ಪಾ, ಇನ್ನು ಸಮಸ್ಯೆ ಇಲ್ಲ ಅಂತ ರಿಲ್ಯಾಕ್ಸ್ ಆಗುವಂತಿಲ್ಲ. ಯಾಕೆಂದರೆ ಈ ಶಿಲೀಂದ್ರ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆ ಕಾಡಲಿದೆ. ಒಂದು ವೇಳೆ ಆರಂಭದಲ್ಲೇ ಚಿಕಿತ್ಸೆ ಪಡೆಯದೇ ಇದ್ದರೆ ನಂತರದ ದಿನದಲ್ಲಿ ಮೆದುಳಿಗೆ ಸೋಂಕು ವ್ಯಾಪಿಸಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇರಲಿದೆ. ಈಗಾಗಲೇ ದೆಹಲಿ, ಒಡಿಶಾ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಯು ಬಿಡುಗಡೆ ಆಗಿದೆ. ಹಾಗೇ ಡಿಸಿಎಂ ಅಶ್ವತ್ಥ್​ ನಾರಾಯಣ ಟ್ವೀಟ್​ ಮಾಡಿದ್ದು, ಬ್ಲ್ಯಾಕ್ ಫಂಗಸ್ ನಿಂದ ಎಚ್ಚರವಹಿಸುವಂತೆ ತಿಳಿಸಿದ್ದಾರೆ.

ಕೋವಿಡ್ ರೋಗಿಗಳಿಗೆ ಇದೀಗ ಬ್ಲ್ಯಾಕ್ ಫಂಗಸ್ ಕಾಟ.. ವೈದ್ಯರೇನಂತಾರೆ

ಏನಿದು ಬ್ಲ್ಯಾಕ್ ಫಂಗಸ್?

ಸಾಮಾನ್ಯವಾಗಿ ನಾವೆಲ್ಲ ತೆಂಗಿನ ಕಾಯಿ ಮೇಲೆ ಕಪ್ಪು-ಬಿಳಿಯ ಬೂಸ್ಟ್ ಇರುವುದನ್ನ ಕಾಣಬಹುದು, ಅದನ್ನೇ ಫಂಗಸ್ ಎಂದು ಕರೆಯಲಾಗುತ್ತೆ. ಹೀಗೇ ಮನುಷ್ಯ ದೇಹದಲ್ಲೂ ಫಂಗಸ್ ಎಂಬುದು ಅನೇಕ ರೀತಿಯಲ್ಲಿ ಬರುತ್ತೆ.‌ ಸ್ಕಿನ್ ಇನ್ಫೆಕ್ಷನ್ ಆಗುವುದು ಕೂಡ ಇದೆ. ತೇವಾಂಶ ಇರುವ ಜಾಗದಲ್ಲಿ ಬೂಸ್ಟ್ ಹರಡುತ್ತೆ. ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು ಆಗಿದ್ದು, ತೊಡೆ ಸಂಧಿಯಲ್ಲಿ, ಕತ್ತಿನ ಕೆಳಗೆ ಅಂದರೆ ಎಲ್ಲಿ ಬೆವರು ಜಾಸ್ತಿ‌ ಇರುತ್ತೋ ಅಲ್ಲೆಲ್ಲ ಫಂಗಸ್ ಇನ್ಫೆಕ್ಷನ್ ಆಗಲಿದೆ.

ಎಲ್ಲೆಲ್ಲಿ ಹುಷಾರಾಗಿರಬೇಕು?

ಮಣ್ಣು, ಗೊಬ್ಬರ, ನೀರು ಸೋರುವ ಜಾಗದಲ್ಲಿ ಹುಷಾರಾಗಿ ಇರಬೇಕು. ಕಟ್ಟಡ ನಿರ್ಮಾಣ ಸ್ಥಳಗಳಲ್ಲೂ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಮೂಲಕ ಸೋಂಕು ದೇಹವನ್ನ ಸೇರುವ ಸಾಧ್ಯತೆಯು ಇರಲಿದೆ.‌

ಮಧುಮೇಹಿ ರೋಗಿಗಳು ಎಚ್ಚರ ವಹಿಸಬೇಕು?

ಕೋವಿಡ್ ಸೋಂಕಿತರಿಗಷ್ಟೇ ಇದು ಕಾಡೋದಿಲ್ಲ. ಬದಲಿಗೆ ರೋಗನಿರೋಧಕ ಶಕ್ತಿ(ಇಮ್ಯುನಿಟಿ) ಕಡಿಮೆ ಇದ್ದವರಲ್ಲಿ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತೆ.‌ ನೂರಾರು ರೀತಿಯಲ್ಲಿ ಹರಡುವ ಈ ಫಂಗಸ್ ಪ್ರಮುಖವಾಗಿ ಮಧುಮೇಹ (ಡಯಾಬಿಟಿಸ್) ಇರುವವರಿಗೆ ಸಾಮಾನ್ಯವಾಗಿ ಕಾಡಲಿದೆ. ಮೊದಲಿಗೆ ಬೆರಳ ಸಂಧಿಯಲ್ಲಿ ಫಂಗಸ್ ಶುರುವಾಗುತ್ತೆ. ಹೀಗಾಗಿ ವಾರಕೊಮ್ಮೆ ನೋಡಿಕೊಳ್ಳುತ್ತಿರಬೇಕು ಅಂತ ತಜ್ಞರು ಎಚ್ಚರಿಕೆ ನೀಡುತ್ತಾರೆ.‌ ಫಂಗಸ್ ಸೋಂಕು ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಯಾರಲ್ಲಿ ಕಡಿಮೆ ಇರುತ್ತೋ ಅವರಲ್ಲೇ ಹೆಚ್ಚು ಬಾಧಿಸಲಿದೆ.

ಹಲವಾರು ಬಗೆಯ ಫಂಗಲ್ಸ್ ಸೋಂಕು ಇದ್ದು, ಒಂದೊಂದು ಸೋಂಕು‌ ಒಂದೊಂದು ರೀತಿಯ ರೋಗ ಲಕ್ಷಣಗಳನ್ನ‌ ಹೊಂದಿದೆ.‌ ಕೆಲವರಿಗೆ ಚರ್ಮ ತುರಿಕೆ, ಅಪೆಂಡಿಕ್ಸ್ ಇದ್ದವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.‌ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಲಿದ್ದು, ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ.

ಕೋವಿಡ್ ರಿಕವರಿ ಆದ್ಮೆಲೆ ಬ್ಲ್ಯಾಕ್ ಫಂಗಸ್ ಇದ್ಯಾ ಇಲ್ವಾ ಅಂತ ಖಾತ್ರಿ ಮಾಡಿಕೊಳ್ಳುವುದು ಉತ್ತಮ

ಮ್ಯುಕೋರ್ಮೈಕೋಸಿಸ್ ಎಂಬ ಫಂಗಸ್ ಇನ್ಫೆಕ್ಷನ್ ಹೊಸದೇನಲ್ಲ, ವೈದ್ಯರಿಗೆ ರೋಗಿಗಳಿಗೆ ಗೊತ್ತಿರುವ ವಿಷಯವೇ. ಆದರೆ ಕೋವಿಡ್ ಕಾರಣಕ್ಕೆ ಇದೀಗ ಹೆಚ್ಚು ಸುದ್ದಿಯಾಗ್ತಿದೆ. ಕೋವಿಡ್ ನಿಂದ ಗುಣಮುಖರಾದವರು ಬ್ಲ್ಯಾಕ್ ಫಂಗಸ್ ಇದ್ಯಾ ಇಲ್ವಾ ಅಂತ ಖಾತ್ರಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಅಂತಾರೆ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯ ಡಾ ಸತ್ಯ ನಾರಾಯಣ ಮೈಸೂರು.

ಗುಣ ಲಕ್ಷಣಗಳು

ಯಾರಿಗೆ ಡಯಾಬಿಟಿಸ್, ಕ್ಯಾನ್ಸರ್ ಇದ್ದು ಕಿಮೋಥೆರಮಿ ಪಡೆಯುವವರು, ಹೆಚ್ಐವಿ ಸೋಂಕಿರುವ ವ್ಯಕ್ತಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತೆ.‌ ಹಾಗೇ ಯಾರಿಗೆ ಸ್ಟಿರಾಯ್ಡ್ ಡೋಸ್ ಹೆಚ್ಚು ಬಳಸಲಾಗುತ್ತೋ ಅಲ್ಲಿ ಈ ಫಂಗಸ್ ಬರುತ್ತೆ.‌ ಈ ಫಂಗಸ್​ನ ಕಪ್ಪು ಬಣ್ಣದಲ್ಲಿ ಇರಲಿದ್ದು, ಕಣ್ಣಿನ ಕೆಳಗೆ, ಮೇಲೆ ನೋವು ಬರುವುದು, ಕೆಂಪು ಊತ ಆಗುವುದು, ಮೂಗು ಕಟ್ಟುವುದು, ಕಣ್ಣಿನ ರೆಪ್ಪೆ ನೋವುಂಟಾಗು ಲಕ್ಷಣ ಕಂಡು ಬರುತ್ತೆ.

ಮ್ಯುಕೋರ್ಮೈಕೋಸಿಸ್ ಕಂಡು ಬಂದರೆ ಪರಿಸ್ಥಿತಿ ಬಹಳ ಕಷ್ಟವಾಗಿ ಇರಲಿದ್ದು, ಟಾಪಿಕಲ್ ಆ್ಯಂಟಿ ಫಂಗಲ್ ಕೆಲಸ ಮಾಡೋದಿಲ್ಲ. ಆಗ ಹೈವೇ ಆ್ಯಂಟಿ ಫಂಗಲ್ ಸೇರಿದಂತೆ ಇತರೆ ಔಷಧ ಕೊಡಬೇಕಾಗುತ್ತೆ. ಡಯಾಬಿಟಿಸ್ ರೋಗಿಗಳಿಗೆ ಅಷ್ಟೇ ಹೆಚ್ಚು ತೊಂದರೆ ಕೊಡ್ತಿತ್ತು. ಆದರೆ ಇದೀಗ ಕೊರೊನಾ‌ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ, ಮ್ಯುಕೋರ್ಮೈಕೋಸಿಸ್ ಫಂಗಸ್ ಇಡೀ ದೇಹದೊಳಗೆ ಆಕ್ರಮಣ ಮಾಡುತ್ತೆ ಅಂತ ತಿಳಿಸಿದರು.

ಸ್ಟಿರಾಯ್ಡ್ ಔಷಧದ ನಿರಾಕರಣೆ ಬೇಡ

ಹೀಗಾಗಿ, ಜನರು ಹೆಚ್ಚು ಸ್ಟೀಮ್ (ಹಬೆ) ತೆಗೆದುಕೊಳ್ಳಬಾರದು. ಒಂದ್ ವೇಳೆ ತೆಗೆದುಕೊಂಡ್ರು, ಶುದ್ದ ನೀರನ್ನ ಬಳಸಿ ಅಂತ ಸಲಹೆ ನೀಡಿದರು. ಮ್ಯುಕೋರ್ಮೈಕೋಸಿಸ್ ಪರಿಸರದಲ್ಲೂ ಇರುತ್ತೆ. ಆದರೆ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಅದನ್ನ ಸದೆಬಡೆದು ಹಿಡಿದುಕೊಂಡಿರುತ್ತೆ.‌ ಸ್ಟಿರಾಯ್ಡ್ ಔಷಧ ತೆಗೆದುಕೊಂಡರೆ ಆದರಿಂದ ಫಂಗಸ್ ಬರುತ್ತೆ ಅಂತ ಭಯಪಟ್ಟು, ಹೆದರಿ ಸೋಂಕಿತರು ಅದನ್ನ ನೀಡಬೇಡಿ ಅಂತ ವೈದ್ಯರಿಗೆ ಹೇಳಬೇಡಿ. ಕೊರೊನಾಗೆ ಸ್ಟಿರಾಯ್ಡ್ ಔಷಧ ನೀಡದೇ ಚಿಕಿತ್ಸೆಗೆ ನೀಡಲು ಆಗೋದಿಲ್ಲ ಅಂತ ವೈದ್ಯರು ತಿಳಿಸಿದರು.

ಬ್ಲ್ಯಾಕ್ ಫಂಗಸ್ ಸಂಬಂಧ ವಿಕ್ರಮ್ ಆಸ್ಪತ್ರೆಯ ವೈದ್ಯರಾಗಿರುವ ಡಾ. ವಾಸುನೇತ್ರ ಕಾಸರಗೋಡು ವಿವರಿಸಿದ್ದಾರೆ. ಸಾಂಕ್ರಾಮಿಕ ಕೋವಿಡ್ ವೈರಸ್ ಇಡೀ ಜಗತ್ತನ್ನೇ ಅಸ್ತವ್ಯಸ್ತಗೊಳಿಸಿದೆ.‌ ಈಗಾಗಲೇ ಕೋವಿಡ್ ನಿಂದಾಗಿ ಶ್ವಾಸಕೋಶದಲ್ಲಿ ನಿಮೋನಿಯಾ, ಉಸಿರಾಟ ಸಮಸ್ಯೆ, ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ, ಸ್ಟೋಕ್ಸ್ , ಕಾರ್ಡಿಯಾಕ್ ಅರೆಸ್ಟ್ ನಂತಹ ಸಮಸ್ಯೆಗಳಿಂದ ರೋಗಿಗಳು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಇವೆಲ್ಲದರ ನಡುವೆ ಇದೀಗ ಹೊಸದಾಗಿ ಮ್ಯುಕೋರ್ಮೈಕೋಸಿಸ್ ಎಂಬ ಫಂಗಸ್ ಇನ್ಫೆಕ್ಷನ್ ಹೆಚ್ಚಾಗ್ತಿದೆ. ಮ್ಯುಕೋ ಫಂಗಸ್ ವಾತಾವರಣದಲ್ಲಿ ಕಂಡು ಬರಲಿದ್ದು, ಕೊಳೆತು ಹೋಗಿರುವ ವಸ್ತುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತೆ. ಹೈಪರ್ ಡಯಾಬಿಟಿಸ್ ಇರುವವರಿಗೆ ಫಂಗಸ್ ಇನ್ಫೆಕ್ಷನ್ ಹೆಚ್ಚಾಗಿ ಕಾಡಲಿದೆ. ಇದು ಶ್ವಾಸಕೋಶದಲ್ಲಿರುವ ಸೆಲ್ಸ್ ಮೇಲೆ ಪ್ರಭಾವ ಬೀರಿ ಹೆಚ್ಚು ಫಂಗಸ್ ಹರಡಲು ದಾರಿಯಾಗುತ್ತೆ. ಹೀಗಾಗಿ, ಎಚ್ಚರಿಕೆಯಿಂದ ಇರುವುದು ಅವಶ್ಯಕ ಅಂತ ವೈದ್ಯರು ಸಲಹೆ ನೀಡಿದದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.