ಬೆಂಗಳೂರು : ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊಹಮ್ಮದ್ ನಲಪಾಡ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. 'ಆರು ವರ್ಷಗಳಿಂದ ಪಕ್ಷದಲ್ಲಿ ಉಚ್ಛಾಟನೆಗೊಂಡಿದ್ದ ವ್ಯಕ್ತಿ ನಾಲ್ಕೇ ವರ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ' ಎಂದು ಟ್ವೀಟ್ನಲ್ಲಿ ವ್ಯಂಗ್ಯ ಮಾಡಲಾಗಿದೆ.
ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ, ಮಗದೊಮ್ಮೆ ಅಮಾಯಕರ ಗುರುತು ಸಿಗದಂತೆ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ. ದೇಶಕ್ಕೆ ಕಾಂಗ್ರೆಸ್ ಪಕ್ಷ ಯಾವ ಸಂದೇಶ ನೀಡುತ್ತಿದೆ? ಎಂದು ಬಿಜೆಪಿ ಟ್ವೀಟ್ನಲ್ಲಿ ಪ್ರಶ್ನಿಸಿದೆ.
-
ರೌಡಿ ಹಿನ್ನೆಲೆಯ ವ್ಯಕ್ತಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ಯಾವ ಸಂದೇಶ ನೀಡುತ್ತಿದೆ? ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!?#AntiSocialKarnatakaCongress pic.twitter.com/wQTVBcrDHK
— BJP Karnataka (@BJP4Karnataka) February 11, 2022 " class="align-text-top noRightClick twitterSection" data="
">ರೌಡಿ ಹಿನ್ನೆಲೆಯ ವ್ಯಕ್ತಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ಯಾವ ಸಂದೇಶ ನೀಡುತ್ತಿದೆ? ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!?#AntiSocialKarnatakaCongress pic.twitter.com/wQTVBcrDHK
— BJP Karnataka (@BJP4Karnataka) February 11, 2022ರೌಡಿ ಹಿನ್ನೆಲೆಯ ವ್ಯಕ್ತಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ಯಾವ ಸಂದೇಶ ನೀಡುತ್ತಿದೆ? ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!?#AntiSocialKarnatakaCongress pic.twitter.com/wQTVBcrDHK
— BJP Karnataka (@BJP4Karnataka) February 11, 2022
ಗುರುವಿಗೆ ತಕ್ಕ ಶಿಷ್ಯ. ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು ಎಂದು ಬಿಜೆಪಿ ಟ್ವೀಟಿಸಿದೆ.
'ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಆತನ ಸಾಧನೆಗಳು' ಎಂಬ ಶೀರ್ಷಿಕೆಯಡಿಯಲ್ಲಿ ಕೆಲವು ಆರೋಪಗಳನ್ನು ಮಾಡಲಾಗಿದೆ. ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ?, ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಇದೇ ಅರ್ಹತೆಯೇ? ಎಂದು ಪ್ರಶ್ನೆ ಮಾಡಲಾಗಿದೆ.
ಮತ್ತೊಂದು ಟ್ವೀಟ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಮೊಹಮ್ಮದ್ ನಲಪಾಡ್ ವಿರುದ್ಧ ಕೆಲವೊಂದು ಆರೋಪಗಳನ್ನು ಆ ವಿಡಿಯೋದಲ್ಲಿ ಮಾಡಲಾಗಿದೆ.