ETV Bharat / city

ಪ್ರತಿ ಜಿಲ್ಲೆಯನ್ನೂ ಕಾಡ್ತಿದೆ Black Fungus: ರಾಜ್ಯದಲ್ಲಿ ಈವರೆಗೆ ಮಹಾಮಾರಿಗೆ ಬಲಿಯಾದವರೆಷ್ಟು?

author img

By

Published : Jul 10, 2021, 12:28 PM IST

ರಾಜ್ಯದಲ್ಲಿ ಈವರೆಗೆ 3,491 ಜನರಲ್ಲಿ Black Fungus​ ಕಾಣಿಸಿಕೊಂಡಿದ್ದು, ಈ ತನಕ 303 ಸೋಂಕಿತರು ಮೃತಪಟ್ಟಿದ್ದಾರೆ‌. ಹಲವು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ.

Black fungus
ಪ್ರತಿ ಜಿಲ್ಲೆಯನ್ನೂ ಕಾಡ್ತಿದೆ ಕಪ್ಪು ಶಿಲಿಂದ್ರ ಸೋಂಕು

ಬೆಂಗಳೂರು: Black Fungus ಸದ್ದಿಲ್ಲದೇ ನಿತ್ಯ ಎರಡಂಕಿ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಕಾಡ್ತಿದೆ. ಪ್ರತಿ ಜಿಲ್ಲೆಯಲ್ಲೂ ಈ ಶಿಲೀಂಧ್ರ ಪತ್ತೆಯಾಗಿದ್ದು, ರಾಜ್ಯದಲ್ಲಿ ಈ ತನಕ 303 ಸೋಂಕಿತರು ಮೃತಪಟ್ಟಿದ್ದಾರೆ‌ ಎಂಬ ಮಾಹಿತಿ ಹೊರಬಿದ್ದಿದೆ.

3,491 ಜನರಲ್ಲಿ ಬ್ಲ್ಯಾಕ್ ಫಂಗಸ್​ ಕಾಣಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ಜನಸಾಮಾನ್ಯರು, ಇದೀಗ ಬ್ಲ್ಯಾಕ್ ಫಂಗಸ್ ಕಾಟವನ್ನೂ ಸಹಿಸಿಕೊಳ್ಳಬೇಕಿದೆ. ಕೋವಿಡ್ ಸೋಂಕಿನ ಕುರಿತೇ ಇನ್ನೂ ಸರಿಯಾಗಿ ತಿಳಿಯಲು ಆಗದೇ ಇರುವಾಗ, ಇದೀಗ ಬ್ಲ್ಯಾಕ್ ಫಂಗಸ್ ಬಗ್ಗೆ ಜನ ಚಿಂತಿಸುವಂತಾಗಿದೆ.

ಕೋವಿಡ್ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಳೆದುಕೊಂಡವರೇ ಟಾರ್ಗೆಟ್ ಆಗ್ತಿದ್ದಾರೆ.‌ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆ ಕಾಡಲಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆಯದೇ ಇದ್ದರೆ ನಂತರದ ದಿನದಲ್ಲಿ ಮೆದುಳಿಗೆ ಸೋಂಕು ವ್ಯಾಪ್ತಿಸಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇರಲಿದೆ. ಹಲವರಿಗೆ ಕೊರೊನಾ ಸೋಂಕು ಬಂದು ಹೋಗಿರುವುದೇ ತಿಳಿಯದೇ, ಆ್ಯಂಟಿಬಾಡಿ ಟೆಸ್ಟ್ ಮೊರೆ ಹೋಗ್ತಿದ್ದಾರೆ. ಹೀಗೆ, ಕೊರೊನಾ ಸೋಂಕು ಬಂದು ಹೋಗಿರುವವರಲ್ಲೂ ಬ್ಲ್ಯಾಕ್ ಫಂಗಸ್ ಕಾಡುತ್ತಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿದೆ.

ಹಲವು ಜಿಲ್ಲೆಗಳಲ್ಲಿ 100ರ ಗಡಿದಾಟಿದ ಕರಿ ಫಂಗಸ್

ರಾಜಧಾನಿ ಬೆಂಗಳೂರಿನಲ್ಲಿ ಸಾವಿರ ಗಡಿ ದಾಟಿದೆ. ಈ ತನಕ 1,109 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, 104 ಜನರು ಮೃತಪಟ್ಟಿದ್ದಾರೆ. ಬೌರಿಂಗ್, ವಿಕ್ಟೋರಿಯಾ, ಕೆ‌.ಸಿ. ಜನರಲ್ ಹಾಗೂ ಮಿಂಟೋದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.‌

ಬಾಗಲಕೋಟೆ- 126
ಬಳ್ಳಾರಿ- 138
ಬೆಳಗಾವಿ- 159
ಚಿತ್ರದುರ್ಗ- 143
ದಾವಣಗೆರೆ- 117
ಧಾರವಾಡ- 279
ಕಲರ್ಬುಗಿ- 196
ಮೈಸೂರು- 128
ರಾಯಚೂರು- 125
ವಿಜಯಪುರ- 208
ಕೋಲಾರ- 107

ಕಡಿಮೆ ಸೋಂಕಿರುವ ಜಿಲ್ಲೆಗಳು
ದಕ್ಷಿಣ ಕನ್ನಡ- 95
ಬೆಂಗಳೂರು ಗ್ರಾಮಾಂತರ- 65
ಗದಗ- 73
ಹಾವೇರಿ-65
ಶಿವಮೊಗ್ಗ- 56
ತುಮಕೂರು- 46
ಕೊಪ್ಪಳ- 47
ಹಾಸನ-45
ಬೀದರ್- 33
ಉಡುಪಿ- 30
ಮಂಡ್ಯ- 23
ಚಿಕ್ಕಬಳ್ಳಾಪುರ- 24
ಚಾಮರಾಜನಗರ- 12
ಯಾದಗಿರಿ- 3
ಉತ್ತರಕನ್ನಡ- 8
ರಾಮನಗರ- 9
ಕೊಡುಗು- 1
ಚಿಕ್ಕಮಗಳೂರು- 6

ETV Bharat Logo

Copyright © 2024 Ushodaya Enterprises Pvt. Ltd., All Rights Reserved.