ETV Bharat / city

ಇಟಲಿ ಮೇಡ್​ ಲಸಿಕೆಗಾಗಿ ಕಾಯಬೇಡಿ; ರಾಹುಲ್​ ಗಾಂಧಿಗೆ ಬಿಜೆಪಿ ಟಾಂಗ್

ಚುನಾವಣೆಗಳಲ್ಲಿ ಸೋತು ನಾಮಾವಶೇಷವಾಗಿರುವ ಕಾಂಗ್ರೆಸ್ ಈಗ ಸಂಕಷ್ಟದ ಪರಿಸ್ಥಿತಿಯನ್ನು ಲಾಭದಾಯಕವಾಗಿಸಿಕೊಳ್ಳಲು ಹವಣಿಸುತ್ತಿದೆ. ಚುನಾವಣಾ ಕಣದಿಂದ ಪಲಾಯನ ಮಾಡಿದ ರಾಹುಲ್ ಗಾಂಧಿ ಎಲ್ಲಿದ್ದಾರೆ? ಇಟಲಿ‌ ಮೇಡ್ ಲಸಿಕೆಗಾಗಿ ಕಾಯುವ ಬದಲು ಭಾರತೀಯ ಮೂಲದ ಲಸಿಕೆ ಹಾಕಿಸಿಕೊಂಡು ಸ್ವಸ್ಥವಾಗಿರಿ ಎಂದು ಕಾಂಗ್ರೆಸ್ಸಿಗೆ ಬಿಜೆಪಿ ಟಾಂಗ್ ನೀಡಿದೆ.

Taking a Vaccine Without fail: BJP appe to people

author img

By

Published : May 14, 2021, 6:57 PM IST

ಬೆಂಗಳೂರು: ರಾಜ್ಯ ಬಿಜೆಪಿ ಘಟಕವು ಕಾಂಗ್ರೆಸ್ ಹಾಗೂ ಅದರ ರಾಷ್ಟ್ರೀಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, "ಆತ್ಮೀಯರಾದ ರಾಹುಲ್ ಗಾಂಧಿ ಅವರೇ, ನಿಮ್ಮ ವ್ಯವಸ್ಥಿತ ಅಪಪ್ರಚಾರದ ಮಧ್ಯೆಯೂ 45 ವರ್ಷ ಮೇಲ್ಪಟ್ಟವರಿಗೆ ನಿರಾಂತಕವಾಗಿ ಲಸಿಕೆ ನೀಡಲಾಗುತ್ತಿದೆ. ಭೂಗತರಾಗದೇ ಲಸಿಕೆ ತೆಗೆದುಕೊಳ್ಳುವುದು ನಿಮ್ಮ ಮನೋದೈಹಿಕ ಆರೋಗ್ಯ ದೃಷ್ಟಿಯಿಂದ ಕ್ಷೇಮ. ನಕಾರಾತ್ಮಕ ಭಾವನೆ ಬಿತ್ತುವುದನ್ನು ಬಿಟ್ಟು ದೇಶದ ಜೊತೆಗೆ ಎಂದು ನಿಲ್ಲುತ್ತೀರಿ?" ಎಂದು ಪ್ರಶ್ನಿಸಿದೆ.

ಅಮೇಥಿಯಿಂದ ಪಲಾಯನ ಮಾಡಿದ ವಯನಾಡಿನ ಸಂಸದ ರಾಹುಲ್ ಗಾಂಧಿ, ಸೆಂಟ್ರಲ್ ವಿಸ್ಟಾ ಬಗ್ಗೆ ಮಾತನಾಡುವ ನೀವು, ನಿಮ್ಮ ಒಂದು ಕುಟುಂಬದವರ ಹೆಸರಿನಲ್ಲಿರುವ ಸಮಾಧಿ, ಪುತ್ಥಳಿಗಳ ಬಗ್ಗೆ ಮಾತನಾಡುವಿರಾ? ಮಹಾರಾಷ್ಟ್ರದಲ್ಲಿರುವ ನಿಮ್ಮದೇ ಸರ್ಕಾರ ನಿರ್ಮಿಸುತ್ತಿರುವ ಶಾಸಕರ ಭವನದ ಬಗ್ಗೆ ನೀವೇಕೆ ತುಟಿ ಬಿಚ್ಚುತ್ತಿಲ್ಲ? ಚುನಾವಣೆಗಳಲ್ಲಿ ಸೋತು ನಾಮಾವಶೇಷವಾಗಿರುವ ಕಾಂಗ್ರೆಸ್ ಈಗ ಸಂಕಷ್ಟದ ಪರಿಸ್ಥಿತಿಯನ್ನು ಲಾಭದಾಯಕವಾಗಿಸಿಕೊಳ್ಳಲು ಹವಣಿಸುತ್ತಿದೆ. ಚುನಾವಣಾ ಕಣದಿಂದ ಪಲಾಯನ ಮಾಡಿದ ರಾಹುಲ್ ಗಾಂಧಿ ಎಲ್ಲಿದ್ದಾರೆ? ಇಟಲಿ‌ ಮೇಡ್ ಲಸಿಕೆಗಾಗಿ ಕಾಯುವ ಬದಲು ಭಾರತೀಯ ಮೂಲದ ಲಸಿಕೆ ಹಾಕಿಸಿಕೊಂಡು ಸ್ವಸ್ಥವಾಗಿರಿ ಎಂದು ಬಿಜೆಪಿ ಸಲಹೆ ನೀಡಿದೆ.

ಜನ ವಿರೋಧಿ ಕಾಂಗ್ರೆಸ್

ಕಾಂಗ್ರೆಸ್ ವಿಚಾರದಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಡಿಕೆ ಶಿವಕುಮಾರ್ ಅವರೇ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ. ಡಿಕೆ ಶಿವಕುಮಾರ್ ಅವರೇ, ಉಚಿತ ಲಸಿಕೆ‌ ನೀಡಲು ನಿಮ್ಮ‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ? ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೆ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ? ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು, ಗೋವಾದಿಂದ ಇಟಲಿಗೋ? ಎಂದು ಪ್ರಶ್ನಿಸಿದೆ.

ಸಂಕಷ್ಟದ ಸಮಯದಲ್ಲಿ ಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಸುಮ್ಮನಿದ್ದು ಬಿಡಿ. ಪೊಳ್ಳು ಆರೋಪ ಮಾಡುವುದು ಬಿಟ್ಟು ಸುಮ್ಮನಿರುವಿರಾ? ಸರ್ಕಾರಕ್ಕೆ ಸವಾಲೆಸೆಯುವ ಶಿವಕುಮಾರ್ ಅವರೇ, ರಾಜೀವ್ ಗಾಂಧಿ ಫೌಂಡೇಶನ್ ಖಾತೆಯಲ್ಲಿ ಲಕ್ಷಾಂತರ ಕೋಟಿ ಹಣ ಕೊಳೆಯುತ್ತಿದೆ. ನಿಮ್ಮ ಆದಾಯಕ್ಕೆ ಮೀರಿದ ಆಸ್ತಿಯ ತನಿಖೆ ನಡೆಯುತ್ತಿದೆ. ಇದ್ಯಾವುದೂ ನ್ಯಾಯ ಮಾರ್ಗದ ಗಳಿಕೆಯಲ್ಲ. ಸಹಾಯದ ಹೆಸರಿನಲ್ಲೂ ಕಪ್ಪು ಬಿಳುಪು ದಂಧೆಗೆ ಇಳಿದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

"ಉಚಿತ ಲಸಿಕೆಗೆ ನಾವು ಸಹಾಯ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದಾಗಲೇ, ಅತ್ತೆಯ ದುಡ್ಡನ್ನು ಅಳಿಯನಿಗೆ ದಾನ ಮಾಡುವ ಚಿಲ್ಲರೆ ಯೋಜನೆ ರೂಪಿಸುತ್ತಿರಬಹುದೆಂಬ ಶಂಕೆಯಿತ್ತು. ಈಗ 100 ಕೋಟಿ ನೀಡುವ ಘೋಷಣೆ ಮಾಡಿದ್ದಾರೆ. ಇದು ಜನರ ದಾರಿ ತಪ್ಪಿಸುವ ಕಾಂಗ್ರೆಸ್ ಪಕ್ಷದ ಮತ್ತೊಂದು ಯೋಜನೆ ಅಷ್ಟೇ! ಕೆಪಿಸಿಸಿ ಕಚೇರಿ ಕಟ್ಟುವುದಕ್ಕೆ ಪಕ್ಷದ ಶಾಸಕರಿಂದ ಜಿಲ್ಲಾಧ್ಯಕ್ಷರವರೆಗೆ ಚಂದಾ ಎತ್ತಲಾಗಿತ್ತು. ನೆಹರು ಪ್ರತಿಮೆ, ಇಂದಿರಾ ಪುತ್ಥಳಿ, ರಾಜೀವ್ ಶಿಲಾಫಲಕ, ಹತ್ತಾರು ಸಮಾಧಿಗೆ ವ್ಯಯಿಸಿದ ಹಣವನ್ನು ಕೋವಿಡ್ ನಿರ್ವಹಣೆಗೆ ದಾನ ಮಾಡಬಹುದಿತ್ತಲ್ಲವೇ ಡಿಕೆ ಶಿವಕುಮಾರ್? ನೂತನ ಸಂಸತ್ ಭವನದ ಮೇಲೇಕೆ ಕಣ್ಣು?" ಎಂದು ಬಿಜೆಪಿ ಕೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.