ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಆತಂಕ ಕಡಿಮೆ ಆಗ್ತಿದೆ ಅಂತ ಅಂದುಕೊಳ್ಳುವಾಗಲೇ ಕಪ್ಪು ಶಿಲೀಂಧ್ರ(Black Fungus) ಭೀತಿ ಹೆಚ್ಚುತ್ತಲೇ ಇದೆ. ಕೋವಿಡ್ ಎರಡನೇ ಅಲೆಯ ತೀವ್ರತೆ ನಿಧಾನವಾಗಿ ಇಳಿಕೆ ಆದರೂ ಬ್ಲ್ಯಾಕ್ ಫಂಗಸ್ ಕಾಟ ಮಾತ್ರ ತಗ್ಗಿಲ್ಲ. ಕಳೆದ 10 ದಿನಗಳಲ್ಲಿ 100ಕ್ಕೂ ಹೆಚ್ಚು ಸೋಂಕಿತರು ಫಂಗಸ್ಗೆ ಬಲಿಯಾಗಿದ್ದಾರೆ.
ಕೋವಿಡ್ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಳೆದುಕೊಂಡವರು, ಮಧುಮೇಹ ರೋಗಿಗಳೇ ಕರಿ ಮಾರಿಗೆ ಹೆಚ್ಚು ಟಾರ್ಗೆಟ್ ಆಗ್ತಿದ್ದಾರೆ. ಕಪ್ಪು ಶಿಲೀಂದ್ರ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆ ಕಾಡಲಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆಯದೇ ಇದ್ದರೆ ನಂತರದ ದಿನದಲ್ಲಿ ಮೆದುಳಿಗೆ ಸೋಂಕು ವ್ಯಾಪಿಸಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇರಲಿದೆ. ಕೊರೊನಾ ಸೋಂಕು ಬಂದಿರುವುದೇ ತಿಳಿಯದವರಲ್ಲೂ ಬ್ಲ್ಯಾಕ್ ಫಂಗಸ್ ಕಾಡುತ್ತಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿದೆ.
ರಾಜ್ಯದಲ್ಲಿ ಈ ತನಕ 3,588 ಮಂದಿಗೆ ಫಂಗಸ್ ತಗುಲಿದ್ದು, 313 ಸೋಂಕಿತರು ಬಲಿಯಾಗಿದ್ದಾರೆ. 12 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ನೂರಾರ ಗಡಿದಾಟಿದ್ದು, ಗುರುತಿಸಿರುವ ಆಸ್ಪತ್ರೆಯಲ್ಲಿ ಫಂಗಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು, ಧಾರವಾಡ, ವಿಜಯಪುರದಲ್ಲಿ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆಯಾಗಿದ್ದಾರೆ. ರಾಜಧಾನಿ ಬೆಂಗಳೂರು ಒಂದರಲ್ಲೇ 1,143 ಜನರಲ್ಲಿ ಫಂಗಸ್ ಪತ್ತೆಯಾಗಿದ್ದು, 108 ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ರೇಣುಕಾಚಾರ್ಯ ತಂಡದ ದೆಹಲಿ ಪ್ರವಾಸಕ್ಕೆ ಬಿಎಸ್ವೈ ಬ್ರೇಕ್: ಹೈಕಮಾಂಡ್ ಭೇಟಿ ಮಾಡದಂತೆ ಸೂಚನೆ