ETV Bharat / city

Bitcoin: ತಾರಕಕ್ಕೇರಿದ ಬಿಜೆಪಿ, ಕಾಂಗ್ರೆಸ್ ಟ್ವೀಟ್ ವಾರ್: ಸಿದ್ದು ಪುತ್ರನ ಫೋಟೋ ಪ್ರಕಟಿಸಿ ಸರಣಿ ಪ್ರಶ್ನೆ ಕೇಳಿದ ಕೇಸರಿ ಪಡೆ! - ಬಿಜೆಪಿ ಕಾಂಗ್ರೆಸ್​ ಮಧ್ಯೆ ಟ್ವೀಟ್​ ವಾರ್​

ಬಿಟ್​ಕಾಯಿನ್(Bitcoin)​ ಕುರಿತು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಟ್​ಕಾಯಿನ್​ ಪ್ರಕರಣದ ಆರೋಪಿ ಶ್ರೀಕಿಯ ಆಪ್ತ ಸ್ನೇಹಿತರ ಜೊತೆ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಇರುವ ಫೋಟೋವನ್ನು ಬಿಜೆಪಿ ಟ್ವೀಟ್​ ಮಾಡಿದೆ.

bjp series photo tweet
ಬಿಜೆಪಿ- ಕಾಂಗ್ರೆಸ್ ನಡುವೆ Bitcoin ಟ್ವೀಟ್ ವಾರ್
author img

By

Published : Nov 18, 2021, 2:50 PM IST

Updated : Nov 18, 2021, 3:12 PM IST

ಬೆಂಗಳೂರು: ಬಿಟ್‌ಕಾಯಿನ್ ಹಗರಣದ ಕುರಿತು ಬಿಜೆಪಿ-ಕಾಂಗ್ರೆಸ್ ನಡುವೆ ಟ್ವೀಟ್ ವಾರ್ (Tweet War continues between Congress and BJP on Bitcoin) ತಾರಕಕ್ಕೇರಿದೆ.

ಬಿಟ್​ಕಾಯಿನ್​ ಕುರಿತು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಟ್​ಕಾಯಿನ್​ ಪ್ರಕರಣದ ಆರೋಪಿ ಶ್ರೀಕಿಯ ಆಪ್ತ ಸ್ನೇಹಿತರ ಜೊತೆ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಇರುವ ಫೋಟೋವನ್ನು ಬಿಜೆಪಿ ಟ್ವೀಟ್​ ಮಾಡಿದೆ.

  • ಮಾನ್ಯ #Bitcoinಬುರುಡೆರಾಮಯ್ಯ,

    ನಿಮ್ಮ ಅವಧಿಯಲ್ಲಿ ನಡೆದ ಈ ಹಗರಣವನ್ನು ಮುಚ್ಚಿ ಹಾಕುವುದು ನಿಮಗೆ ತೀರಾ ಅನಿವಾರ್ಯವಾಗಿತ್ತು.

    ಅಪ್ರಿಯವಾದ ಸತ್ಯ ಹೇಳುತ್ತೇವೆ, ಇಲ್ಲಿ ನಿಮ್ಮ ಅತ್ಯಾಪ್ತರೇ ಇದ್ದರು ಎಂಬ ಅನುಮಾನಕ್ಕೆ ಈ ಚಿತ್ರ ಪುಷ್ಠಿ ನೀಡುತ್ತಿದೆ.

    ಸತ್ಯ ಅನಾವರಣವಾಗುವ ಭಯಕ್ಕೆ ನೀವು #UTurn ತೆಗೆದುಕೊಳ್ಳುತ್ತಿದ್ದೀರಿ ಅಲ್ಲವೇ?

    6/n pic.twitter.com/R6QBNqgrJj

    — BJP Karnataka (@BJP4Karnataka) November 18, 2021 " class="align-text-top noRightClick twitterSection" data=" ">

ಸಿದ್ದರಾಮಯ್ಯ ಅವರೇ, ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಬಗ್ಗೆ ತಾವು ಪ್ರಸ್ತಾಪಿಸಿದ್ದೀರಿ. ಈಗ ನಮಗೆ ಒಂದಿಷ್ಟು ಪ್ರಶ್ನೆಗಳಿವೆ. ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಉತ್ತರಿಸಿ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

  • ಮಾನ್ಯ #Bitcoinಬುರುಡೆರಾಮಯ್ಯ ಅವರೇ,

    ಈ ಚಿತ್ರದಲ್ಲಿರುವ ಸುನೀಶ್ ಹೆಗ್ಡೆ & ಹೇಮಂತ್ ಜೊತೆಗಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ.

    ಆ ನಂಬಿಕೆ ನಿಜವೇ ಆದರೆ #Bitcoin ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು.

    ಸಿದ್ದರಾಮಯ್ಯನವರೇ, ಆ ಬಗ್ಗೆ ನೀವು ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ?

    3/n pic.twitter.com/4VzMouJx5E

ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಜೊತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ & ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ. ಇಲ್ಲಿ ನೋಡಿ, ಸುನೀಶ್ ಹೆಗ್ಡೆ & ಹೇಮಂತ್ ಯಾರ ಜೊತೆಗಿದ್ದಾರೆ. ಒಮ್ಮೆ ನೋಡಿ ಎಂದು ಬಿಜೆಪಿ ಫೋಟೋಗಳನ್ನು ಪ್ರಕಟಿಸಿ ಟ್ವೀಟ್ ಮಾಡಿದೆ.

ಬಿಟ್ ಕಾಯಿನ್ ಬುರುಡೆರಾಮಯ್ಯ ಅವರೇ, ಈ ಚಿತ್ರದಲ್ಲಿರುವ ಸುನೀಶ್ ಹೆಗ್ಡೆ & ಹೇಮಂತ್ ಜೊತೆಗಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ನಿಜವೇ ಆದರೆ, ಬಿಟ್ ಕಾಯಿನ್ ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು. ಆ ಬಗ್ಗೆ ನೀವು ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ? ಎಂದು ಪ್ರಶ್ನಿಸಿದೆ.

ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಅವ್ಯವಹಾರ ಬಹಿರಂಗವಾಗಿದ್ದು ನಿಮ್ಮ ಕಾಲದಲ್ಲಿ. ಒಂದೆರಡು ಕಡೆ ದಾಳಿ ನಡೆದರೂ ತನಿಖೆ ಹಠಾತ್ ಸ್ಥಗಿತಗೊಂಡಿತು. ಬೆಂಗಳೂರಿನ ಪ್ರತಿಷ್ಠಿತ‌ ಹೊಟೇಲ್‌ನಲ್ಲಿ ನಡೆಯುತ್ತಿದ್ದ ಹುಕ್ಕಾ ಬಾರ್ ಆ ಎಲ್ಲ ಚಟುವಟಿಕೆಯ ಕೇಂದ್ರವಾಗಿತ್ತು. ಸುನೀಶ್ ಹೆಗ್ಡೆ, ಹೇಮಂತ್ ಮುದ್ದಪ್ಪ, ಶ್ರೀಕಿಯಂಥವರು ಆಗ ನಿಮ್ಮ ಮನೆಯ ಸುತ್ತಮುತ್ತಲೂ ಓಡಾಡಿರಲೂ ಬಹುದಲ್ಲವೇ? ಎಂದು ಪ್ರಶ್ನಿಸಿದೆ.

ನಿಮ್ಮ ಅವಧಿಯಲ್ಲಿ ನಡೆದ ಈ ಹಗರಣವನ್ನು ಮುಚ್ಚಿ ಹಾಕುವುದು ನಿಮಗೆ ತೀರಾ ಅನಿವಾರ್ಯವಾಗಿತ್ತು. ಅಪ್ರಿಯವಾದ ಸತ್ಯ ಹೇಳುತ್ತೇವೆ, ಇಲ್ಲಿ ನಿಮ್ಮ ಅತ್ಯಾಪ್ತರೇ ಇದ್ದರು ಎಂಬ ಅನುಮಾನಕ್ಕೆ ಈ ಚಿತ್ರ ಪುಷ್ಠಿ ನೀಡುತ್ತಿದೆ. ಸತ್ಯ ಅನಾವರಣವಾಗುವ ಭಯಕ್ಕೆ ನೀವು ಯು ಟರ್ನ್ ತೆಗೆದುಕೊಳ್ಳುತ್ತಿದ್ದೀರಿ ಅಲ್ಲವೇ? ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಆದರೆ ಈಗ ದಾಖಲೆಯೇ ಇಲ್ಲ ಎನ್ನುತ್ತಿದ್ದಾರೆ. ನಿಮ್ಮ ಅತ್ಯಾಪ್ತರ ವಹಿವಾಟು ನಿಮ್ಮನ್ನು ಅಸಹಾಯಕನನ್ನಾಗಿ ಮಾಡಿದೆಯೇ? ಬಿಟ್ ಕಾಯಿನ್ ಪ್ರಭಾ ವಲಯ ನಿಮ್ಮನ್ನೇ ಸುತ್ತಿಕೊಳ್ಳಬಹುದೆಂಬ ಭಯ ಕಾಡುತ್ತಿದೆಯೇ? ಎಂದು ಪ್ರಶ್ನಿಸಿದೆ.

ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ತಮ್ಮ ನಾಯಕತ್ವ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬಿಟ್ ಕಾಯಿನ್ ಆಸರೆಯಾಗಿದೆ. ಆದರೆ, ಒಂದು ಚಿತ್ರ ಸಾವಿರ ಕತೆ ಹೇಳುತ್ತದೆ. ಈ ಚಿತ್ರದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಎಂದು ಸಿದ್ದು ಪುತ್ರ ಇರುವ ಫೋಟೋ ಪ್ರಕಟಿಸಿ ಟ್ವೀಟ್ ಮಾಡಿದೆ.

Last Updated : Nov 18, 2021, 3:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.